ಹವಾಮಾನ ವೈಪರೀತ್ಯ: ಕಳೆದ ಮೂರು ದಶಕಗಳಲ್ಲಿ ದೇಶದಲ್ಲಿ 80,000 ಮಂದಿ ಬಲಿ; ವರದಿ ಬಿಡುಗಡೆ

ನವದೆಹಲಿ: ಕಳೆದ ಮೂರು ದಶಕಗಳಲ್ಲಿ ಹವಾಮಾನ ವೈಪರೀತ್ಯ ಘಟನಾವಳಿಗಳಿಂದ ಹೆಚ್ಚು ಭಾದಿತ ದೇಶಗಳ ಪೈಕಿ ಭಾರತ ಜಾಗತಿಕವಾಗಿ ಒಂಬತ್ತನೇ ಸ್ಥಾನದಲ್ಲಿದೆ. ಸುಮಾರು 430 ತೀವ್ರ ಸ್ವರೂಪದ ಘಟನೆಗಳಿಂದಾಗಿ (ಹವಾಮಾನ ವೈಪರೀತ್ಯ ) ಸುಮಾರು 80,000ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಇತ್ತೀಚಿನ ವರದಿಯೊಂದು ಹೇಳಿದೆ.ಪರಿಸರ ಚಿಂತಕರ ಚಾವಡಿ ಜರ್ಮನ್‌ವಾಚ್, ಬ್ರೆಜಿಲ್‌ನ ಬೆಲೆಮ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕಾನ್ಫರೆನ್ಸ್‌ನಲ್ಲಿ (COP30) ಮಂಗಳವಾರ ಹವಾಮಾನ ಅಪಾಯ ಸೂಚ್ಯಂಕ (CRI) 2026 ಎಂಬ ವರದಿ ಬಿಡುಗಡೆ ಮಾಡಿತು. ಈ ವರದಿಯ ಪ್ರಕಾರ […]
ಮಂಗಳೂರು:ತ್ರಿಶಾ ಕ್ಲಾಸಸ್ : ಸಿ.ಎ ಫೌಂಡೇಶನ್ ರಿವಿಷನ್ ತರಗತಿಗಳು ಆರಂಭ

ಮಂಗಳೂರು: ಸಿ.ಎ ಪೌಂಡೇಶನ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯವಾಗುವ ಉದ್ದೇಶದಿಂದ ತ್ರಿಶಾ ಕ್ಲಾಸಸ್ ವತಿಯಿಂದ ನವೆಂಬರ್ 14 ರಿಂದ 26 ದಿನಗಳ ಸಿ.ಎ ಫೌಂಡೇಶನ್ ರಿವಿಷನ್ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಅನುಭವಿ ಅಧ್ಯಾಪಕ ವೃಂದ ,ನಾಲ್ಕು ವಿಷಯಗಳ ಸಂಪೂರ್ಣ ಅಧ್ಯಯನ ಐಸಿಎಐ ಮಾದರಿಯ ಪೂರ್ವ ಸಿದ್ಧತಾ ಪರೀಕ್ಷೆ, ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಲಹೆ ಸೂಚನೆಗಳು ಇವೆಲ್ಲವೂ ತರಗತಿಯ ವಿಶೇಷಣಗಳಾಗಿವೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸಲು ಬೇಕಾದ ಆತ್ಮವಿಶ್ವಾಸ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ರಿವಿಶನ್ ತರಗತಿಗಳನ್ನು ಆಯೋಜಿಸಲಾಗಿದೆ. ಆಸಕ್ತರು […]
ನ.16ರಂದು ತುಳು ಕೋಟಿಗೀತಾ ಲೇಖನ ಯಜ್ಞ ಸಮರ್ಪಣೆ

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠ ಉಡುಪಿ ಶ್ರೀಕೃಷ್ಣಮಠ ಹಾಗೂ ಜೈ ತುಳುನಾಡ್ ಉಡುಪಿ ಘಟಕದ ಜಂಟಿ ಆಶ್ರಯದಲ್ಲಿ ತುಳು ಕೋಟಿಗೀತಾ ಲೇಖನ ಯಜ್ಞ ಸಮರ್ಪಣೆ ಕಾರ್ಯಕ್ರಮ ನ.16ರ ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಜೈ ತುಳುನಾಡು ಸಂಸ್ಥೆಯ ಸಂಘಟನ ಕಾರ್ಯದರ್ಶಿ ಸಂತೋಷ್ ಕಟಪಾಡಿ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಂದ್ರತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಸುಮಾರು 150 ಮಂದಿ […]
ಸುಳ್ಳು ಸುದ್ದಿಗಳಿಗೆ ತೆರೆ; ಆಸ್ಪತ್ರೆಯಿಂದ ನಟ ಧರ್ಮೇಂದ್ರ ಬಿಡುಗಡೆ; ಮನೆಯಲ್ಲಿ ಚಿಕಿತ್ಸೆ ನೀಡಲು ನಿರ್ಧಾರ.

ಮುಂಬೈ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅವರು ಇಂದು ಬೆಳಿಗ್ಗೆ(ಬುಧವಾರ) ಆಸ್ಪತ್ರೆಯಿಂದ ಬಿಡುಗಡೆಯಾದರು. ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಧರ್ಮೇಂದ್ರ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅವರ ಕುಟುಂಬ ತಿಳಿಸಿದೆ. ‘ಧರ್ಮೇಂದ್ರ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮನೆಯಲ್ಲಿಯೇ ಅವರ ಚಿಕಿತ್ಸೆ ಮುಂದುವರಿಯಲಿದೆ. ಈ ಸಮಯದಲ್ಲಿ ಮಾಧ್ಯಮಗಳು ಮತ್ತು ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು. ನಮ್ಮ ಕುಟುಂಬದ ಗೌಪತ್ಯೆಯನ್ನು ಗೌರವಿಸಿ’ ಎಂದು ಕುಟುಂಬವು […]
ಉಡುಪಿಯಲ್ಲಿ ಸ್ವೀಟ್ಸ್ ಅಂಗಡಿಗೆ ಬೇಕಾಗಿದ್ದಾರೆ

ಉಡುಪಿ: ಉಡುಪಿಯಲ್ಲಿ ಪ್ರತಿಷ್ಠಿತ ಸ್ವೀಟ್ಸ್ ಅಂಗಡಿಗೆ ಸೇಲ್ಸ್ ಗೆ ಹುಡುಗಿಯರು ಬೇಕಾಗಿದ್ದಾರೆ.ವಿಶೇಷ ಸೂಚನೆ: ಇಲ್ಲಿಯೇ ಉಳಿದುಕೊಳ್ಳುವವರಿಗೆ ಮಾತ್ರ ಊಟ, ವಸತಿ ಒಳಗೊಂಡಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.ಮೊ: 8971588367