ಸೈಬರ್ ಇಮ್ಯುನಿಟಿ ಮತ್ತು ಡಿಜಿಟಲ್ ಫರೆನ್ಸಿಕ್ಸ್ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರದ ಉದ್ಘಾಟನಾ ಸಮಾರಂಭ.

ಕುಂದಾಪುರ: ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕುಂದಾಪುರದ ಸಂಶೋಧನಾ ಘಟಕದ ವತಿಯಿಂದ, ಸೈಬರ್ ಇಮ್ಯುನಿಟಿ ಮತ್ತು ಡಿಜಿಟಲ್ ಫರೆನ್ಸಿಕ್ಸ್ ಶ್ರೇಷ್ಠತಾ ಕೇಂದ್ರದ ಉದ್ಘಾಟನಾ ಸಮಾರಂಭವು 12 ನವೆಂಬರ್ 2025ರಂದು ಬೆಳಿಗ್ಗೆ 10:30ಕ್ಕೆ ಕಾಲೇಜು ಆವರಣದಲ್ಲಿ ನೆರವೇರಿತು. ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಉದ್ಘಾಟಿಸುತ್ತಾ ಮುಖ್ಯ ಅತಿಥಿಯಾಗಿಬಂದ ಶ್ರೀ ವಿಜಯಂತ್ ಗೌರ್, ಡೈರೆಕ್ಟರ್ ಜನರಲ್, ಸೈಬರ್ ಸೆಕ್ಯುರಿಟಿ ಅಸೋಸಿಯೇಷನ್ ಆಫ್ ಇಂಡಿಯಾ (ದೆಹಲಿ), ಅವರು ಸೈಬರ್ ಜಾಗೃತಿ, ಡಿಜಿಟಲ್ ರಕ್ಷಣಾ ವ್ಯವಸ್ಥೆ ಹಾಗೂ ಡಿಜಿಟಲ್ ಫರೆನ್ಸಿಕ್ಸ್‌ನ ನೈಜ ಜಗತ್ತಿನ […]
ಉಡುಪಿ ಎಕ್ಸ್ ಪ್ರೆಸ್ “ಅಮ್ಮ ವಿತ್ ಕಂದಮ್ಮ ಸೀಸನ್-6” ನ ಬಹುಮಾನ ವಿಜೇತ ಅಮ್ಮ-ಮಕ್ಕಳಿವರು

ಉಡುಪಿ: ವಸ್ತುನಿಷ್ಠ ವರದಿಗಾರಿಕೆಗೆ ಹೆಸರುವಾಸಿಯಾದ ನಿಮ್ಮ ಉಡುಪಿ ಎಕ್ಸ್ ಪ್ರೆಸ್ ಪ್ರತಿ ಬಾರಿಯಂತೆಯೆ ಈ ಬಾರಿಯೂ ಮಕ್ಕಳ ದಿನಾಚರಣೆ ಪ್ರಯುಕ್ತ ಮುದ್ದು ಕಂದಮ್ಮಗಳ ಜೊತೆ ತಾಯಂದಿರ ಫೋಟೋ ಸ್ಪರ್ಧೆ “ಅಮ್ಮ ವಿದ್ ಕಂದಮ್ಮ-ಸೀಸನ್ 6” ಅನ್ನು ಏರ್ಪಡಿಸಿದ್ದು, ಸತತ ಆರನೇ ವರ್ಷವೂ ಅಮ್ಮಂದಿರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಾರಿ ವಿಶೇಷವಾಗಿ ಚಿತ್ರನಟಿ ಸ್ವಾತಿ ಶೆಟ್ಟಿ ಹಾಗು ಕನ್ನಡ ಚಿತ್ರ ನಟಿ ಶಾಂತಿ ಗೌಡ ಇವರು ತೀರ್ಪುಗಾರರಾಗಿ ಅತ್ಯುತ್ತಮ ಫೋಟೋಗಳನ್ನು ಆಯ್ಕೆ ಮಾಡಿ ವಿಜೇತರನ್ನು ಘೋಷಿಸಿದ್ದಾರೆ. ಇವರು […]
ಉಡುಪಿ:ಭಾರತೀಯ ಸೇನೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿ

ಉಡುಪಿ: ಭಾರತೀಯ ಸೇನೆ/ ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ಸಿದ್ದತೆ ಬಗ್ಗೆ ಉಚಿತ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿ ನೀಡಲಾಗುತ್ತಿದ್ದು ಅರ್ಹ ಅಭ್ಯರ್ಥಿಗಳು ಆಯಾ ಜಿಲ್ಲಾ/ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರ್ಜಿ ನಮೂನೆಗಳನ್ನು ಪಡೆದು ಭರ್ತಿ ಮಾಡಿ ನವೆಂಬರ್ 26 ರಒಳಗಾಗಿ ಇಲಾಖೆಯ ಕಛೇರಿಗೆ ಖುದ್ದಾಗಿ ಅಥವಾ https://udupi.nic.in ವೆಬ್‌ಸೈಟ್ ನಲ್ಲಿ ಅಥವಾ ಅಂಚೆ ಮೂಲಕಸಲ್ಲಿಸಬಹುದಾಗಿದೆ. 10ನೇ ತರಗತಿಯಲ್ಲಿ ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 […]
ಬೈಂದೂರು: ವ್ಯಕ್ತಿ ನಾಪತ್ತೆ

ಉಡುಪಿ: ಬೈಂದೂರು ತಾಲೂಕು ಬಿಜೂರು ಗ್ರಾಮದ ಕಂಚಿಕಾನ ನಿವಾಸಿ ಸುರೇಂದ್ರ (31) ಎನ್ನುವ ವ್ಯಕ್ತಿಯು ಅ.27 ರಂದು ಬೆಳಿಗ್ಗೆ 8 ಗಂಟೆಗೆ ಕೆಲಸದ ನಿಮಿತ್ತ ಕುಂದಾಪುರಕ್ಕೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 5 ಇಂಚು ಎತ್ತರ, ಕನ್ನಡ ಮಾತನಾಡ ಬಲ್ಲವರಾಗಿದ್ದು ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬೈಂದೂರು ಪೋಲಿಸ್ ಠಾಣೆಯನ್ನುಸಂಪರ್ಕಿಸುವಂತೆ ಬೈಂದೂರು ಪೋಲಿಸ್ ಠಾಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.