ಹಿರಿಯಡಕ: ಚೂರಿ ಇರಿದು ಕೊಲೆಗೆ ಯತ್ನಿಸಿದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಹಿರಿಯಡ್ಕ: ಮನೆ ಕಂಪೌಂಡು ಕಟ್ಟುವ ವಿಚಾರದಲ್ಲಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಹಿರಿಯಡ್ಕ ಪೊಲೀಸರು ನ.15ರಂದು ಬಂಧಿಸಿದ್ದಾರೆ. ಹಿರಿಯಡ್ಕ ನಿವಾಸಿ ಹುಸೇನ್ ಶೇಖ್ ಅಹಮ್ಮದ್(74), ಮುಂಬೈಯ ತಮೀಮ್ ಹುಸೇನ್ ಶೇಖ್(34) ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ಕಬ್ಬಿಣದ ಕಟ್ಟರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರಫೀಕ್ ಮತ್ತು ಅವರ ಮಗ ಶಾರೀಕ್ ನ.11ರಂದು ಮನೆಯ ಸುತ್ತಲೂ ಕಂಪೌಂಡ್ ಕಟ್ಟಿಸುತ್ತಿರುವಾಗ ಆರೋಪಿಗಳಾದ ಹುಸೇನ್ […]

ಹಿರಿಯಡಕ: ಮದ್ಯ ಸೇವಿಸಿ ಬಸ್ ಚಾಲನೆ; ಬಸ್ ಚರಂಡಿಗೆ ಬಿದ್ದು ಹೋಟೆಲ್ ಜಖಂ!

ಹಿರಿಯಡ್ಕ: ಬಸ್ಸೊಂದು ಚರಂಡಿಗೆ ಬಿದ್ದು ಅಲ್ಲೇ ಸಮೀಪದ ಹೊಟೇಲ್ ಜಖಂಗೊಳಿಸಿದ ಘಟನೆ ಓಂತಿಬೆಟ್ಟು ಎಂಬಲ್ಲಿ ನ.18ರಂದು ರಾತ್ರಿ ವೇಳೆ ನಡೆದಿದೆ. ಚಾಲಕ ವಿಪರೀತ ಮದ್ಯ ಸೇವಿಸಿ ಚಾಲನೆ ಮಾಡಿದ್ದರಿಂದ ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಚಾಲಕ ವಿಜಯಪುರದ ಮಹಾಂತೇಶ ಆನಂದಗೌಡ ಪಾಟೀಲ(34) ಎಂಬಾತ ವಿಪರೀತ ಮದ್ಯ ಸೇವಿಸಿ ಪ್ರಯಾಣಿಕರಿರುವ ಬಸ್ಸನ್ನು ಮಣಿಪಾಲ ಕಡೆಯಿಂದ ಹಿರಿಯಡಕ ಕಡೆಗೆ ಚಲಾಯಿಸಿಕೊಂಡು ಬಂದು ಬಸ್ ನಿಯಂತ್ರಿಸದೇ ಚರಂಡಿಗೆ ನುಗ್ಗಿಸಿ ಹೋಟೆಲೊಂದರ ಬೋರ್ಡ್ ಮತ್ತು ಬಸ್ಸನ್ನು ಜಖಂಗೊಳಿಸಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರ ನರ ಹತ್ಯೆಗೆ […]