ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಳ ಕಾಲೇಜು ಸ್ನೇಹ ಸಮ್ಮಿಲನ

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜು ರಜತ ಮಹೋತ್ಸವ ಹಾಗೂ ಪ್ರೌಢ ಶಾಲೆಯ ಸುವರ್ಣ ಮಹೋತ್ಸವ ಪೂರ್ವಭಾವಿಯಾಗಿ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಬೆಂಗಳೂರು ವಿಜಯನಗರದ ಆಶಾ ಪ್ರಕಾಶ ಶೆಟ್ಟಿ ಬಂಟರ ಸಭಾ ಭವನದಲ್ಲಿ ನಡೆಯಿತು. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜು ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಿಯದರ್ಶನ್ ಶೆಟ್ಟಿ, ಉಪಾಧ್ಯಕ್ಷ ಪ್ರೌಢಶಾಲೆ ವಿಭಾಗದ ಹಳೆ ವಿದ್ಯಾರ್ಥಿ […]

ಬೈಂದೂರು: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಅವಘಡ: ಸುಟ್ಟು ಭಸ್ಮವಾದ ಕಾರು.!

ಉಡುಪಿ: ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡ ಪರಿಣಾಮ ಚಲಿಸುತ್ತಿದ್ದ ಕಾರೊಂದು ಸುಟ್ಟು ಭಸ್ಮವಾದ ಘಟನೆ ಬೈಂದೂರು ತಾಲೂಕಿನ ನಾವುಂದ ರಾಷ್ಟ್ರೀಯ ಹೆದ್ದಾರಿ 66ರ ಫ್ಲೈ ಓವರ್ ಮೇಲೆ ಸಂಭವಿಸಿದೆ. ಕುಂದಾಪುರದಿಂದ ಉಪ್ಪುಂದಕ್ಕೆ ಚಲಿಸುತ್ತಿದ್ದ ಕಾರಿನಲ್ಲಿ ದುರ್ಘಟನೆ ನಡೆದಿದೆ. ಕಾರು ಚಲಾಯಿಸುತ್ತಿದ್ದ ನಿತೇಶ್ (31) ಮತ್ತು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಂದು (73) ಅದೃಷ್ಟವಶಾತ್​​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಬೈಂದೂರು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಿದರು. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

MSDC ಯಿಂದ ಶುರುವಾಯ್ತು ಒಂದೊಳ್ಳೆ ಕಾರ್ ಸರ್ವೀಸ್: ನಿಮ್ಮ ಕಾರುಗಳಿಗೆ ಇಲ್ಲಿ ಸಿಗುತ್ತೆ ಅತ್ಯುತ್ತಮ ಸೇವೆ

ಮಣಿಪಾಲ: ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (PMA Pai Foundation‌ನ ಘಟಕ)MSDC ಯಿಂದ ಉತ್ತಮ ಕಾರು ಸೇವೆ ಶುರುವಾಗಿದೆ. ಬಹು-ಬ್ರ್ಯಾಂಡ್ ಮೆಕಾನಿಕಲ್ ರಿಪೇರಿ ಹಾಗೂ ಬಾಡಿ ವರ್ಕ್ ತಜ್ಞರು ಇಲ್ಲಿ ಲಭ್ಯರಿದ್ದಾರೆ. ಎಲ್ಲಾ ಪ್ರಮುಖ ಬ್ರ್ಯಾಂಡ್‌ಗಳಿಗಾಗಿ OEM ನಿಯಮಿತ ಮೆಂಟಿನೆನ್ಸ್ ಸೇವೆ ಇಲ್ಲಿದೆ. ಪೆಟ್ರೋಲ್, ಡೀಸೆಲ್, ಎಲೆಕ್ಟ್ರಿಕ್, ಹೈಬ್ರಿಡ್ ದೊಡ್ಡ ಹಾಗೂ ಸಣ್ಣ ಡೆಂಟ್‌ಗಳ ಬಾಡಿ ರಿಪೇರಿ ಮತ್ತು ಪೇಂಟ್ ಕೆಲಸ ಎಲ್ಲವೂ ಇಲ್ಲಿ ನಿಮಗೆ ಸಿಗಲಿದೆ. ಅಲ್ಲದೇ ನಿಮ್ಮ ಕಾರುಗಳಿಗೆ ಉಚಿತ ಪಿಕಪ್ ಮತ್ತು ಡೆಲಿವರಿ […]

ಜ. 18ರಂದು ಮಂಗಳೂರಿನಲ್ಲಿ ಜಾಗತಿಕ ಬಿಲ್ಲವರ ಕ್ರೀಡೋತ್ಸವ-2026

ಉಡುಪಿ: ಅಖಿಲ ಭಾರತ ಬಿಲ್ಲವರ ಯೂನಿಯನ್ ಕುದ್ರೋಳಿ ಮಂಗಳೂರು ವತಿಯಿಂದ ಬಿಲ್ಲವ ಸಂಘಟನೆಗಳ ಸಹಯೋಗದಲ್ಲಿ ಇದೇ ಪ್ರಪ್ರಥಮ ಬಾರಿಗೆ ‘ಜಾಗತಿಕ ಬಿಲ್ಲವರ ಕ್ರೀಡೋತ್ಸವ-2026 ‘ ಮುಂಬರುವ ಜ.18ರಂದು ಮಂಗಳೂರಿನ ನೆಹರು ಮೈದಾನದಲ್ಲಿ ಸಂಸ್ಥೆಯ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಅವರ ನೇತೃತ್ವದಲ್ಲಿ ನಡೆಯಲಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಖಿಲ ಭಾರತ ಬಿಲ್ಲವರ ಯೂನಿಯನ್‌ನ ಉಪಾಧ್ಯಕ್ಷ ಕೆ.ಟಿ.ಸುವರ್ಣ ಹಾಗೂ ಕ್ರೀಡಾಕೂಟದ ಮಹಾ ಸಂಚಾಲಕ ಡಾ.ಸಂತೋಷ್ ಭೈರಂಪಳ್ಳಿ ಅವರು, ಈ ಕ್ರೀಡಾ ಪಂದ್ಯಾಟದಲ್ಲಿ ಬಿಲ್ಲವ ಮತ್ತು ಅದರ ಇತರ […]

ಕಾರ್ಕಳ: ಮಿಯ್ಯಾರು ವಸತಿ ಶಾಲೆ ವಿವಾದ; ಶಿಕ್ಷಕನ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

ಉಡುಪಿ: ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಧಾರ್ಮಿಕ ಚಿಹ್ನೆಗಳಾದ ಜನಿವಾರ ಮತ್ತು ಕೈದಾರ(ರಕ್ಷಾಸೂತ್ರ)ಗಳನ್ನು ಬಲವಂತವಾಗಿ ತೆಗೆಸಿ ದೈಹಿಕ ಶಿಕ್ಷೆಗೆ ಒಳಪಡಿಸಿದ್ದಾರೆಯೆಂಬ ಗಂಭೀರ ಆರೋಪ ದೈಹಿಕ ಶಿಕ್ಷಣ ಶಿಕ್ಷಕ ಮದರಶಾ ಎಸ್. ಮಕಾಂದರ್ ವಿರುದ್ಧ ಕೇಳಿಬಂದಿದೆ. ಪೋಷಕರು ಹಾಗೂ ಗ್ರಾಮಸ್ಥರ ಆಕ್ರೋಶದ ನಡುವೆ, ಶಾಲಾ ಪ್ರಾಂಶುಪಾಲರು ಸಂಬಂಧಿತ ಶಿಕ್ಷಕರನ್ನು ಕರ್ತವ್ಯದಿಂದ ವಜಾಗೊಳಿಸಿರುವುದು ತಿಳಿದುಬಂದಿದೆ. ಹಿಂದೂ ಜನಜಾಗೃತಿ ಸಮಿತಿಯು ಈ ಕೃತ್ಯವನ್ನು ಮಕ್ಕಳ ಹಕ್ಕುಗಳ ಸಂರಕ್ಷಣಾ ಅಧಿನಿಯಮಗಳ ಉಲ್ಲಂಘನೆ ಎಂದು ಗುರುತಿಸಿ, ತಕ್ಷಣ FIR ದಾಖಲಿಸಿ ಬಂಧನ […]