ಪ್ರಧಾನಿ ಭೇಟಿ ಸಮಯದಲ್ಲಿ ಬದಲಾವಣೆ: 40 ನಿಮಿಷ ಮುಂಚಿತವಾಗಿ ಆಗಮಿಸಲಿರುವ ಮೋದಿ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ನ.28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಕಾರ್ಯಕ್ರಮದಲ್ಲಿ ಬದಲಾವಣೆಯಾಗಿದ್ದು, ಅವರು ಉಡುಪಿಗೆ ನಿಗದಿತ ಸಮಯಕ್ಕಿಂತ 40 ನಿಮಿಷ ಮುಂಚಿತವಾಗಿ ಆಗಮಿಸಲಿದ್ದಾರೆ. ನರೇಂದ್ರ ಮೋದಿ ಬೆಳಗ್ಗೆ 11.05ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿ, ಅಲ್ಲಿಂದ ಆದಿಉಡುಪಿ ಹೆಲಿಪ್ಯಾಡ್‌ಗೆ ಬೆಳಗ್ಗೆ 11.25ಕ್ಕೆ ಬಂದು ಇಳಿದು, 12ಗಂಟೆಗೆ ಮಠ ತಲುಪುವ ಬಗ್ಗೆ ಸಮಯ ನಿಗದಿಯಾಗಿತ್ತು. ಇದೀಗ ಅದರಲ್ಲಿ ಬದಲಾವಣೆಯಾಗಿ ಮೋದಿ ಬೆಳಿಗ್ಗೆ 11 ಗಂಟೆಗೆ ಆದಿಉಡುಪಿಗೆ ಆಗಮಿಸಿ 11 ಗಂಟೆಯಿಂದ 11.20ರವರೆಗೆ ರೋಡ್ ಶೋ ನಡೆಸಲಿದ್ದಾರೆ. […]
ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಕ್ರೀಡಾಕೂಟ: ಆಳ್ವಾಸ್ ಚಾಂಪಿಯನ್ಸ್

ಉಡುಪಿ: ಮಂಗಳೂರು ವಿವಿ ಮತ್ತು ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇವರ ಸಹಯೋಗದಲ್ಲಿ ನಡೆದ 45ನೇ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜು ಸಮಗ್ರ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಜಿಲ್ಲೆಯ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ 472 ಅಂಕಗಳನ್ನು ಪಡೆದು ಸಮಗ್ರ ಚಾಂಪಿಯನ್‌ಶಿಪ್ ಅನ್ನು ತಮ್ಮದಾಗಿಸಿ ಕೊಂಡಿತು. ಎಸ್.ಡಿ.ಎಮ್ ಕಾಲೇಜು ಉಜಿರೆ ದ್ವಿತೀಯ ಸ್ಥಾನ ಮತ್ತು […]
ರಾಜ್ಯದಲ್ಲಿ ಶಾಸನ ಇಲ್ಲದ ದುಶ್ಯಾಸನ ಆಡಳಿತವಿದೆ- ಸುನಿಲ್ ಕುಮಾರ್ ವಾಗ್ದಾಳಿ

ಉಡುಪಿ: ರಾಜ್ಯದಲ್ಲಿ ಎರಡು ತಿಂಗಳಿಂದ ಆಡಳಿತ ನಡೆಯುತ್ತಿಲ್ಲ. ಶಾಸನ ಇಲ್ಲದ ದುಶ್ಯಾಸನ ಆಡಳಿತ ನಡೆಯುತ್ತಿದೆ. ಶೇ.90ರಷ್ಟು ಸಚಿವರು ವಿಧಾನಸೌಧಕ್ಕೆ ಬರುತ್ತಿಲ್ಲ. ಮುಖ್ಯಮಂತ್ರಿ ಮೈಸೂರಿಗೆ- ಉಪಮುಖ್ಯಮಂತ್ರಿ ದೆಹಲಿಗೆ ಸೀಮಿತರಾಗಿದ್ದಾರೆ. ಈ ಸರಕಾರ ಸಂಪೂರ್ಣವಾಗಿ ವಿಶ್ವಾಸ ಕಳೆದುಕೊಂಡಿದೆ. ಆದುದರಿಂದ ಬೆಳಗಾವಿ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸುತ್ತೇವೆ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ. ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಮಂತ್ರಿ, ಶಾಸಕರ ನಡುವೆ ವಿಶ್ವಾಸವಿಲ್ಲ. ಸದನದಲ್ಲಿ ನಾವು ವಿಶ್ವಾಸ ಮತವನ್ನು ಯಾಚಿಸುತ್ತೇವೆ. ಎನ್‌ಡಿಎ ಒಕ್ಕೂಟದಲ್ಲೂ […]
ಉಡುಪಿ:ನ.30 ರಂದು ಶ್ರೀ ಗೋಪಾಲಕೃಷ್ಣ ಮಂದಿರ, ಮುಂಡ್ಕಿನಜೆಡ್ಡುವಿನಲ್ಲಿ ಶಿಲಾನ್ಯಾಸ ಸಮಾರಂಭ

ಉಡುಪಿ:ಶ್ರೀ ಗೋಪಾಲಕೃಷ್ಣ ಮಂದಿರದ ಸಮಗ್ರ ಜೀರ್ಣೋದ್ಧಾರದ ಬಗ್ಗೆ ದಿನಾಂಕ 30-11-2025 ಆದಿತ್ಯವಾರದ ಶುಭಮುಹೂರ್ತದಲ್ಲಿ ಉಡುಪಿ ಅದಮಾರು ಮಠದ ಹಿರಿಯ ಸ್ವಾಮೀಜಿಯವರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ದಿವ್ಯ ಹಸ್ತದಿಂದ ಶಿಲಾನ್ಯಾಸ ಕಾರ್ಯಕ್ರಮ ಜರಗಲಿದೆ. ಈ ಬಗ್ಗೆ ಅಂತಿಮ ಸಿದ್ಧತೆಗಳಿಗಾಗಿ ದಿನಾಂಕ 28-11-2025ರ ಶುಕ್ರವಾರ ಸಾಯಂಕಾಲ 6.00 ಗಂಟೆಗೆ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ ಹಾಗೂ ಮಹಿಳಾ ಘಟಕದ ಎಲ್ಲಾ ಸದಸ್ಯರ ಸಭೆಯನ್ನು ಕರೆಯಲಾಗಿದೆ.ಸ್ಥಳ:-ಮಂದಿರದ ಕಛೇರಿ.
ಭಾರತದಲ್ಲಿ “ಗೂಗಲ್ ಮೀಟ್” ಭಾರೀ ತಾಂತ್ರಿಕ ಸಮಸ್ಯೆ: ಗೂಗಲ್ ಅಧಿಕೃತ ಸ್ಪಷ್ಟನೆ!

ಗೂಗಲ್‌ನ ಪ್ರಮುಖ ವಿಡಿಯೋ ಕಾನ್ಸರೆನ್ಸಿಂಗ್ ಪ್ಲಾಟ್‌ಫಾರ್ಮ್ ಆದ ಗೂಗಲ್ ಮೀಟ್ ಭಾರತದಲ್ಲಿ ಕಳೆದ ಕೆಲವು ಗಂಟೆಗಳಿಂದ ಭಾರೀ ತಾಂತ್ರಿಕ ಸಮಸ್ಯೆಗೆ ಸಿಲುಕಿದ್ದು, ಲಕ್ಷಾಂತರ ಬಳಕೆದಾರರು ಆನ್‌ಲೈನ್ ಸಭೆಗಳಿಗೆ ಸೇರಲು ಸಾಧ್ಯವಾಗದೆ ತೊಂದರೆ ಅನುಭವಿಸಿದ್ದಾರೆ. ಲಭ್ಯವಿರುವ ವರದಿಗಳ ಪ್ರಕಾರ, ಭಾರತದಲ್ಲಿ ಸುಮಾರು 65% ಬಳಕೆದಾರರು ಗೂಗಲ್ ಮೀಟ್ ಬಳಸಲು ಅಸಾಧ್ಯವಾಗಿದೆ. ಬಳಕೆದಾರರು ವೆಬ್‌ಸೈಟ್ ಮೂಲಕ ಮೀಟಿಂಗ್‌ಗೆ ಸೇರಲು ಪ್ರಯತ್ನಿಸಿದಾಗ ಹಲವರಿಗೆ 503 Error’ ಎಂಬ ಸಂದೇಶ ಕಾಣಿಸಿಕೊಂಡಿದೆ. ಈ ಸ್ಥಗಿತದಿಂದಾಗಿ ಕೆಲಸಕ್ಕೆ ಸಂಬಂಧಿಸಿದ ತುರ್ತು ಕರೆಗಳು, ಆನ್‌ಲೈನ್ ತರಗತಿಗಳು […]