ಕಾರ್ಕಳ: ಭಾಸ್ಕರ್ ಎಸ್. ಕೋಟ್ಯಾನ್ ಅವರಿಗೆ ಸಹಕಾರ ರತ್ನ ಪ್ರಶಸ್ತಿ

ಕಾರ್ಕಳ: ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ, ಬೆಳುವಾಯಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಕೊಳಕೆ ಇರ್ವತ್ತೂರಿನ ಭಾಸ್ಕರ್ ಎಸ್. ಕೋಟ್ಯಾನ್ ಅವರು ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಕರ್ನಾಟಕ ಸರಕಾರ ನ.14ರಂದು ಸಹಕಾರಿ ರತ್ನ ಪ್ರಶಸ್ತಿ ಪ್ರದಾನ ಮಾಡುತ್ತಿದೆ. ಸಹಕಾರಿ ಮಾತ್ರವಲ್ಲದೇ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲೂ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಭಾಸ್ಕರ್ ಕೋಟ್ಯಾನ್, ವಿಶ್ವ ಹಿಂದೂ ಪರಿಷತ್ ಕಾರ್ಕಳ ಅಧ್ಯಕ್ಷರಾಗಿ, ಆನೆಕೆರೆ ಶ್ರೀ ಕೃಷ್ಣ ಕ್ಷೇತ್ರದ ಆಡಳಿತ ಮೊಕ್ತಸರರಾಗಿ, ಮೂಡುಬಿದಿರೆ ಭಾರತ್ […]
ಉಡುಪಿ:ನ.15,16 ರಂದು ಸಾವಿತ್ರಿ ನಾಟ್ಯಶಾಲ(ರಿ) ಉಡುಪಿಯಲ್ಲಿ ದಶ ಹರ್ಷ ಪರ್ವೋತ್ಸವ – 2025

ಉಡುಪಿ:ದಿನಾಂಕ 15- 11 – 2025 & 16 – 11 – 2025 ರಂದು ಐವೈಸಿ ಆಡಿಟೋರಿಯಂ ಉಡುಪಿಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕಿ ಗುರು ವಿದುಷಿ ಶ್ರೀಮತಿ ಶ್ರೀವಿದ್ಯಾ ಸಂದೇಶ್ ರವರು ತಿಳಿಸಿದ್ದಾರೆ. ನವೆಂಬರ್ 15 ರಂದು ಬೆಳಿಗ್ಗೆ 9.30ಕ್ಕೆ ಮೆರವಣಿಗೆ ಪ್ರಾರಂಭಗೊಂಡು 10 ಗಂಟೆಗೆ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಎಡನೀರು ಮಠ ಇವರ ಉಪಸ್ಥಿತಿಯಲ್ಲಿ ಎರಡು ದಿನಗಳ ದಶ ಹರ್ಷ ಪರ್ವೋತ್ಸವ ಎಂಬ ಭರತನಾಟ್ಯ ನೃತ್ಯೋತ್ಸವದ ಸಮಾರೋಪ […]
ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ವಿಧಿವಶ

ಬೆಂಗಳೂರು: ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ(ವ. 114) ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು (ನ.14) ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ 1911 ಜೂನ್ 30ರಂದು ಜನಿಸಿದ್ದ ತಿಮ್ಮಕ್ಕ ಅವರು, ವೃಕ್ಷಮಾತೆ ಎಂದೇ ಪ್ರಸಿದ್ಧಿ ಪಡೆದಿದ್ದರು. ನಂತರ ಮಾಗಡಿ ತಾಲೂಕಿನ ಚಿಕ್ಕಯ್ಯ ಎಂಬುವವರನ್ನು ವಿವಾಹವಾದರು. ಆದರೆ ದುರದೃಷ್ಟವಶಾತ್, ಇವರಿಗೆ ಮಕ್ಕಳಿರಲಿಲ್ಲ. ಹೀಗಾಗಿ ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ […]
ಉಡುಪಿ: ಹೈಕೋರ್ಟ್ ಆದೇಶದಂತೆ ನಗರ ವ್ಯಾಪ್ತಿಯಲ್ಲಿ ದುಡಿಯಲು ಅವಕಾಶ ಕಲ್ಪಿಸಿಕೊಡಿ -ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘಟನೆಯ ಆಗ್ರಹ

ಉಡುಪಿ: ನಗರ ಪರವಾನಿಗೆ ಹೊಂದಿರುವ ರಿಕ್ಷಾ ಚಾಲಕರಿಗೆ ಹೈಕೋರ್ಟ್ ಆದೇಶ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆಯ ಸುತ್ತೋಲೆಯಂತೆ ನಗರ ಪ್ರದೇಶ ಮತ್ತು ಪ್ರತೀ ನಿಲ್ದಾಣದ ವ್ಯಾಪ್ತಿ ಪ್ರದೇಶದ 7 ಕಿ.ಮೀನಲ್ಲಿ ದುಡಿಯಲು ಅವಕಾಶ ಮಾಡಿಕೊಡಬೇಕು ಎಂದು ಕೋರ್ಟ್ ಹಿಂಬದಿ ರಸ್ತೆಯ ನಗರ ಪರವಾನಿಗೆ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘಟನೆ ಆಗ್ರಹಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌರವಾಧ್ಯಕ್ಷ ವಿಠ್ಠಲ ಜತ್ತನ್ನ ಅವರು, ಈ ಬಗ್ಗೆ 6 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಇತರ ನಿಲ್ದಾಣದ ಚಾಲಕರು […]
ಮಣಿಪಾಲದ MSDC ಯಲ್ಲಿ ವೃತ್ತಿಪರ ಅವಕಾಶವಿರುವ ಕೋರ್ಸ್ ಗಳಿಗೆ ಪ್ರವೇಶಾತಿ ಶುರು! ಈ ಬೆಸ್ಟ್ ಕೋರ್ಸ್ ಗಳಿಗೆ ಈಗಲೇ ಅರ್ಜಿ ಸಲ್ಲಿಸಿ.

ಮಣಿಪಾಲ: ಮಣಿಪಾಲದ ಡಾ. ಟಿ. ಎಂ. ಎ. ಪೈ ಫೌಂಡೇಶನ್‌ನ ಘಟಕವಾದ MSDC ಮಣಿಪಾಲ್ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಹೊಸ ಕೋರ್ಸ್ ಗಳಿಗೆ ಪ್ರವೇಶಾತಿ ಆರಂಭಗೊಂಡಿದ್ದು ನಿಮ್ಮ ಕನಸುಗಳನ್ನು ಇನ್ನಷ್ಟು ಸುಂದರವಾಗಿ ರೂಪಿಸಿಕೊಳ್ಳಲು MSDC ನೀಡುವ ಕೋರ್ಸ್ ಗಳು ನಿಮಗೆ ಬೆಸ್ಟ್ ಆಯ್ಕೆಯಾಗಿದೆ. ಯಾವೆಲ್ಲಾ ಕೋರ್ಸ್ ಗಳು:ನೇಲ್ಸ್ (ನೆಗಡಿ ಆರೈಕೆ)● ಹೇರ್ (ಕೂದಲು ಆರೈಕೆ)● ಸ್ಕಿನ್ (ಚರ್ಮ ಆರೈಕೆ)● ಮೇಕಪ್ (ಅಲಂಕಾರ ಕಲೆ)● ಕಾಸ್ಮೆಟಾಲಜಿ (ಸೌಂದರ್ಯಶಾಸ್ತ್ರ) ಕೋರ್ಸ್ ಗಳಿಗೆ ನೀವು ಪ್ರವೇಶಾತಿ ಪಡೆಯಬಹುದು. ಈ ಎಲ್ಲಾ ಕೋರ್ಸ್ ಗಳು […]