ಉಡುಪಿ:ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರುಗಳಿಗೆ ವಿಳಂಬವಿಲ್ಲದೇ ಕಾಲಮಿತಿಯಲ್ಲಿ ವೇತನ ತಲುಪಿಸಿ :ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ: ನಗರ ಹಾಗೂ ಗ್ರಾಮೀಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ವೇತನ ಸೇರಿದಂತೆ ಮತ್ತಿತರ ಸೌಲಭ್ಯಗಳು ವಿಳಂಬವಿಲ್ಲದೇ ಪ್ರತಿ ತಿಂಗಳು ಪಾವತಿಸಬೇಕು ಎಂದುಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳಜಿಲ್ಲಾ ಜಾಗೃತ ಸಮಿತಿಯ ನಾಲ್ಕನೇ ತ್ರೆöÊಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ […]
ಉಡುಪಿ:ರಾಜ್ಯ ಮಹಿಳಾ ನಿಲಯದಲ್ಲಿ ನಿವಾಸಿನಿಯರ ಅದ್ಧೂರಿ ಮದುವೆ ಸಂಭ್ರಮ

ಉಡುಪಿ:ರಾಜ್ಯ ಮಹಿಳಾ ನಿಲಯವನ್ನು ಸ್ವಾಗತ ದ್ವಾರ, ಮದುವೆ ಚಪ್ಪರ, ಮಾವಿನ ತಳಿರು-ತೋರಣ, ಬಣ್ಣ-ಬಣ್ಣದ ರಂಗೋಲಿ ಚಿತ್ತಾರಗಳಿಂದಅಲಂಕರಿಸಲಾಗಿದ್ದು, ಯಾವುದೇ ಖಾಸಗಿ ಮದುವೆಗೆ ಕಡಿಮೆಯಿಲ್ಲ ಎಂಬಂತೆ ರಾಜ್ಯ ಮಹಿಳಾ ನಿಲಯದಲ್ಲಿ ನಡೆದ ವಿವಾಹ ಕಾರ್ಯಕ್ರಮವು ನೋಡುಗರನ್ನು ಆಕರ್ಷಿಸುತ್ತಿತ್ತು. ಮದುವೆಗೆ ಆಗಮಿಸಿದ ಗಣ್ಯರನ್ನು, ಅಧಿಕಾರಿಗಳನ್ನು ತಂಪು ಪಾನೀಯ ಹಾಗೂ ಗುಲಾಬಿ ಹೂವುಗಳನ್ನು ನೀಡಿ, ನಿಲಯದ ಸಿಬ್ಬಂದಿಗಳು ಆದರದಿಂದ ಬರಮಾಡಿಕೊಳ್ಳುತ್ತಿರುವ ದೃಶ್ಯ ಮದುವೆಗೆ ಮತ್ತಷ್ಟು ಮೆರುಗು ನೀಡಿತ್ತು.ಇವೆಲ್ಲವೂ ಕಂಡುಬಂದಿದ್ದು, ಇಂದು ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ನಡೆದ ನಿವಾಸಿನಿಯರೇ ವಿವಾಹ ಕಾರ್ಯಕ್ರಮದಲ್ಲಿಎನ್ನುವುದೇ ವಿಶೇಷ. […]
ಉಡುಪಿ: ಸ್ವೀಟ್ಸ್ ಅಂಗಡಿಗೆ ಸೇಲ್ಸ್’ಗೆ ಹುಡುಗಿಯರು ಬೇಕಾಗಿದ್ದಾರೆ

ಉಡುಪಿ: ಉಡುಪಿಯಲ್ಲಿ ಪ್ರತಿಷ್ಠಿತ ಸ್ವೀಟ್ಸ್ ಅಂಗಡಿಗೆ ಸೇಲ್ಸ್’ಗೆ ಹುಡುಗಿಯರು ಬೇಕಾಗಿದ್ದಾರೆ. ವಿಶೇಷ ಸೂಚನೆ: ಇಲ್ಲಿಯೇ ಉಳಿದುಕೊಳ್ಳುವವರಿಗೆ ಮಾತ್ರ ಊಟ, ವಸತಿ ಒಳಗೊಂಡಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.ಮೊ: 9731855012