ಕುಸಿತ ಕಂಡಿದ್ದ ‘ಟೊಮೆಟೊ’ ಬೆಲೆ ಮತ್ತೆ ಏರಿಕೆ!

ಬೆಂಗಳೂರು: ನಗರದಲ್ಲಿ 15 ದಿನದಿಂದ ತೀವ್ರ ದರ ಕುಸಿತ ಕಂಡಿದ್ದ ಟೊಮೆಟೊದ ಬೆಲೆ ಮತ್ತೆ ಏರಿಕೆಯಾಗಿದೆ. ಪ್ರತಿ ಕೆ.ಜಿಗೆ ₹20ರಿಂದ ₹30ರಂತೆ ಮಾರಾಟವಾಗುತ್ತಿದ್ದ ಟೊಮೆಟೊ, ಈಗ ಕೆ.ಜಿ.ಗೆ ₹80ರಂತೆ ಮಾರಾಟವಾಗುತ್ತಿದೆ. ಟೊಮೆಟೊ ಬೆಳೆಯ ಇಳುವರಿ ಕುಂಠಿತಗೊಂಡಿದ್ದು, ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ. ಆದ್ದರಿಂದ ದರ ಹೆಚ್ಚಳಗೊಂಡಿದೆ. ಕೆ.ಆರ್‌. ಮಾರುಕಟ್ಟೆಯಲ್ಲಿ ಟೊಮೆಟೊ ಪ್ರತಿ ಕೆ.ಜಿಗೆ ₹60ಕ್ಕೆ ದರವಿದ್ದರೆ, ಇತರೆ ಪ್ರದೇಶಗಳಲ್ಲಿ ₹80ರಂತೆ ಮಾರಾಟ ಮಾಡಲಾಗುತ್ತಿದೆ. ‘ಮೂರು ನಾಲ್ಕು ದಿನಗಳಿಂದ ಸತತವಾಗಿ ಬೆಲೆ ಏರುತ್ತಲೇ ಸಾಗಿದೆ. ಚಿಕ್ಕಬಳ್ಳಾಪುರ ಹಾಗೂ […]

ಪ್ರಧಾನಿ ಉಡುಪಿ ಭೇಟಿ ಹಿನ್ನೆಲೆ: ಪೊಲೀಸರಿಂದ ಸಮಾವೇಶ ಸ್ಥಳದ ಭೇಟಿಯ ರಿಹರ್ಸಲ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಉಡುಪಿ ಭೇಟಿಗೆ ಕ್ಷಣಗಣನೆ ಶುರುವಾಗಿದೆ.ಪ್ರಧಾನಿ ಮೋದಿಯ ಭದ್ರತಾ ಪಡೆ ಮತ್ತು ರಾಜ್ಯ ಪೊಲೀಸರು ಮಾಕ್ ಡ್ರಿಲ್ ಮಾಡಿದ್ದಾರೆ. ದೆಹಲಿ ಸ್ಪೋಟದ ನಂತರ ಪ್ರಧಾನಿ ಮೋದಿಯ ಭದ್ರತಾ ವಿಧಾನವನ್ನು ಮತ್ತಷ್ಟು ಕಟ್ಟುನಿಟ್ಟು ಮಾಡಲಾಗಿದೆ. ಉಡುಪಿ ಪ್ರವಾಸದ ಮಾಕ್ ಡ್ರಿಲ್ ನಡೆಯುತ್ತಿದೆ. ಹೆಲಿಪ್ಯಾಡ್, ರೋಡ್ ಶೋ, ಕೃಷ್ಣಮಠ ಮತ್ತು ಸಮಾವೇಶ ಸ್ಥಳದ ಭೇಟಿಯ ರಿಹರ್ಸಲ್ ನಡೆಯುತ್ತಿದೆ. ಮೋದಿ ಸಾಗುವ ರೂಟ್ ನಲ್ಲಿ ಕಾರ್ಯಕ್ರಮ ನಡೆಯುವ ವೇದಿಕೆಯ ಬಗ್ಗೆ ಕೆಲ ಬದಲಾವಣೆಗಳನ್ನು ಎಸ್ಪಿಜಿ ಸೂಚಿಸಿದೆ. ಸಾಂಸ್ಕೃತಿಕ […]

ಮಣಿಪಾಲ: ವೈದ್ಯೆಯ ಮೊಬೈಲ್ ಹ್ಯಾಕ್ ಮಾಡಿ ಲಕ್ಷಾಂತರ ರೂಪಾಯಿ ವಂಚನೆ; ಪ್ರಕರಣ ದಾಖಲು

ಮಣಿಪಾಲ: ವೈದ್ಯೆಯೊಬ್ಬರ ಮೊಬೈಲ್ ಹ್ಯಾಕ್ ಮಾಡಿ ಬ್ಯಾಂಕ್ ಖಾತೆ ಹಾಗೂ ಕ್ರೆಡಿಟ್ ಕಾರ್ಡ್‌ನಿಂದ ಲಕ್ಷಾಂತರ ರೂ. ಆನ್‌ಲೈನ್ ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಪಾಲ ಕಸ್ತೂರ್ಬಾ ಕಾಲೇಜಿನಲ್ಲಿ ತೃತಿಯ ವರ್ಷದ ಎಂಡಿ ವಿದ್ಯಾಭ್ಯಾಸ ಮಾಡುತ್ತಿರುವ ಡಾ. ಎನ್.ಶ್ವೇತಾ ರೆಡ್ಡಿ ಎಂಬವರಿಗೆ ನ.18ರಂದು ಬ್ಯಾಂಕಿನ ಏಜೆಂಟ್ ಎಂದು ಕರೆ ಮಾಡಿ ಕ್ರೆಡಿಟ್ ಕಾರ್ಡ್ ಪ್ರೊಟೆಕ್ಷಷನ್ ಸರ್ವಿಸ್ ಅವಧಿ ಮುಗಿದಿದೆ ಎಂದು ತಿಳಿಸಿದ್ದು, ಬಳಿಕ ಕರೆ ಮಾಡಿ ಗೂಗಲ್‌ನಲ್ಲಿ ಐ ಮೊಬೈಲ್ ಲೈಟ್ ಆ್ಯಪ್ ಎಂಬುದಾಗಿ […]

ಉಡುಪಿ:ತ್ರಿಶಾ ಕ್ಲಾಸಸ್ : ಸಿ ಎಸ್ ಇ ಇ ಟಿ ಪರೀಕ್ಷೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

ಮಂಗಳೂರು: ಸಿ.ಎ ಸಿ.ಎಸ್ ಮೊದಲಾದ ವೃತ್ತಿಪರ ಕೋರ್ಸ್‌ಗಳಿಗಾಗಿ ತರಬೇತಿ ನೀಡುತ್ತಿರುವ ತ್ರಿಶಾ ಕ್ಲಾಸಸ್ ವತಿಯಿಂದ ಸಿ ಎಸ್ ಇ ಇ ಟಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಮಂಗಳೂರಿನ ತ್ರಿಶಾ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ತ್ರಿಶಾ ಸಮೂಹ ಸಂಸ್ಥೆಗಳ ಶೈಕ್ಷಣಿಕ ಸಲಹೆಗಾರರಾದ ಡಾ. ನಾರಾಯಣ ಕಾಯರಕಟ್ಟೆ ಇವರು ವಿದ್ಯಾರ್ಥಿಗಳು ಕಲಿಕೆಯಲ್ಲಿ ಉತ್ಸಾಹ ತೋರಿಸಬೇಕು. ಮುಂದಿನ ಹಂತಗಳನ್ನು ಉತ್ತಮ ತಯಾರಿಯೊಂದಿಗೆ ಪೂರ್ಣಗೊಳಿಸಬೇಕು. ಕಲಿಕೆಯೊಂದಿಗೆ ವೃತ್ತಿಪರತೆ ಯನ್ನು ಅಳವಡಿಸಿಕೊಳ್ಳಬೇಕು ಎನ್ನುತ್ತ ಸಾಧಕರಿಗೆ ಶುಭಕೋರಿದರು. ಈ ಕಾರ್ಯಕ್ರಮದಲ್ಲಿ ಸಾಧಕರನ್ನು […]

ಹಾಂಗ್ ಕಾಂಗ್: ವಾಂಗ್ ಫುಕ್ ಕೋರ್ಟ್ ಕಟ್ಟಡದಲ್ಲಿ ಅಗ್ನಿ ಅವಘಡ: 44 ಮಂದಿ ಮೃತ್ಯು

ಹಾಂಗ್‌ಕಾಂಗ್‌ನ ತೈಪೊ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಅಗ್ನಿ ಅವಘಡ ಜಗತ್ತನ್ನೇ ಬೆಚ್ಚಿಬೀಳಿಸಿದೆ. ವಾಂಗ್ ಫುಕ್ ಕೋರ್ಟ್ ಎಂಬ 8 ಬಹುಮಹಡಿ ಕಟ್ಟಡಗಳ ಸಂಕೀರ್ಣದಲ್ಲಿ ಕಾಣಿಸಿಕೊಂಡ ಬೆಂಕಿಗೆ ಬಲಿಯಾಗಿರುವವರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. ಇನ್ನೂ ಹಲವರು ಒಳಗೇ ಸಿಲುಕಿರುವ ಪರಿಣಾಮ ಸಾವು-ನೋವು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ 900ಕ್ಕೂ ಹೆಚ್ಚು ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತರಿಗೆ ಎಲ್ಲಾ ರೀತಿಯ […]