ಆಸ್ಟ್ರೇಲಿಯಾ: ಬೋಂಡಿ ಬೀಚ್‌ನಲ್ಲಿ ಭಯೋತ್ಪಾದಕರ ದಾಳಿಗೆ 16 ಮಂದಿ ಮೃತ್ಯು; ಹತ್ಯೆಗೈದ ಬಂದೂಕುಧಾರಿಗಳ ಗುರುತು ಪತ್ತೆ!

ಸಿಡ್ನಿ: ಇಲ್ಲಿನ ಬೋಂಡಿ ಬೀಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 16 ಕ್ಕೆ ಏರಿದೆ ಎಂದು ಆಸ್ಟ್ರೇಲಿಯಾದ ಪೊಲೀಸರು ಸೋಮವಾರ ದೃಢಪಡಿಸಿದ್ದಾರೆ. ತನಿಖಾಧಿಕಾರಿಗಳು ಇಬ್ಬರು ಬಂದೂಕುಧಾರಿಗಳನ್ನು ತಂದೆ ಮತ್ತು ಮಗ ಎಂದು ಗುರುತಿಸಿದ್ದಾರೆ. ಬೇರೆ ಯಾವುದೇ ದಾಳಿಕೋರರು ಭಾಗಿಯಾಗಿಲ್ಲ ಎಂದು ಖಚಿತಪಡಿಸಿದ್ದಾರೆ. ಆಚರಣೆಯ ಸಮಯದಲ್ಲಿ ಸಿಡ್ನಿಯ ಯಹೂದಿ ಸಮುದಾಯದ ಸದಸ್ಯರನ್ನು ಗುರಿಯಾಗಿಸಿಕೊಂಡು ನಡೆದ ಗುಂಡಿನ ದಾಳಿಯನ್ನು ಅಧಿಕೃತವಾಗಿ ಭಯೋತ್ಪಾದಕ ದಾಳಿ ಎಂದು ವರ್ಗೀಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನ್ಯೂ ಸೌತ್ ವೇಲ್ಸ್ ಪೊಲೀಸ್ ಆಯುಕ್ತ ಮಾಲ್ […]

ಕೋಟ: ಯುವಕರ ನಡುವೆ ಹೊಡೆದಾಟ -ಓರ್ವ ಸಾವು, ನಾಲ್ವರ ಬಂಧನ

ಉಡುಪಿ: ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಹೊಡೆದಾಟ ನಡೆದು ಓರ್ವ ಸಾವನ್ನಪ್ಪಿದ ಘಟನೆ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಪಡುಕರೆಯ ಐದು ಸೆಂಟ್ ಬಳಿ ಭಾನುವಾರ ತಡರಾತ್ರಿ ಸಂಭವಿಸಿದೆ.ಮೃತನನ್ನು ಪಡುಕರೆ ಸಂತೋಷ್ ಮೊಗವೀರ (30) ಎಂದು ಗುರುತಿಸಲಾಗಿದೆ. ಶಬರಿಮಲೆಗೆ ಹೋಗಿ ಬಂದಿದ್ದ ಯುವಕರು ಭಾನುವಾರ ರಾತ್ರಿ ಎಣ್ಣೆ ಪಾರ್ಟಿ ಮಾಡಿ ಕ್ಷುಲ್ಲಕ ವಿಚಾರಕ್ಕೆ ಹೊಡೆದಾಡಿಕೊಂಡಿದ್ದಾರೆ. ಸಂತೋಷ್ ಮೊಗವೀರನಿಗೆ ಮಾರಣಾಂತಿಕ ಹಲ್ಲೆಯಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯರ ಸಹಕಾರದಿಂದ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ […]

ಶ್ರವಣ ದೋಷಗಳಿಗಿನ್ನು ಗುಡ್ ಬೈ ಅನ್ನಿ: ಉಡುಪಿಯ ಸ್ಪೀಚ್ & ಹೇರಿಂಗ್ ಕೇರ್ ಸೆಂಟರ್ ನಲ್ಲಿದೆ ನಿಮ್ಮೆಲ್ಲಾ ಶ್ರವಣ ದೋಷಗಳಿಗೆ ಪರಿಹಾರ

ಶ್ರವಣ ಸಮಸ್ಯೆಗಳು ಈ ಆಧುನಿಕ ಕಾಲದಲ್ಲಿ ಜಾಸ್ತಿಯಾಗುತ್ತಿದೆ. ಮಂದವಾಗಿ ಕಿವಿ ಕೇಳುವುದು, ಯಾರೋ ಮಾತಾಡುವಾಗ ಸರಿಯಾಗಿ ಕೇಳದೇ ಇರುವುದು ಇಂತಹ ಸಣ್ಣಪುಟ್ಟ ಸಮಸ್ಯೆಗಳೇ ಕೊನೆಗೆ ದೊಡ್ಡದ್ದಾಗಿ ಬೆಳೆದು ಮಾನಸಿಕ ಖಿನ್ನತೆಗೆ ಕಾರಣವಾಗುತ್ತದೆ. ಅದಕ್ಕೋಸ್ಕರವೇ ಉಡುಪಿಯ ಸ್ಪೀಚ್ & ಹೇರಿಂಗ್ ಕೇರ್ ಸೆಂಟರ್ ಇಂತಹ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡುತ್ತದೆ. ಯಾವೆಲ್ಲಾ ಸಮಸ್ಯೆಗಳಿಗೆ ಪರಿಹಾರ? ಪದಗಳನ್ನು ಪುನರಾವರ್ತಿಸಲು ನೀವು ಆಗಾಗ್ಗೆ ಕೇಳುವುದುನಿಮ್ಮ ಕಿವಿಯಲ್ಲಿ ಯಾವಾಗಲೂ ಶಬ್ದವು ಧ್ವನಿಸುತ್ತಿರುವುದುನಿಮ್ಮ ಶ್ರವಣ ಸಮಸ್ಯೆಯೂ ಹೊಸ ಜನರನ್ನು ಭೇಟಿಯಾದಾಗ ನೀವು ಮುಜುಗರ ಕೊಳ್ಳಗಾಗುವಂತೆ […]

ಉಡುಪಿ: ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ, ಗಣಿಗಾರಿಕೆ ತಡೆಗೆ 29 ಚೆಕ್‌ಪೋಸ್ಟ್‌ಗಳು; ವಾಹನಗಳ ಪರಿಶೀಲನೆ, ರೂ.3,08,710 ದಂಡ.

ಉಡುಪಿ: ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ಅಕ್ರಮ ಗಣಿಗಾರಿಕೆ ತಡೆಗಟ್ಟುವ ಉದ್ದೇಶದಿಂದ ಪೊಲೀಸ್‌ ಇಲಾಖೆ ಒಟ್ಟು 29 ಚೆಕ್‌ಪೋಸ್ಟ್‌ಗಳನ್ನು ಕಾರ್ಯಾಚರಣೆಗೆ ಇಡಲಾಗಿದೆ. ಹಗಲು–ರಾತ್ರಿ ಪಾಳಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ, ಮರಳು, ಕೆಂಪುಕಲ್ಲು, ಶಿಲೆಕಲ್ಲು ಹಾಗೂ ಎಂ–ಸ್ಯಾಂಡ್‌ ಸಾಗಾಟ ನಡೆಸುವ ಎಲ್ಲಾ ವಾಹನಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತಿದೆ. ದಿನಾಂಕ 06-12-2025ರಿಂದ ಇದುವರೆಗೆ 3,966 ವಾಹನಗಳನ್ನು ತಪಾಸಣೆ ನಡೆಸಲಾಗಿದ್ದು, ಸರ್ಕಾರಕ್ಕೆ ರಾಯಧನ ಪಾವತಿಸದೇ ಹಾಗೂ ಯಾವುದೇ ಪರವಾನಿಗೆ ಇಲ್ಲದೆ ಸಾಗಾಟ ನಡೆಸುತ್ತಿದ್ದ 11 ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಮಣಿಪಾಲ […]

ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿ: ಕ್ರಿಸ್ಮಸ್, ಹೊಸ ವರ್ಷಕ್ಕೆ ವಿಶೇಷ ರೈಲುಗಳ ಸಂಚಾರ.

ಬೆಂಗಳೂರು: ಕ್ರಿಸ್‌ಮಸ್ ಹಾಗೂ ಹೊಸ ವರ್ಷಕ್ಕೆ ಊರಿಗೆ ಹೊರಟ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿ ನೀಡಿದ್ದು ಸೌತ್ ವೆಸ್ಟರ್ನ್ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ವ್ಯವಸ್ಥೆ ಮಾಡಿದೆ. ಹುಬ್ಬಳ್ಳಿ, ಬೆಂಗಳೂರು ಮತ್ತು ವಿಜಯಪುರವನ್ನು ಸಂಪರ್ಕಿಸುವ ವಿಶೇಷ ರೈಲು ಸಂಚಾರ ನಡೆಸಲಿದೆ. ಕ್ರಿಸ್ಮಸ್​​ ಹಾಗೂ ಹೊಸ ವರ್ಷದ ಸಂದರ್ಭದಲ್ಲಿ ಜನದಟ್ಟಣೆ ಹೆಚ್ಚಾಗುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಈ ವ್ಯವಸ್ಥೆ ಕಲ್ಪಿಸಿದೆ. ರೈಲು ಸಂಖ್ಯೆ 07379 ಮಧ್ಯಾಹ್ನ 12ಕ್ಕೆ ಹುಬ್ಬಳ್ಳಿಯಿಂದ ಹೊರಟು ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ ಮತ್ತು ತುಮಕೂರು […]