ಆಸ್ಟ್ರೇಲಿಯಾದಲ್ಲಿ ಮಕ್ಕಳಿಗೆ ಸೋಶಿಯಲ್ ಮೀಡಿಯಮ್ ಬ್ಯಾನ್!

ಆಸ್ಟ್ರೇಲಿಯಾದಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡುವ ಕಾನೂನು ಜಾರಿಗೆ ಬಂದಿದೆ. ಈ ಮೂಲಕ, ಮಕ್ಕಳ ಸಾಮಾಜಿಕ ಜಾಲತಾಣಗಳ ಬಳಕೆ ಸಂಬಂಧ ಸಮಗ್ರ ಕಾನೂನು ರೂಪಿಸಿದ ಮೊದಲ ದೇಶವಾಗಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್, ಥ್ರೆಡ್ಸ್, ಸ್ಮ್ಯಾಪ್‌ಚಾಟ್, ಟಿಕ್‌ಟಾಕ್‌ ನಂತಹ ಸಾಮಾಜಿಕ ಜಾಲತಾಣಗಳ ವೇದಿಕೆಗಳು ಬಳಕೆದಾರರ ವಯಸ್ಸನ್ನ ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇಲ್ಲವಾದಲ್ಲಿ ಭಾರೀ ಪ್ರಮಾಣದಲ್ಲಿ ದಂಡ ತೆರಬೇಕಾಗಿದೆ. ಮಕ್ಕಳ ಸುರಕ್ಷತೆ ಖಾತರಿಪಡಿಸಲು ಸಾಮಾಜಿಕ ಹೊಣೆಗಾರಿಕೆ ನಿಗದಿಪಡಿಸುವ ಉದ್ದೇಶ ಈ ಕಾನೂನಿನಲ್ಲಿದೆ ಅಂತ ಆಸ್ಟ್ರೇಲಿಯಾ ಸರ್ಕಾರ […]

ಕಾರ್ಕಳ: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

ಅಜೆಕಾರು: ಅಡಿಕೆ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಡಿ.9ರಂದು ಮಧ್ಯಾಹ್ನ ವೇಳೆ ಶಿರ್ಲಾಲು ಗ್ರಾಮದಲ್ಲಿ ನಡೆದಿದೆ. ಮೃತರನ್ನು ಕೆರ್ವಾಶೆ ಗ್ರಾಮದ ಮುಗ್ಗೆರಕಳ ನಿವಾಸಿ ನಾರಾಯಣ ಆರ್. ಎಂದು ಗುರುತಿಸಲಾಗಿದೆ. ಇವರು ಶಿರ್ಲಾಲು ಗ್ರಾಮದ ಜಯಪ್ರಕಾಶ್ ಅರಿಗ ಎಂಬವರ ತೋಟಕ್ಕೆ ಅಡಿಕೆ ಕೊಯ್ಯಲು ಹೋಗಿದ್ದು ಅಡಿಕೆ ಮರ ಹತ್ತಿ ಅಡಿಕೆ ಕೊಯ್ಯುತ್ತಿದ್ದ ನಾರಾಯಣ, ಆಕಸ್ಮಿಕವಾಗಿ ಮರದಿಂದ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟಞ್ಟರು ಎಂದು ತಿಳಿದುಬಂದಿದೆ. […]

ಹಿರಿಯಡ್ಕ: ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಹಿರಿಯಡ್ಕ: ನಾಲ್ಕು ತಿಂಗಳ ಹಿಂದೆ ಅಂಜಾರು ಗ್ರಾಮದ ಅರಂತಬೆಟ್ಟು ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಬೊಮ್ಮರಬೆಟ್ಟು ಗ್ರಾಮದ ಪಡ್ಡಾಂ ನಿವಾಸಿ ದಯಾನಂದ ನಾಯ್ಕ್ ಎಂಬವರ ಮಗ ಸಂದೇಶ(18) ಎಂದು ಗುರುತಿಸಲಾಗಿದೆ. ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಇವರು, ಆ.7ರಂದು ಅರಂತಬೆಟ್ಟು ಕ್ರಾಸ್ ಬಳಿ ಬೈಕ್ ಅಪಗಾತದಲ್ಲಿ ಗಾಯಗೊಂಡಿದ್ದರು. ಬಳಿಕ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದ ಸಂದೇಶ್ ನಾಯ್ಕ್ ಗೆ […]

ಉಡುಪಿ:ಕೊಂಕಣ ರೈಲ್ವೆ ಮಾರ್ಗದ ದ್ವಿಪಥಕ್ಕೆ ಸಂಸದ ಕೋಟ ಆಗ್ರಹ

ಉಡುಪಿ: ಕೇರಳ, ಮಂಗಳೂರು, ಗೋವಾ ಮೂಲಕ ಮಹಾರಾಷ್ಟ್ರದ ಮುಂಬಯಿಯನ್ನು ಸಂಪರ್ಕಿಸುವ ಕೊಂಕಣ ರೈಲ್ವೆ ಮಾರ್ಗ ಅಭಿವೃದ್ಧಿ ಪಡಿಸಿ ಪೂರ್ಣಮಾರ್ಗವನ್ನು ದ್ವಿಪಥಗೊಳಿಸಲು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ. ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಲು ಕೇರಳ, ಗೋವಾ ಸರಕಾರಗಳು ಈಗಾಗಲೇ ಒಪ್ಪಿಗೆ ನೀಡಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ಸರಕಾರಗಳು ಕೂಡ ಸಮ್ಮತಿಸಿದ ಬಗ್ಗೆ ಮಾಹಿತಿ ಇದೆ. ಆದರೂ ಈ ವಿಲೀನ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಕೊಂಕಣ ರೈಲ್ವೆ ಮಾರ್ಗ ಮತ್ತು […]

ಉಡುಪಿ- ಮಂಗಳೂರಿನ ಅತಿದೊಡ್ಡ ಕಾರುಗಳ ಶೋರೂಮ್ ನಲ್ಲಿ ಉದ್ಯೋಗವಕಾಶ!

ಉಡುಪಿ: ಉಡುಪಿ- ಮಂಗಳೂರಿನ ಅತಿದೊಡ್ಡ ಕಾರುಗಳ ಶೋರೂಮ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: ಆಕರ್ಷಕ ವೇತನದೊಂದಿಗೆ, ಭತ್ಯೆಗಳು ಪ್ರತ್ಯೇಕವಾಗಿರುತ್ತದೆ. 7019891796, 7975861846