ಕನಕದಾಸ ಜಯಂತಿಯ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಪುಷ್ಪನಮನ ಸಲ್ಲಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾಸಶ್ರೇಷ್ಠ ಕನಕದಾಸರ ಜಯಂತಿಯ ಅಂಗವಾಗಿ ಬೆಂಗಳೂರಿನ‌ ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪ್ರತಿಮೆಯ ಮುಂಭಾಗ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿದರು.

ಉಡುಪಿ: ಹೆದ್ದಾರಿಯಲ್ಲಿ ಉರುಳಿ ಬಿದ್ದ ಲಾರಿ- ಅಡಿಯಲ್ಲಿ ಸಿಲುಕಿದ್ದ ಇಬ್ಬರ ರಕ್ಷಣೆ

ಉಡುಪಿ: ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ಸಮೀಪದಿಂದ ಕಿನ್ನಿಮೂಲ್ಕಿಗೆ ಹೋಗುವ ರಸ್ತೆಯಲ್ಲಿ ನಡುರಾತ್ರಿ ಅಪಘಾತ ಸಂಭವಿಸಿದೆ. ಇಲ್ಲಿ ಫೈ ಓವರ್ ಕಾಮಗಾರಿ ನಡೆಯುತ್ತಿದ್ದು, ಸರ್ವಿಸ್ ರೋಡ್ ಮೂಲಕವೇ ಬೃಹತ್ ಗಾತ್ರದ ಲಾರಿಗಳು ಓಡಾಟ ನಡೆಸುತ್ತವೆ. ಕಟ್ಟಿಗೆ ತುಂಬಿದ ಲಾರಿಯೊಂದು ಸರ್ವಿಸ್ ರೋಡ್ ನಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ವಾಗುವ ಪಾಯಿಂಟ್ ನಲ್ಲಿ ರಸ್ತೆ ಅವ್ಯವಸ್ಥೆಯಿಂದ ಉರುಳಿ ಬಿದ್ದಿದೆ. ಸರ್ವಿಸ್ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಂಪರ್ಕವಾಗುವ ಪಾಯಿಂಟ್ ನಲ್ಲಿ ಗುಂಡಿ ಬಿದ್ದಿದ್ದು ರಸ್ತೆ ನಿರ್ವಹಣೆ ಸರಿಯಾಗಿಲ್ಲ, ಇದರಿಂದ ಇಲ್ಲಿ […]

ಕನಕದಾಸರು ಕೇವಲ ಭಕ್ತರಾಗಿರದೇ ಒಬ್ಬ ದಾರ್ಶನಿಕ ವ್ಯಕ್ತಿಯಾಗಿದ್ದರು:ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಕನಕದಾಸರು ಕೇವಲ ಭಕ್ತರಾಗಿರದೇ ಒಬ್ಬ ದಾರ್ಶನಿಕ ವ್ಯಕ್ತಿಯಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ದಾಸಶ್ರೇಷ್ಠ ಕನಕದಾಸರ ಜಯಂತಿಯ ಅಂಗವಾಗಿ ಬೆಂಗಳೂರಿನ‌ ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪ್ರತಿಮೆಯ ಮುಂಭಾಗ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು. ಸಂತ ಕನಕದಾಸರ ಜಯಂತಿಯನ್ನು ಸರ್ಕಾರ ಶ್ರದ್ಧಾಭಕ್ತಿಗಳಿಂದ ರಾಜ್ಯಾದ್ಯಂತ ಆಚರಿಸುತ್ತಿದೆ. ಕನಕದಾಸರ ಸಂದೇಶಗಳನ್ನು ಈ ನಾಡಿನ ಜನತೆಗೆ ತಿಳಿಸುವಂತಹ ಪ್ರಯತ್ನವನ್ನು ಮಾಡುತ್ತಿದೆ ಎಂದರು. ಕನಕದಾಸರು ವಿಶ್ವಮಾನವರು ಕನಕದಾಸರು ಸಮಾಜದಲ್ಲಿ ಬದಲಾವಣೆಯನ್ನು ತರಲು ಬಯಸಿದ್ದರು. ಶ್ರೀಕೃಷ್ಣನ ಮಹಾ […]

ಶೀರೂರು ಪರ್ಯಾಯಕ್ಕೆ ಸಹಕರಿಸುವುದು ಎಲ್ಲರ‌ ಕರ್ತವ್ಯ: ಡಾ.ವೀರೇಂದ್ರ ಹೆಗ್ಗಡೆ

ಉಡುಪಿ: ಉಡುಪಿ ಪರ್ಯಾಯ ಅಂದರೆ ಮಠದ ಪರ್ಯಾಯ ಅಲ್ಲ, ಅದು ನಮ್ಮೆಲ್ಲರ ಪರ್ಯಾಯ. ಭಾವೀ ಶೀರೂರು ಪರ್ಯಾಯ ಮಠಾಧೀಶರು ಅತ್ಯಂತ ಕಿರಿಯರು ಆಗಿರುವುದರಿಂದ ಅವರಿಗೆ ಎಲ್ಲರೂ ಸಹಕಾರ ಕೊಡುವುದು ಕರ್ತವ್ಯ ಹಾಗೂ ಜವಾಬ್ದಾರಿ ಆಗಿದೆ. ಆದುದರಿಂದ ಎಲ್ಲರೂ ಸಹಕಾರ ನೀಡಬೇಕೆಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಶೀರೂರು ಮಠದ ಪರ್ಯಾಯ ಸ್ವಾಗತ ಸಮಿತಿಯ ವತಿಯಿಂದ ಉಡುಪಿ ವಿದ್ಯೋದಯ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ಶೀರೂರು ಪರ್ಯಾಯ 2026-2028 ಇದರ ಸಮಾಲೋಚನಾ ಸಭೆಯನ್ನು […]

ಉಡುಪಿ ತೆಂಕಪೇಟೆ ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದಲ್ಲಿ ವೈಭವದ ವಾರ್ಷಿಕ ದೀಪೋತ್ಸವ

ಉಡುಪಿ: ಉಡುಪಿಯ ತೆಂಕಪೇಟೆಯಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದಲ್ಲಿ ವೈಭವದ ವಾರ್ಷಿಕ ದೀಪೋತ್ಸವ ನಡೆಯಿತು. ದೇವಸ್ಥಾನದ ಆವರಣ ಮಾತ್ರವಲ್ಲದೆ ತೆಂಕಪೇಟೆಯ ಉದ್ದಕ್ಕೂ ಸಾಲು ಸಾಲು ದೀಪಗಳನ್ನು ಬೆಳಗಲಾಯಿತು. ದೇವಾಲಯದ ಪುಷ್ಕರಣೆಯಲ್ಲಿ ಕೆರೆ ದೀಪೋತ್ಸವ ನಡೆಯಿತು. ಇದೆ ವೇಳೆ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಲಕ್ಷ್ಮಿ ವೆಂಕಟೇಶ ದೇವರನ್ನಿಟ್ಟು ಮೆರವಣಿಗೆ ಮಾಡಲಾಯಿತು. ಬೆಳ್ಳಿಯ ಪುಷ್ಪ ರಥದಲ್ಲಿ ಪೇಟೆ ಉತ್ಸವ ನಡೆಯಿತು. ಬಳಿಕ ಆಕರ್ಷಕ ಸುಡುಮದ್ದು ಪ್ರದರ್ಶನ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ಕಾರ್ತಿಕ ಮಾಸದ ಈ ವೈಭವದ ದೀಪೋತ್ಸವದಲ್ಲಿ ಭಾಗಿಯಾದರು.