ಗಂಟಲು ನೋವಿಗೆ ಔಷಧಿ ಬಳಸುವುದಕ್ಕಿಂತ ಈ ನಾಲ್ಕು ಮನೆಮದ್ದು ಬಳಸುವುದು ಉತ್ತಮ!

ಚಳಿಗಾಲ, ಧೂಳು, ಶೀತ–ಜ್ವರ ಅಥವಾ ಧ್ವನಿ ಹೆಚ್ಚು ಬಳಸುವ ಅಭ್ಯಾಸದಿಂದ ಗಂಟಲು ನೋವು ಕಾಣಿಸಿಕೊಳ್ಳಬಹುದು. ಮಾತನಾಡಲು ಕಷ್ಟ, ಆಹಾರ ನುಂಗುವಾಗ ನೋವು, ಗಂಟಲಿನಲ್ಲಿ ಕೆರೆತ, ಅಥವಾ ಕಿರಿಕಿರಿ ಇವು ಸಾಮಾನ್ಯ ಲಕ್ಷಣಗಳು. ಔಷಧಿ ಬಳಸುವುದಕ್ಕಿಂತ ಮೊದಲು ಮನೆಯಲ್ಲಿ ಲಭ್ಯವಿರುವ ಕೆಲವು ಮನೆಮದ್ದುಗಳು ಗಂಟಲು ನೋವನ್ನು ಬೇಗ ನಿವಾರಿಸುತ್ತದೆ. ಬಿಸಿ ನೀರಿಗೆ ಅರ್ಧ ಉಪ್ಪು ಹಾಕಿ ಬಾಯಿ ಮುಕ್ಕಳಿಸಿ: ಒಂದು ಗ್ಲಾಸ್ ಬಿಸಿ ನೀರಿಗೆ ಅರ್ಧ ಟೀಸ್ಪೂನ್ ಉಪ್ಪು ಹಾಕಿ ದಿನಕ್ಕೆ 2–3 ಬಾರಿ ಬಾಯಿ ಮುಕ್ಕಳಿಸಿದರೆ ಗಂಟಲಿನಲ್ಲಿ […]
ನಾಯಕತ್ವದ ಬದಲಾವಣೆಯ ಬಗ್ಗೆ ಹೈ ಕಮಾಂಡ್ ನಾಯಕರ ತೀರ್ಮಾನವೇ ಅಂತಿಮ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಹೈ ಕಮಾಂಡ್ ನಾಯಕರು ಹೇಳುವ ಮಾತೇ ಅಂತಿಮವಾಗಿದ್ದು, ನಾನಾಗಲಿ, ಡಿಸಿಎಂ ಡಿಕೆ ಶಿವಕುಮಾರ ಆಗಲಿ ವರಿಷ್ಠರು ಹೇಳಿದ್ದನ್ನು ಪಾಲಿಸುತ್ತೇವೆ, ಅಲ್ಲಿಯವರೆಗೆ ನಾನೇ ಮುಂದುವರೆಯುತ್ತೇನೆ, ಬಜೆಟ್ ಕೂಡ ನಾನೇ ಮಂಡಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ನಾಯಕತ್ವದ ಬದಲಾವಣೆಯ ಬಗ್ಗೆ ಹೈ ಕಮಾಂಡ್ ನಾಯಕರು ಮಾತನಾಡಿದ್ದಾರಾ..? ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ್ದು, ಅವರೇ ಹೇಳದಿದ್ದ ಮೇಲೆ ಈ ಚರ್ಚೆ ಅನಾವಶ್ಯಕ, ದೆಹಲಿಗೆ ಹೋಗುವವರು ಹೋಗಲಿ ಎಂದು ಹೇಳಿದ್ದಾರೆ. ನಿನ್ನೆ ಕಾಂಗ್ರೆಸ್ನ ಕೆಲ ಶಾಸಕರು […]
ನವೆಂಬರ್ 21 ರಿಂದ 23: ಹೆಬ್ರಿಯಲ್ಲಿ ತೋಟಗಾರಿಕಾ ಸಸ್ಯ ಮೇಳ

ಹೆಬ್ರಿ ತೋಟಗಾರಿಕಾ ರೈತ ಉತ್ಪಾದಕ ಸಂಸ್ಥೆ ವತಿಯಿಂದ ಹೆಬ್ರಿಯಲ್ಲಿ ನವೆಂಬರ್ 21ರಿಂದ 23 ವರೆಗೆ ಮೂರು ದಿನಗಳ ಕಾಲ ತೋಟಗಾರಿಕಾ ಸಸ್ಯ ಮೇಳವು ಹೆಬ್ರಿ ಪ್ರವಾಸಿ ಮಂದಿರದ ಬಳಿ ನಡೆಯಲಿದೆ. ಸಸ್ಯ ಪ್ರದರ್ಶನ ಮತ್ತು ಮಾರಾಟ ವಸ್ತು ಪ್ರದರ್ಶನ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಉಡುಪಿ ಜ್ಞಾನಸುಧಾ: ಜ್ಞಾನ ಸಂಭ್ರಮ 2025

ಉಡುಪಿ: ಶಿಕ್ಷಣವು ದೇಶದ ಬದಲಾವಣೆಯ ಬಹುಮುಖ್ಯ ಅಸ್ತ್ರ. ದೇಶದ ಭವಿಷ್ಯವೇ ವಿದ್ಯಾರ್ಥಿಗಳು. ಅಂತಹ ಶ್ರೇಷ್ಠ ವಿದ್ಯಾರ್ಥಿಗಳನ್ನು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಈ ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದೆ. ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರ ಬದ್ಧತೆ, ಕಾಯಕನಿಷ್ಠೆ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ. ಇಂತಹ ಸಂಸ್ಥೆ ನನ್ನ ಕ್ಷೇತ್ರದಲ್ಲಿರುವುದು ನನ್ನ ಹೆಮ್ಮೆ. ಈ ಸಂಸ್ಥೆಯಿಂದ ಇನ್ನಷ್ಟು ಸಾಧಕರು ಮೂಡಿಬರಲಿ ಎಂದು ಉಡುಪಿಯ ಶಾಸಕರಾದ ಯಶ್‍ಪಾಲ್ ಸುವರ್ಣರವರು ಅಭಿಪ್ರಾಯ ಪಟ್ಟರು. ಇವರು ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ […]
ಅಕ್ರಮವಾಗಿ ಸಾರ್ವಜನಿಕ ರಸ್ತೆ ಅಗೆದು ಹಾನಿ ಮಾಡಿರುವ ಕಾಂಗ್ರೆಸ್ ಮುಖಂಡನ ಮೇಲೆ ಕೂಡಲೇ ಕ್ರಮ ಕೈಗೊಳ್ಳಿ: ಸುರೇಶ್ ಶೆಟ್ಟಿ ಶಿವಪುರ

ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಸರ್ಕಾರಿ ಕಾಮಗಾರಿಗಳಲ್ಲಿ ಏಕಸ್ವಾಮ್ಯತೆ ಸಾಧಿಸಲು ಗುತ್ತಿಗೆದಾರ ಮೇಲೆ ದಬ್ಬಾಳಿಕೆ ಹಾಗೂ ಸಾರ್ವಜನಿಕ ಸ್ವತ್ತುಗಳಿಗೆ ಹಾನಿ ಮಾಡಿರುವ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕಾರ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿವಪುರ ಒತ್ತಾಯಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಮೂಲಕ ಮುನಿಯಾಲು-ಪಡುಕೂಡುರು ಖಜಾನೆ ರಸ್ತೆ ನಿರ್ಮಾಣದ 2.50 ಕೋಟಿ ಕಾಮಗಾರಿ ಪ್ರಶಾಂತ್ ಶೆಟ್ಟಿ ಮಳವಳ್ಳಿ ಎಂಬವರಿಗೆ ಟೆಂಡರ್ ಆಗಿತ್ತು. ಈ ಕಾಮಗಾರಿ ಇನ್ನಷ್ಟೇ ಪ್ರಾರಂಭವಾಗಬೇಕಿತ್ತು. ಆದರೆ […]