ಉಡುಪಿ: ಮಹಿಳೆ ನಾಪತ್ತೆ

ಉಡುಪಿ ನ.07: ಕಾಪು ತಾಲೂಕು ಕೊಪ್ಪಲಂಗಡಿ ಫ್ಲಾಟ್‌ವೊಂದರಲ್ಲಿ ವಾಸವಿದ್ದ ನೂರ್ ಬಾನು (35) ಎಂಬ ಮಹಿಳೆಯು ಅಕ್ಟೋಬರ್ 29 ರಂದು ಮಧ್ಯಾಹ್ನದ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 2 ಇಂಚು ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ಇಂಗ್ಲೀಷ್, ಹಿಂದಿ ಹಾಗೂ ಉರ್ದು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ಕಂಟ್ರೋಲ್ ರೂಂ ದೂ.ಸಂಖ್ಯೆ: 0820-2526444, 2526709, ಕಾರ್ಕಳ ಉಪವಿಭಾಗ ಪೊಲೀಸ್ ಉಪಾಧೀಕ್ಷಕರ ಕಛೇರಿ […]
ಉಡುಪಿ: ನ. 8, 9 ರಂದು ರಾಷ್ಟ್ರಮಟ್ಟದ ಸಮ್ಮೇಳನ

ಉಡುಪಿ: ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಉಡುಪಿ ಶಾಖೆ ವತಿಯಿಂದ ನ.8 ಮತ್ತು 9ರಂದು ಉಡುಪಿಯ ಬಾಸೆಲ್ ಮಿಷನರೀಸ್ ಮೆಮೋರಿಯಲ್ ಆಡಿಟೋರಿಯಂನಲ್ಲಿ ರಾಷ್ಟ್ರೀಯ ಮಟ್ಟದ ಸಮ್ಮೇಳನ ಆಯೋಜಿಸಲಾಗಿದೆ ಎಂದು ಅಧ್ಯಕ್ಷೆ ಅರ್ಚನಾ ಆರ್. ಮಯ್ಯ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 10ಕ್ಕೆ ಐಸಿಎಐ ಮಾಜಿ ಅಧ್ಯಕ್ಷ ಕೆ. ರಘು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ದಕ್ಷಿಣ ಪ್ರಾದೇಶಿಕ ಮಂಡಳಿ ಅಧ್ಯಕ್ಷೆ ರೇವತಿ ರಘುನಾಥನ್, ಮಾಜಿ ಅಧ್ಯಕ್ಷ ಅತುಲ್ ಕುಮಾರ್ […]
ಇರುವೆಗಳಿಗೆ ಹೆದರಿ ಮಹಿಳೆ ಆತ್ಮಹತ್ಯೆಗೆ ಶರಣು!

ಹೈದರಾಬಾದ್: ಇರುವೆಗಳ ಮೇಲಿನ ಭಯದಿಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಂಗಾರೆಡ್ಡಿ ಜಿಲ್ಲೆಯ ನಿವಾಸಿಯಾಗಿದ್ದ 25 ವರ್ಷದ ಮಹಿಳೆ ಇರುವೆಗಳನ್ನು ಕಂಡರೆ ಭಯಪಡುವ ಮಾನಸಿಕ ಸಮಸ್ಯೆಯಿಂದ (ಮೈರ್ಮೆಕೊಫೋಬಿಯಾ) ಬಾಲ್ಯದಿಂದಲೂ ಬಳಲುತ್ತಿದ್ದರು. 2022ರಲ್ಲಿ ಮದುವೆಯಾಗಿದ್ದ ಅವರಿಗೆ 3 ವರ್ಷದ ಹೆಣ್ಣು ಮಗುವೂ ಇತ್ತು. ನವೆಂಬರ್ 4ರಂದು ಮಹಿಳೆಯು, ಮನೆ ಶುಚಿಗೊಳಿಸಿದ ಬಳಿಕ ಮಗುವನ್ನು ಕರೆದುಕೊಂಡು ಹೋಗುವುದಾಗಿ ತಿಳಿಸಿ ಸಂಬಂಧಿಕರ ಮನೆಯಲ್ಲಿ ಮಗುವನ್ನು ಬಿಟ್ಟು ವಾಪಸಾಗಿದ್ದರು. ಆದರೆ, ಸಂಜೆ ಮಹಿಳೆಯ ಪತಿ ಮನೆಗೆ ಬಂದು ನೋಡುವಷ್ಟರಲ್ಲಿ ಆಕೆ ಮರಣಪತ್ರ ಬರೆದಿಟ್ಟು ನೇಣುಹಾಕಿಕೊಂಡಿದ್ದರು. […]
ಮಂಗಳೂರು: 9ನೇ ತರಗತಿಯ ವಿದ್ಯಾರ್ಥಿ ಆತ್ಮಹತ್ಯೆ.

ಮಂಗಳೂರು: 9ನೇ ತರಗತಿಯ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕ ನೂಜಿಬಾಳ್ತಿಲ ಗ್ರಾಮದ ನಿವಾಸಿ ಲೋಕೇಶ್ ಅವರ 14 ವರ್ಷದ ಪುತ್ರ ಗಗನ್. ಬಾಲಕ ಗಗನ್ ಎಂದಿನಂತೆ ಶಾಲೆಗೆ ತೆರಳಿ, ಗುರುವಾರ ಸಂಜೆ ಮನೆಗೆ ವಾಪಸಾಗಿದ್ದ. ಮನೆಗೆ ಬಂದ ನಂತರ ತನ್ನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕೃತ್ಯಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ […]
ಹುಟ್ಟೂರು ಉಡುಪಿಯಲ್ಲಿ ಚಿತ್ರನಟ ಹರೀಶ್ ರಾಯ್ ಅಂತ್ಯ ಸಂಸ್ಕಾರ.

ಉಡುಪಿ: ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಅಕಾಲಿಕ ಮರಣ ಹೊಂದಿದ ಚಿತ್ರನಟ ಹರೀಶ್ ರಾಯ್ ಅವರ ಅಂತ್ಯ ಸಂಸ್ಕಾರ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ಉಡುಪಿಯಲ್ಲಿ ನೆರವೇರಿತು. ಉಡುಪಿಯ ಅಂಬಲಪಾಡಿಯ ಮೂಲ ಮನೆಯಲ್ಲಿ ಅಂತಿಮ ವಿಧಿವಿಧಾನಗಳು ನಡೆದವು. ತುಳಸಿ ಕಟ್ಟೆ ಮುಂಭಾಗದಲ್ಲಿ ಅರ್ಚಕರ ಸಮ್ಮುಖದಲ್ಲಿ ಅಂತಿಮ ವಿಧಿ ವಿಧಾನ ನಡೆಯಿತು. ಹರೀಶ್ ಆಚಾರ್ಯ ಆಪ್ತರು ಕುಟುಂಬದವರು ಅಂತಿಮ ವಿಧಿ ವಿಧಾನದಲ್ಲಿ ಭಾಗಿಯಾದರು. ಬಳಿಕ ಕುಟುಂಬಸ್ಥರು, ಆಪ್ತರು, ಅಭಿಮಾನಿಗಳು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಪಾರ್ಥಿವ […]