ಉಡುಪಿ: ನ.28ರಂದು ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್ ವರೆಗೆ ಪ್ರಧಾನಿ ಮೋದಿ ‘ರೋಡ್ ಶೋ’

ಉಡುಪಿ: ನ.28ರಂದು ಉಡುಪಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ 11.40 ಸುಮಾರಿಗೆ ಉಡುಪಿ ಬನ್ನಂಜೆಯ ನಾರಾಯಣಗುರು ಸರ್ಕಲ್ ನಿಂದ ಕಲ್ಸಂಕದವರೆಗೆ ರೋಡ್ ಶೋ ಕಾರ್ಯಕ್ರಮ ನಡೆಯಲಿದೆ. ಬಳಿಕ‌ ಅವರು ಕೃಷ್ಣಮಠಕ್ಕೆ ತೆರಳಿ ಶ್ರೀಕೃಷ್ಣ ದರ್ಶನ ಪಡೆಯಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ. ಕಡಿಯಾಳಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಉಡುಪಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರನ್ನು ಭವ್ಯವಾಗಿ […]

ಕ್ರೀಡೆಯು ದೈಹಿಕ ಶಕ್ತಿಯ ಜೊತೆಗೆ ಮಾನಸಿಕ ಶಕ್ತಿಯನ್ನು ವೃದ್ಧಿಸುತ್ತದೆ : ಡಾ. ಎಚ್ ಎಸ್ ಬಲ್ಲಾಳ್

ಉಡುಪಿ : ಕ್ರೀಡೆಯು ದೈಹಿಕ ಶಕ್ತಿಯ ಜೊತೆಗೆ ಮಾನಸಿಕ ಶಕ್ತಿಯನ್ನು ವೃದ್ಧಿಸುತ್ತದೆ. ಕ್ರೀಡೆಯಲ್ಲಿ ಜಯ ಗಳಿಸುವುದೆ ಮುಖ್ಯವಲ್ಲ ಭಾಗವಹಿಸುವಿಕೆಯು ಮುಖ್ಯವಾಗಿದೆ. ಆಸಕ್ತಿ, ಕಠಿನ ಪರಿಶ್ರಮ ಮತ್ತು ಆತ್ಮವಿಶ್ವಾಸಗಳು ಕ್ರೀಡಾಳುಗಳಲ್ಲಿದ್ದರೆ ಮಾತ್ರ ಕ್ರೀಡೆಯಲ್ಲಿ ಹಾಗೂ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಪ್ರೋ ವೈಸ್ ಚಾನ್ಸಲರ್ ಡಾ. ಎಚ್ ಎಸ್ ಬಲ್ಲಾಳ್ ಹೇಳಿದರು.

ಎಂ.ಸಿ.ಸಿ. ಬ್ಯಾಂಕಿನ 15ನೇ ಎಟಿಎಂ ಉಡುಪಿ ಶಾಖೆಯಲ್ಲಿ ಉದ್ಘಾಟನೆ

ಮಂಗಳೂರು: ಎಂಸಿಸಿ ಬ್ಯಾಂಕ್, ಮಂಗಳೂರು ತನ್ನ 15ನೇ ಎಟಿಎಂ ಅನ್ನು ನವಂಬರ್ 23 ರಂದು ಉಡುಪಿ ಶಾಖೆಯಲ್ಲಿ ಉದ್ಘಾಟಿಸಲಾಯಿತು. ಈ ಎಟಿಎಂ ಅನ್ನು ಉದ್ಯಾವರದ ಸೇಂಟ್ ಕ್ಸೇವಿಯರ್ ಚರ್ಚ್ ಧರ್ಮಗುರು ವಂದನೀಯ ಫಾ| ಅನಿಲ್ ಡಿಸೋಜಾ ಉದ್ಘಾಟಿಸಿದರು. ಉಡುಪಿಯ ಶೋಕಮಾತೆ ಚರ್ಚ್ ಧರ್ಮಗುರು ವಂದನೀಯ ಫಾ| ಚಾರ್ಲ್ಸ್ ಮಿನೇಜಸ್ ಅವರು ಎಟಿಎಂ ಅನ್ನು ಆಶೀರ್ವದಿಸಿದರು. ಹೊಸದಾಗಿ ಉದ್ಘಾಟನೆಗೊಂಡ ಎಟಿಎಂನಿಂದ ಮೊದಲ ನಗದು ಹಿಂಪಡೆಯುವಿಕೆಯನ್ನು ತಲ್ಲೂರಿನ ಶಿವಪ್ರಸಾದ್ ಶಿವರಾಮ ಶೆಟ್ಟಿ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ […]

ಮಣಿಪಾಲ- ಮಂಗಳೂರಿನ ಪ್ರಸಿದ್ಧ ಪ್ರೊಡಕ್ಷನ್ & ಪ್ರೊಸೆಸಿಂಗ್ ಇಂಡಸ್ಟ್ರಿಯಲ್ಲಿ ಉದ್ಯೋಗವಕಾಶ!

ಉಡುಪಿ:ಮಣಿಪಾಲ- ಮಂಗಳೂರಿನ ಪ್ರಸಿದ್ಧ ಪ್ರೊಡಕ್ಷನ್ & ಪ್ರೊಸೆಸಿಂಗ್ ಇಂಡಸ್ಟ್ರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 1 ಪ್ರೊಡಕ್ಷನ್ ಸೂಪರ್ ವೈಸರ್ -5 Posts2 ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ – 5 Posts3 ಸ್ಟೋರ್ ಇನ್ ಚಾರ್ಜ್ – 4 Posts4 ಮೆಷಿನ್ ಆಪರೇಟರ್ -10 Posts5 ಎಲೆಕ್ಟ್ರೀಷಿಯನ್ -50Posts6 ಅಕೌಂಟೆಂಟ್ – 2 Posts7ಬಿಲ್ಲಿಂಗ್ / ಡಾಟಾ ಎಂಟ್ರಿ – 20 Posts ಆಕರ್ಷಕ ವೇತನದೊಂದಿಗೆ PF-ESI ಸೌಲಭ್ಯವಿದೆ. ITI, ಡಿಗ್ರಿ, ಡಿಪ್ಲೊಮಾ ಆಗಿರುವ ಅಭ್ಯರ್ಥಿಗಳು ಕೂಡಲೇ […]

ಪ್ರಧಾನಿ ಮೋದಿ ಉಡುಪಿ ಭೇಟಿ ಹಿನ್ನೆಲೆ- ಎಸ್ ಪಿಜಿ ಮತ್ತು ಎಎಸ್ ಟಿ ತಂಡದಿಂದ ಭದ್ರತಾ ತಪಾಸಣೆ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಇದೇ ನ.28ರಂದು ಉಡುಪಿ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಲಿದ್ದಾರೆ‌. ಈ ಹಿನ್ನೆಲೆಯಲ್ಲಿ ಎಸ್ ಪಿಜಿ ಮತ್ತು ಆ್ಯಂಟಿ ಸಬೋಟೇಜ್ ಚೆಕ್ (Anti sabotage check) ತಂಡವು ಕಾರ್ಯಕ್ರಮದ ಸಿದ್ಧತೆ ಮತ್ತು ವೇದಿಕೆ ನಿರ್ಮಾಣ ಕಾರ್ಯದ ಪರಿಶೀಲನೆಯನ್ನು ನಡೆಸುತ್ತಿವೆ. ಎಸ್ ಪಿಜಿ ಮತ್ತು ಎಎಸ್ ಟಿ ತಂಡವು ಆದಿಉಡುಪಿಯ ಹೆಲಿಪ್ಯಾಡ್,ಕರಾವಳಿ ಬೈಪಾಸ್, ಸಿಟಿ ಬಸ್ ನಿಲ್ದಾಣ, ಕಲ್ಸಂಕ ಮಾರ್ಗವಾಗಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.ಜೊತೆಗೆ ಕೃಷ್ಣಮಠ ಮತ್ತು ಪೆಂಡಾಲ್ […]