ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ವಿಧಿವಶ.

ದೀರ್ಘ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್‌ನ ಹಿರಿಯ ನಟ, ಎವರ್‌ಗ್ರೀನ್ ಸ್ಟಾರ್, ಆಕ್ಷನ್ ಕಿಂಗ್ ಧರ್ಮೇಂದ್ರ ಅವರು 89ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಕಳೆದ ಕೆಲವು ತಿಂಗಳಿನಿಂದಲೂ ದೀರ್ಘ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರು ಇಂದು ಮುಂಬೈನ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರನ್ನ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅನೇಕ ಬಾಲಿವುಡ್ ತಾರೆಯರು ಅವರನ್ನ ಭೇಟಿ ಮಾಡಲು ಆಸ್ಪತ್ರೆಗೆ ಧಾವಿಸಿದ್ದರು. ಸಲ್ಮಾನ್ […]
ಶ್ರದ್ದಾ ಭಕ್ತಿಯಿಂದ ಜರುಗಿದ ಉಡುಪಿ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ

ಉಡುಪಿ: ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ಜರಗಿತು. ಕ್ರಿಸ್ತರಾಜರ ಮಹೋತ್ಸವದ ಪ್ರಧಾನ ಬಲಿಪೂಜೆಯ ನೇತೃತ್ವ ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ‘ನಾವು ತೋರಿಸುವ ಪ್ರೀತಿ ತೋರ್ಪಡಿಕೆಯಾಗಿರದೆ ಅದನ್ನು ಕಾರ್ಯದ ಮೂಲಕ ಮಾಡಿ ತೋರಿಸುವಂತಿರಬೇಕು. ಪ್ರೀತಿ ಮತ್ತು ಸೇವೆ ಕ್ರೈಸ್ತ ಧರ್ಮದ ಮೂಲ ತತ್ವವಾಗಿದ್ದು, ಅದನ್ನು ನಮ್ಮ ನೆರೆಹೊರೆಯವರಲ್ಲಿ ತೋರ್ಪಡಿಸಲು ಹಿಂಜರಿಯಬಾರದು’ ಮುಂದಿನ ವರ್ಷವನ್ನು ಉಡುಪಿ […]
ಮಣಿಪಾಲದ MSDC ಯಲ್ಲಿದೆ 20ಕ್ಕೂ ಹೆಚ್ಚಿನ ವೃತ್ತಿಪರ ಕೋರ್ಸ್’ಗಳು, ನಿಮ್ಮ ಭವಿಷ್ಯ ಕಟ್ಟಿಕೊಳ್ಳಲು ಇಲ್ಲಿದೆ ಬೆಸ್ಟ್ ಆಯ್ಕೆ.

ಮಣಿಪಾಲ: ಮಣಿಪಾಲದ ಡಾ. ಟಿ. ಎಂ. ಎ. ಪೈ ಫೌಂಡೇಶನ್‌ನ ಘಟಕವಾದ MSDC ಮಣಿಪಾಲ್ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ 20ಕ್ಕೂ ಹೆಚ್ಚಿನ ಕೌಶಲ್ಯಾದಾರಿತ, ವೃತ್ತಿಪರ, ಭವಿಷ್ಯಕ್ಕೆ ಪೂರಕವಾದ ಕೋರ್ಸ್ ಗಳು ನಿಮಗಾಗಿ ಕಾದಿದೆ. ಇಲ್ಲಿನ ಕೋರ್ಸ್ ಗಳು ನಿಮಗೆ ಉದ್ಯೋಗವನ್ನು ಕೂಡ ನೀಡುತ್ತದೆ ಇದರಿಂದ ನಿಮ್ಮ ಭವಿಷ್ಯವನ್ನು ಗಟ್ಟಿಗೊಳಿಸಿಕೊಳ್ಳಬಹುದು.!ಹಾಗಾದ್ರೆ ಇನ್ನೂ ಒಂದೊಳ್ಳೆ ಉದ್ಯೋಗಾದಾರಿತ ಕೋರ್ಸ್ ಗಳ ಬಗ್ಗೆ ಎಲ್ಲೆಲ್ಲೋ ಜಾಲಾಡಬೇಕಿಲ್ಲ. ಮಣಿಪಾಲದ MSDC ನಿಮಗೆ ಭವಿಷ್ಯ ಕೊಡಲಿದೆ. ಹೊಸ ಕೋರ್ಸ್ ಗಳಿಗೆ ಪ್ರವೇಶಾತಿ ಆರಂಭಗೊಂಡಿದ್ದು ನಿಮ್ಮ ಕನಸುಗಳನ್ನು ಇನ್ನಷ್ಟು […]
ಉಡುಪಿಯ ಸ್ವಸ್ತಿಕ್ ಕಿವಿ, ಮೂಗು, ಗಂಟಲು ಚಿಕಿತ್ಸಾಲಯದಲ್ಲಿ ವಿವಿಧ ರೀತಿಯ ಅಲರ್ಜಿ ಸಮಸ್ಯೆಗಳಿಗೆ ಸಿಗುತ್ತೆ ಅತ್ಯುತ್ತಮ ಪರಿಹಾರ

ರಿಯಾಯಿತಿ ದರದಲ್ಲಿ ಶ್ರವಣ ಸಾಧನಗಳು ಲಭ್ಯ:ಇಲ್ಲಿ ಕಿವಿ ಕೇಳಿಸುವ ಸಮಸ್ಯೆ ಇದ್ದವರಿಗೆ ಸಂದರ್ಶನ ಹಾಗೂ ಶ್ರವಣ ಶಕ್ತಿ ಪರೀಕ್ಷೆಯಾದ ಆಡಿಯೋ ಮೆಟ್ರಿ ಪರೀಕ್ಷೆಯನ್ನು ಮಾಡಲಾಗುವುದು. ಹಾಗೂ ಸೂಕ್ತ ಸಲಹೆ ನೀಡಲಾಗುವುದು. ಈ ಶ್ರವಣ ಸಾಧನ ಕೇಂದ್ರವು ಶ್ರವಣ ಸಾಧನಗಳ ಸೇಲ್ಸ್ ಮತ್ತು ಸರ್ವಿಸ್’ನ ಉಡುಪಿ ಸಿಟಿಯಲ್ಲಿ ಹೆಸರುವಾಸಿಯಾಗಿರುವ ಈ ಕೇಂದ್ರದಲ್ಲಿ ಕಿವಿ ಕೇಳಿಸುವ ಸಮಸ್ಯೆ ಇದ್ದವರಿಗೆ ಕ್ರಯಕ್ಕೆ ರಿಯಾಯಿತಿ ದರದಲ್ಲಿ ಪ್ರಸಿದ್ಧ ಬ್ರಾಂಡೆಡ್ ಕಂಪನಿಯ ಶ್ರವಣ ಸಾಧನಗಳು ಎರಡು ವರ್ಷ ವಾರಂಟಿಯೊಂದಿಗೆ ದೊರೆಯುತ್ತದೆ. ಇದಲ್ಲದೆ ಹಳೆಯ ಶ್ರವಣ […]
ಶಂಕರನಾರಾಯಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ 21 ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

ಉಡುಪಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ವಲಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಂಡಳ್ಳಿ ಇವರ ಸಹಯೋಗದಲ್ಲಿ ನಡೆದ 2025 -26ನೇ ಸಾಲಿನ, ಶಂಕರನಾರಾಯಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮದರ್ ತೆರೇಸಾ ಶಿಕ್ಷಣ ಸಂಸ್ಥೆ , ಶಂಕರನಾರಾಯಣ ಇಲ್ಲಿನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಹಲವಾರು ಬಹುಮಾನಗಳನ್ನು ಪಡೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಪ್ರಥಮ ಸ್ಥಾನ ಪಡೆದ 21 ಮಂದಿ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆ ಆಗಿರುತ್ತಾರೆ. […]