ಗೂಡ್ಸ್ ವಾಹನದಲ್ಲಿ ಕಾರ್ಮಿಕರ ಸಾಗಾಟ: 10ಸಾವಿರ ದಂಡ

ಉಡುಪಿ: ಪೋಲೀಸರ ಎಚ್ಚರಿಕೆಯನ್ನು ಲೆಕ್ಕಿಸದೆ ಗೂಡ್ಸ್ ವಾಹನದಲ್ಲಿ ಸೆಂಟ್ರಿಂಗ್ ಮಷೀನ್ ಗಳೊಂದಿಗೆ ಕೂಲಿ ಕಾರ್ಮಿಕರನ್ನು ಸಾಗಿಸುವ ಕೆಲಸ ನಿರಂತರ ಹಾಗೂ ನಿರಾತಂಕವಾಗಿ ನಡೆಯುತ್ತಿದ್ದು ಪೊಲೀಸರು ವಾಹನವನ್ನು ಬೆನ್ನಟ್ಟಿ ಹಿಡಿದು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಾರ್ಕಳ ನ್ಯಾಯಾಲಯವು ವಾಹನದ ಮಾಲಕ ನಾಗಪ್ಪ ಎಂಬವರಿಗೆ 10 ಸಾವಿರ ದಂಡವಿಧಿಸಿದೆ. ಕಾರ್ಕಳ ಪರಿಸರದಲ್ಲಿ ಮಾತ್ರವಲ್ಲ ಜಿಲ್ಲೆಯದ್ಯಂತ ಬೆಳಿಗ್ಗೆ ಕೆಲಸಕ್ಕೆ ಕರೆದುಕೊಂಡು ಮತ್ತು ಕೆಲಸ ಮುಗಿಸಿ ಹಿಂದಿರುಗುವ ಸಂದರ್ಭದಲ್ಲಿ ಕೂಲಿ ಕಾರ್ಮಿಕರನ್ನು ಸಿಮೆಂಟ್ ಕಾಂಕ್ರೀಟ್ ಮಷೀನ್ ನೊಟ್ಟಿಗೆ ತುಂಬಿಕೊಂಡು ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಪೊಲೀಸರು […]
ಎಕೆಎಂಎಸ್ ಬಸ್ ಮಾಲೀಕ ಸೈಫುದ್ದೀನ್ ಕೊಲೆ ಪ್ರಕರಣ: ಐದನೇ ಆರೋಪಿ ಬಂಧನ

ಉಡುಪಿ: ಎಕೆಎಂಎಸ್ ಬಸ್ ಮಾಲೀಕ ಸೈಫುದ್ದೀನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐದನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿ ಮಿಶನ್ ಕಂಪೌಂಡ್ ಬಳಿಯ ಶಾಂತಿ ನಗರದ ನಿವಾಸಿ ಮಾಲಿ ಮೊಹಮ್ಮದ್ ಸಿಯಾನ್(31) ಬಂಧಿತ ಆರೋಪಿ. ಈತನನ್ನು ಸೋಮವಾರ ಬೆಳಿಗ್ಗೆ 10.30ಕ್ಕೆ ಎಂಜಿಎಂ ಕಾಲೇಜಿನ ಬಸ್ ಸ್ಟ್ಯಾಂಡ್ ಬಳಿಯಲ್ಲಿ ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸಿದ KA20MF207ನೇ ಗ್ಲಾಂಜಾ ಕಾರನ್ನು ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನ್‌ನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 4 ಜನ […]
ಉಡುಪಿ,ಬ್ರಹ್ಮಾವರ,ಸಿದ್ಧಾಪುರದ ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿ,ಬ್ರಹ್ಮಾವರ, ಸಿದ್ಧಾಪುರದ ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಖಾಲಿ ಹುದ್ದೆಗಳು: 🔸 ಸೇಲ್ಸ್ ಮ್ಯಾನೇಜರ್ -1🔸 ಬ್ರಾಂಚ್ ಮ್ಯಾನೇಜರ್ -2🔸 ಸರ್ವಿಸ್ ಅಡ್ವೈಸರ್ -2🔸ಮೆಕ್ಯಾನಿಕ್ಸ್ -5🔸 ಅಕೌಂಟ್ಸ್ (ಮಹಿಳೆ) -2 ಅನುಭವಿ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ. ಆಕರ್ಷಕ ಸಂಬಳ ಪಿಎಫ್ / ಇಎಸ್ಐ ಹಾಗೂ ಪ್ರೋತ್ಸಾಹಧನ ಸೌಲಭ್ಯವಿದೆ. ನಿಮ್ಮ ರೆಸ್ಯೂಮ್ ಕಳುಹಿಸಿ:[email protected] ಸಂಪರ್ಕಿಸಿ: +91 7996210666
ಕುಂದಾಪುರ: ಬಿದ್ಕಲ್ ಕಟ್ಟೆ ಕಾಲೇಜು ಮೈದಾನದಲ್ಲಿ ಅದ್ದೂರಿ ಕುಲಾಲ ಕ್ರೀಡೋತ್ಸವ.

ಕುಂದಾಪುರ: ಬಿದ್ಕಲ್ ಕಟ್ಟೆ ಕಾಲೇಜು ಮೈದಾನದಲ್ಲಿ ಕುಲಾಲ ಸಂಘ (ರಿ) ಕುಂದಾಪುರ ಮತ್ತು ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ಮಂಗಳೂರು ಇದರ ಕುಂದಾಪುರ & ಬೈಂದೂರು ವಿಧಾನಸಭಾ ಘಟಕಗಳ ನೇತೃತ್ವದಲ್ಲಿ ಡಿ. 14 ರಂದು ಅದ್ದೂರಿ ಕುಲಾಲ ಕ್ರೀಡೋತ್ಸವ ನಡೆಯಿತು. ಕ್ರೀಡೋತ್ಸವದ ಉದ್ಘಾಟನೆಯನ್ನು ಜಯರತ್ನ ಟ್ರಸ್ಟ್ ಪ್ರವರ್ತಕರು ಹಾಗೂ ಕುಂದಾಪುರ ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆಯವರು ನೆರವೇರಿಸಿದರು . ಸಭೆಯ ಅಧ್ಯಕ್ಷತೆಯನ್ನು ರಾಘವೇಂದ್ರ ಕುಲಾಲ ಹೆಮ್ಮಾಡಿ ವಹಿಸಿದ್ದರು. ದಕ್ಷಿಣಕನ್ನಡ ಜಿಲ್ಲಾರಾಜೋತ್ಸವ […]
ರಂಗಭೂಮಿ ಉಡುಪಿ ಆಶ್ರಯದಲ್ಲಿ ಮರವೇ ಮರ‍್ಮರವೇ ಬೀದಿ ನಾಟಕ ಪ್ರದರ್ಶನ

ಉಡುಪಿ: ನಮ್ಮ ಸಮಾಜ, ಜನ ಸಾಮಾನ್ಯರು ಬದುಕಿನಲ್ಲಿ ಎದುರಿಸುತ್ತಿರುವ ಬವಣೆಗಳು, ಸಾಮಾಜಿಕ ಸಂಘರ್ಷಗಳ ಬಗ್ಗೆ ಬೀದಿ ನಾಟಕಗಳು ಬೆಳಕು ಚೆಲ್ಲಿ ಜಾಗೃತಿಯನ್ನುಂಟು ಮಾಡುವ ಕಾರ್ಯ ಮಾಡುತ್ತಿವೆ ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ರಂಗಭೂಮಿ ಉಡುಪಿ ಆಶ್ರಯದಲ್ಲಿ ಕಿನ್ನರ ಮೇಳ ತುಮರಿ ಪ್ರಸ್ತುತಿಯಲ್ಲಿ ರಥಬೀದಿಯ ಪೇಜಾವರ ಮಠದ ಮುಂಭಾಗದಲ್ಲಿ ನಡೆದ ಡಾ.ಚಂದ್ರಶೇಖರ ಕಂಬಾರರು ರಚಿಸಿದ ಮೂರು ಕಥೆಗಳನ್ನು ಆಧಾರಿಸಿದ ‘ಮರವೇ ಮರ‍್ಮರವೇ..!’ ಬೀದಿ ನಾಟಕದ ಪ್ರಥಮ ಪ್ರದರ್ಶನ ಹಾಗೂ ಉದ್ಘಾಟನಾ […]