ಕಾರ್ಕಳ: ನಲ್ಲೂರು ಸಮೀಪ ಅಕ್ರಮ ಕಸಾಯಿ ಖಾನೆಗೆ ಪೊಲೀಸರ ದಾಳಿ; ದನದ ಮಾಂಸ ಪತ್ತೆ!

ಕಾರ್ಕಳ: ನಲ್ಲೂರು ಹತ್ತಿರದ ತೋಟದಲ್ಲಿ ಅಕ್ರಮವಾಗಿ ದನದ ಹತ್ಯೆ ನಡೆಯುತ್ತಿದೆ ಎಂಬ ಸುಳಿವಿನ ಮೇರೆಗೆ ಹಿಂದೂ ಕಾರ್ಯಕರ್ತರ ಮಾಹಿತಿ ಆಧಾರಿಸಿ ಮಂಗಳವಾರ ಬೆಳಗಿನ ಜಾವ ಪೊಲೀಸರು ದಾಳಿ ನಡೆಸಿದರು. ದಾಳಿಯಲ್ಲಿ ಸುಮಾರು 70 ಕೆ.ಜಿ ದನದ ಮಾಂಸ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆರೋಪಿ ಅಶ್ರಫ್ ಘಟನೆಯ ಬಳಿಕ ಪರಾರಿಯಾಗಿರುವುದಾಗಿ ಮೂಲಗಳು ತಿಳಿಸಿವೆ. ಘಟನೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮಹಜರು ನಡೆಸುತ್ತಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಸ್ಥಳೀಯ ಹಿಂದೂ ಕಾರ್ಯಕರ್ತರ ಸುಳಿವಿನಿಂದಲೇ ಈ ಅಕ್ರಮ ಬಯಲಾಗಿರುವುದಾಗಿ ತಿಳಿದುಬಂದಿದೆ.

ಕೆಂಪುಕೋಟೆ ಬಳಿ ಕಾರು ಸ್ಫೋಟ: ಶಂಕಿತ ಆತ್ಮಹತ್ಯಾ ಬಾಂಬರ್ ಚಿತ್ರ ಬಹಿರಂಗ; ದೆಹಲಿಯಲ್ಲಿ ಹೈ ಅಲರ್ಟ್!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಕಾರು ಸ್ಫೋಟ ಪ್ರಕರಣ ( Delhi Blast ) ದೇಶಾದ್ಯಂತ ಭಾರಿ ಆತಂಕ ಸೃಷ್ಟಿ ಮಾಡಿದೆ. ಆದ್ದರಿಂದ ಇಡೀ ದೇಶದಲ್ಲಿ ಹೈ ಅಲರ್ಟ್​ ಘೋಷಣೆಯಾಗಿದೆ. ನಿನ್ನೆಯಷ್ಟೇ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬರೋಬ್ಬರಿ 2500 ಕೆಜಿ ತೂಕದ ಮದ್ದುಗುಂಡುಗಳನ್ನು ವಶಕ್ಕೆ ಪಡೆದಿದ್ದರು. ಇದರ ಬೆನ್ನಲ್ಲೇ ಇಂಥದ್ದೊಂದು ದುಷ್ಕೃತ್ಯ ನಡೆದಿರುವುದು ದೇಶದ ಜನರಲ್ಲಿ ಭೀತಿ ಉಂಟಾಗಿದೆ. ದೆಹಲಿ ಸ್ಫೋಟವು ಆತ್ಮಾಹುತಿ ಬಾಂಬ್​ ದಾಳಿ ಎಂದು ಅನುಮಾನಿಸಲಾಗಿದೆ. ಅಲ್ಲದೆ, ಶಂಕಿತ ಸೂಸೈಡ್​ ಬಾಂಬರ್​ […]

‘ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸುತ್ತಿವೆ, ನನ್ನ ತಂದೆ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ’: ಇಶಾ ಡಿಯೋಲ್

ಮುಂಬೈ: ಬಾಲಿವುಡ್ ಶೋ ಮ್ಯಾನ್ ಧರ್ಮೇಂದ್ರ ಅವರು ಇಂದು ಬೆಳಗ್ಗೆ ಉಸಿರಾಟ ಸಮಸ್ಯೆಯಿಂದ ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ವದಂತಿ ಹಬ್ಬಿ ಮಾಧ್ಯಮಗಳಲ್ಲೆಲ್ಲಾ ಸುದ್ದಿಯಾಗಿತ್ತು. ಅವರ ಪುತ್ರಿ ನಟಿ ಇಶಾ ಡಿಯೋಲ್ ಸ್ಪಷ್ಟನೆ ನೀಡಿದ್ದು, ನಮ್ಮ ತಂದೆಯ ಆರೋಗ್ಯ ಬಗ್ಗೆ ಮಾಧ್ಯಮಗಳು ಅತಿರೇಕದ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಅನಿಸುತ್ತಿದೆ. ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಧರ್ಮೇಂದ್ರ ಅವರ ಕುಟುಂಬ ವರ್ಗವಾಗಲಿ, ಆಸ್ಪತ್ರೆಯ ವೈದ್ಯರಾಗಲಿ ಇದುವರೆಗೆ […]

ನವೋನ್ಮೇಶ್ -2025: ವಿದುಷಿ ದೀಕ್ಷಾ ರಾಮಕೃಷ್ಣ ಅವರಿಂದ ಯಶಸ್ವೀ ಸಂಗೀತ ಕಾರ್ಯಕ್ರಮ.

ಉಡುಪಿ: ಐ ಎಂ ಜೆ ಇನ್ಸ್ಟಿಟ್ಯೂಷನ್ಸ್ ಮೂಡ್ಲಕಟ್ಟೆಯಲ್ಲಿ ನಡೆದ ನವೋನ್ಮೇಶ್ -25 ರ ಸಂದರ್ಭದಲ್ಲಿ ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ರವರು ನಡೆಸಿಕೊಡುತ್ತಿದ್ದ ಈಟಿವಿ ಎದೆ ತುಂಬಿಹಾಡುವೆನು ರಿಯಾಲಿಟಿ ಶೋ ನಲ್ಲಿ ಎರೆಡುಬಾರಿ ವಿನ್ನರ್, ಝೀ ಕನ್ನಡ ಸರೆಗಮ 13 ಆವೃತ್ತಿಯ ಫೈನಲಿಸ್ಟ್, ಆಕಾಶವಾಣಿ ಕಲಾವಿದೆ, ಖ್ಯಾತ ನೃತ್ಯ ಕಲಾವಿದೆ (ಹೆಜ್ಜೆಗೆಜ್ಜೆ ) ವಿದುಷಿ ದೀಕ್ಷಾ ರಾಮಕೃಷ್ಣ, ಉಡುಪಿ ಇವರಿಂದ ಯಶಸ್ವೀ ಸಂಗೀತ ಕಾರ್ಯಕ್ರಮ ನಡೆಯಿತು.

ಬ್ರಹ್ಮಾವರದಲ್ಲಿ ಬಿಸಿನೆಸ್ ಪ್ರಮೋಟರ್ ಹುದ್ದೆಗೆ ಮಹಿಳಾ ಸಿಬ್ಬಂದಿ ಬೇಕಾಗಿದ್ದಾರೆ

ಉಡುಪಿ:ಬ್ರಹ್ಮಾವರದಲ್ಲಿ ಬಿಸಿನೆಸ್ ಪ್ರಮೋಟರ್ ಹುದ್ದೆಗೆ ಮಹಿಳಾ ಸಿಬ್ಬಂದಿ ಬೇಕಾಗಿದ್ದಾರೆ. ಅಗತ್ಯವಿರುವ ಅರ್ಹತೆಗಳು: 🔹ಬಲವಾದ ಸಂವಹನ ಮತ್ತು ಮಾತುಕತೆ ಕೌಶಲ್ಯಗಳು. 🔹ರಿಯಲ್ ಎಸ್ಟೇಟ್ ಮಾರುಕಟ್ಟೆ ಪ್ರವೃತ್ತಿಗಳ ಉತ್ತಮ ತಿಳುವಳಿಕೆ. 🔹ಗ್ರಾಹಕ-ಆಧಾರಿತ ವರ್ತನೆ ಮತ್ತು ಮನವೊಲಿಸುವ ವ್ಯಕ್ತಿತ್ವ. 🔹ಉತ್ತಮ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. 🔹ಕನಿಷ್ಠ ಪದವಿ ವಿದ್ಯಾರ್ಹತೆ ಹೊಂದಿರಬೇಕು. ( ವ್ಯಾಪಾರ, ಮಾರ್ಕೆಟಿಂಗ್, ಅಥವಾ ರಿಯಲ್ ಎಸ್ಟೇಟ್‌ನಲ್ಲಿ ಆದ್ಯತೆ ನೀಡಲಾಗುವುದು.) 🔹 ಆಸ್ತಿ ಮಾರಾಟ ಅಥವಾ ಯಾವುದೇ ಇತರ ಮಾರಾಟ ವ್ಯವಹಾರದಲ್ಲಿ 1 ರಿಂದ 3 ವರ್ಷಗಳ ಅನುಭವವಿರಬೇಕು. 🔹ಮಾನ್ಯ […]