ಉಡುಪಿ: ಆತ್ರಾಡಿಯ ‘ಶಾಂಭವಿ ಹೋಟೆಲ್ & ಕನ್ವೆನ್ಶನ್ ಸೆಂಟರ್’ನಲ್ಲಿ ನ. 29 ರಂದು “ಮಕ್ಕಳ ಕಾರ್ನಿವಲ್”, ಕುಟುಂಬದ ಜೊತೆಗೆ ಬನ್ನಿ ಎಂಜಾಯ್ ಮಾಡಿ.!

ಉಡುಪಿ: ಆತ್ರಾಡಿಯಲ್ಲಿರುವ ಶಾಂಭವಿ ಹೋಟೆಲ್ & ಕನ್ವೆನ್ಶನ್ ಸೆಂಟರ್ ನಲ್ಲಿ ನವೆಂಬರ್ 29 ರಂದು ಮಧ್ಯಾಹ್ನ 3:30 – 9 PM ರವರೆಗೆ ಮಕ್ಕಳ ಕಾರ್ನಿವಲ್ 2025 ನಡೆಯಲಿದೆ. ಮರೆಯಲಾರದ ಸಂತಸ ಮತ್ತು ನೆನಪಿನ ಕ್ಷಣಗಳಿಂದ ಕೂಡಿದ ಕಾರ್ನಿವಲ್ ಇದಾಗಿದ್ದು, ಅದ್ಭುತ ಅನುಭವ ಪಡೆಯಲು ಫ್ಯಾಮಿಲಿ ಫನ್ ಫೇರ್‌ನಲ್ಲಿ ಸಂಭ್ರಮಿಸಲು ನೀವು ರೆಡಿಯಾಗಿ. ವಿಶೇಷ ಆಕರ್ಷಣೆಗಳು ನೋಂದಣಿಗೆ ಈ ಕೂಡಲೇ ಸಂಪರ್ಕಿಸಿ: 6366237118
ದೇಶದಲ್ಲಿ ಗೋ ಮಾಂಸ ರಫ್ತು, ಜಾನುವಾರು ಹತ್ಯೆ ಸಂಪೂರ್ಣವಾಗಿ ನಿಷೇಧಿಸಿ: ಭಾರತವನ್ನು ಗೋ ಮಾಂಸ ರಫ್ತು ಹಾಗೂ ಜಾನುವಾರು ಹತ್ಯೆ ಮುಕ್ತ ರಾಷ್ಟ್ರವೆಂದು ಘೋಷಿಸಿ – ಸುದ್ದಿಗೋಷ್ಠಿಯಲ್ಲಿ ದಯಾನಂದ ಸ್ವಾಮೀಜಿ ಒತ್ತಾಯ

ಉಡುಪಿ: ಭಾರತ ದೇಶದಲ್ಲಿ ಗೋ ಮಾಂಸ ರಫ್ತು ಹಾಗೂ ಜಾನುವಾರು ಹತ್ಯೆಯನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ನಿಷೇಧ ಮಾಡಬೇಕು. ಈ ನಿಟ್ಟಿನಲ್ಲಿ ದೇಶಾದ್ಯಂತ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪಕಾಧ್ಯಕ್ಷ ದಯಾನಂದ ಸ್ವಾಮೀಜಿ ಒತ್ತಾಯಿಸಿದರು. ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾನುವಾರುಗಳನ್ನು ಹತ್ಯೆಗೈದು ಅವುಗಳ ಮಾಂಸ ಮತ್ತು ಚರ್ಮವನ್ನು ವಿದೇಶಗಳಿಗೆ ರಫ್ತು ಮಾಡುತ್ತಿರುವುದು ನಮ್ಮ ದೇಶದ ಧರ್ಮ, ಸಂಸ್ಕೃತಿ, ಪರಂಪರೆಗೆ ಕಳಂಕಪ್ರಾಯವಾಗಿದೆ. ಗೋ ಮಾಂಸ ರಫ್ತಿನಿಂದ ದೇಶದಲ್ಲಿ ಗೋವು ಹಾಗೂ […]
ಪ್ರಧಾನಿ ಉಡುಪಿ ಭೇಟಿ ಹಿನ್ನೆಲೆ: ಕೃಷ್ಣನಗರಿಯಲ್ಲಿ ಪೊಲೀಸ್ ಸರ್ಪಗಾವಲು; ಶಾಲೆಗಳಿಗೆ ರಜೆ- ಅಂಗಡಿ ಮುಂಗಟ್ಟು ಬಂದ್ ಗೆ ಸೂಚನೆ!

ಉಡುಪಿ: ಪ್ರಧಾನಿ ನರೇಂದ್ರ ಮೋದಿ ನ.28ರಂದು ಉಡುಪಿಗೆ ಆಗಮಿಸುತ್ತಿದ್ದು ಅಕ್ಷರಶಃ ಉಡುಪಿ ಖಾಕಿ ಕೋಟೆಯಾಗಿ ಮಾರ್ಪಾಡಾಗಿದೆ. ಶುಕ್ರವಾರ ಬನ್ನಂಜೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪದಿಂದ ಕಲ್ಸಂಕದ ವರೆಗೂ ಪ್ರಧಾನಿ ರೋಡ್‌ಶೋ ನಡೆಯಲಿದ್ದು ಇದಕ್ಕಾಗಿ ಎರಡು ಕಡೆಗಳಲ್ಲೂ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ. ಅಲ್ಲದೆ ಈ ರಸ್ತೆಯ ಎರಡೂ ಬದಿಗಳಲ್ಲಿರುವ ಅಂಗಡಿ ಮಾಲಕರಿಗೆ ಅಂದು ಅಂಗಡಿ ತೆರೆಯದಂತೆ ಸೂಚನೆಯನ್ನು ಜಿಲ್ಲಾಡಳಿತ ರವಾನಿಸಿದೆ.ಪ್ರಧಾನಿಯವರ ಆಗಮನದ ಹಿನ್ನೆಲೆಯಲ್ಲಿ ಶಿಷ್ಟಾಚಾರ ಪರಿಪಾಲನೆಗೆ ಜಿಲ್ಲಾಡಳಿತ ಹೆಚ್ಚಿನ ಆದ್ಯತೆ ನೀಡಿದೆ. ಎಲ್ಲಿಯೂ ಯಾವುದೇ ರೀತಿಯಲ್ಲೂ ವ್ಯತ್ಯಾಸ, ಸಮಸ್ಯೆಗಳು […]
ಉಡುಪಿ: ನಾಗರಾಜ್ ರಾವ್ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ.

ಉಡುಪಿ: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡಾಟಾ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಆದ ನಾಗರಾಜ್ ರಾವ್ ಇವರು ಮಂಗಳೂರಿನ ಎ ಜೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಡಾ. ಶಾಂತರಾಮ್ ರೈ ಸಿ, ಇವರಮಾರ್ಗದರ್ಶನದಲ್ಲಿ ಮಂಡಿಸಿದ “ಪರ್ಫಾಮೆನ್ಸ್ ಎನ್‌ಹ್ಯಾನ್ಸ್ಮೆಂಟ್ ಆಫ್ ಎ ಸ್ಪೆಸಲ್ ಮೆಶಿನ್ ಯೂಸಿಂಗ್ ಸಾಫ್ಟ್ ಕಂಪ್ಯೂಟಿಂಗ್ ಟೆಕ್ನಿಕ್ಸ್ ಅಂಡರ್ ಪ್ಯಾರಾಮೆಟ್ರಿಕ್ ಅನ್‌ಸರ್‌ನಿಟಿ” ಎಂಬ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು […]
ಯಕ್ಷಗಾನ ರಂಗದ ಶ್ರೇಷ್ಠ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ನಿಧನ

ಕುಂದಾಪುರ: ಯಕ್ಷಗಾನ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ (89) ಬುಧವಾರ ನಿಧನರಾದರು ಅರ್ಥಧಾರಿಯಾಗಿ, ಹವ್ಯಾಸಿ ವೇಷಧಾರಿಯಾಗಿ, ನಾಟಕ ಕಲಾವಿದರಾಗಿ ರಘುರಾಮ ಶೆಟ್ಟಿ ಅವರು ಯಕ್ಷಗಾನ ವಲಯದಲ್ಲಿ ಕಂದಾವರದವರು ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು. ಕಂಡ್ಲೂರು ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ-ಶಿಕ್ಷಕರಾಗಿ, ಮುಖ್ಯೋಪಾಧ್ಯರಾಗಿ 35 ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದರು. ‘ಚೆಲುವೆ ಚಿತ್ರಾವತಿ’, ‘ರತಿ ರೇಖಾ’, ‘ಶ್ರೀ ದೇವಿ ಬನಶಂಕರಿ’ ಮತ್ತು‘ಶೂದ್ರ ತಪಸ್ವಿನಿ’ ಅವರು ಬರೆದ ಪ್ರಮುಖ ಯಕ್ಷಗಾನ ಪ್ರಸಂಗಗಳಾಗಿವೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು […]