ನ.7 ಮತ್ತು 8ರಂದು ನಿಟ್ಟೆ ವಿಶ್ವವಿದ್ಯಾನಿಲಯದ 15ನೇ ಘಟಿಕೋತ್ಸವ

ಉಡುಪಿ: ನಿಟ್ಟೆ ವಿಶ್ವವಿದ್ಯಾನಿಲಯದ ಮಂಗಳೂರು ಕ್ಯಾಂಪಸ್ನಲ್ಲಿ ನ.7ರಂದು ಮತ್ತು ನಿಟ್ಟೆ ಕ್ಯಾಂಪಸ್ಗಳಲ್ಲಿ ನ.8 ರಂದು 15ನೇ ವಾರ್ಷಿಕ ಘಟಿಕೋತ್ಸವ ಹಮ್ಮಿಕೊಳ್ಳಲಾಗಿದ್ದು, ಒಟ್ಟು 1, 999 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ ಎಂದು ಕುಲಪತಿ ಪ್ರೊ. ಡಾ. ಎಂ. ಎಸ್. ಮೂಡಿತ್ತಾಯ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನ. 7ರಂದು ಬೆಳಿಗ್ಗೆ 10.30ಕ್ಕೆ ಮಂಗಳೂರಿನ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ವೈದ್ಯಕಿಯ ಕಾಲೇಜಿನ (ಕ್ಷೇಮ) ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ನ. 8ರಂದು ಬೆಳಿಗ್ಗೆ 10.30ಕ್ಕೆ ಕಾರ್ಕಳದ ನಿಟ್ಟೆಯ […]
ಉಡುಪಿ: ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿದೆ ಟ್ರಾನ್ಸ್ ಫಾರ್ಮರ್: ದುರಸ್ಥಿಗೆ ಆಗ್ರಹ

ಉಡುಪಿ: ನಗರಸಭೆಯ 25 ನೇ ಕುಂಜಿಬೆಟ್ಟು ವಾರ್ಡಿನಲ್ಲಿ ಬರುವ ಗೋವಿಂದ ಪುಷ್ಕರಣಿ 1 ನೇ ಅಡ್ಡರಸ್ತೆ ಬಳಿ ಇರುವ ಟ್ರಾನ್ಸಫಾರ್ಮರ್ (ವಿದ್ಯುತ್ ಪರಿವರ್ತಕ) ಕಂಬವು ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿದೆ. ಗಾಳಿಮಳೆಗೆ ದುರಂತ ಸಂಭವಿಸುವ ಸಾಧ್ಯತೆ ಇದೆ. ಮಳೆ ನೀರು ಹರಿಯುವ ನೀರಿನ ಕಾಲುವೆಯಲ್ಲಿ ಟ್ರಾನ್ಸ್ ಫಾರ್ಮರ್ ಅಳವಡಿಸಿರುವ ಒಂದು ಕಂಬವಿದ್ದರೆ ಮತ್ತೊಂದು ಕಂಬ ಕಾಲುವೆ ದಂಡೆಯ ಮೇಲಿದೆ. ಬೀಳುವ ಮೂನ್ಸೂಚನೆ ತಿಳಿದು ಕಂಬಕ್ಕೆ ಎರಡು ಹಗ್ಗಗಳನ್ನು ಕಟ್ಟಿ ಖಾಸಗಿಯವರ ತೆಂಗಿನ ಮರಕ್ಕೆ ಕಟ್ಟಿಡಲಾಗಿದೆ. ನವಂಬರ್ 28 ರಂದು […]
2000ನೇ ಮಧ್ಯವರ್ಜನ ಶಿಬಿರ; ಮದ್ಯಪಾನ ಮನುಷ್ಯನ ಜೀವನವನ್ನು ಸರ್ವನಾಶ ಮಾಡುವ ಕಾಯಿಲೆ: ವಿವೇಕ್ ವಿನ್ಸೆoಟ್ ಪಾಯಸ್

ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಫಿ ಯೋಜನೆ ಬಿ ಸಿ ಟ್ರಸ್ಟ್ ರಿ. ಉಡುಪಿ, ಜನಜಾಗ್ರತಿ ವೇದಿಕೆ ಟ್ರಸ್ಟ್ ಉಡುಪಿ ತಾಲೂಕು ಮತ್ತು ಡಾ. ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ 2000 ನೇ ಮದ್ಯವರ್ಜನ ಶಿಬಿರದ 6ನೇ ದಿನವಾದ ಇಂದು ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆಯ ರಾಜ್ಯ ಕಾರ್ಯದರ್ಶಿ ಶ್ರೀ ವಿವೇಕ್ ವಿನ್ಸೆoಟ್ ಪಾಯಸ್ ರವರು ಭಾಗವಹಿಸಿ ಮದ್ಯಪಾನ ದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಉದಾಹರಣೆ ಮೂಲಕ ವಿವರಿಸುತ್ತ, ಮದ್ಯಪಾನವು ಮಾನವನ ದೇಹವನ್ನು […]
ಡಿ.14 ರಂದು ಬನ್ನಾಡಿ ಬ್ರಹ್ಮಬೈದರ್ಕಳ ಸಾಂಪ್ರದಾಯಿಕ ಕಂಬಳ.

ಉಡುಪಿ: ಇತಿಹಾಸ ಪ್ರಸಿದ್ಧ ಬನ್ನಾಡಿ ಬ್ರಹ್ಮ ಬೈದರ್ಕಳ ಸಾಂಪ್ರದಾಯಿಕ ಕಂಬಳವು ಡಿಸೆಂಬರ್ 14 ರಂದು ಜರಗಲಿದೆ. ರಾಜಧಾನಿ ಬೆಂಗಳೂರು ಸಹಿತ ಪರ ಊರುಗಳಲ್ಲಿರುವ ಕಂಬಳಾಭಿಮಾನಿಗಳ ಅಪೇಕ್ಷೆ ಹಾಗೂ ಒತ್ತಾಯದ ಮೇರೆಗೆ ಈಸಾಲಿನ ಬನ್ನಾಡಿ ಕಂಬಳವನ್ನು ಭಾನುವಾರದಂದು ನಡೆಸಲು ನಿಶ್ಚಯಿಸಿದ್ದೇವೆ. ಬನ್ನಾಡಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ದಿನಾಂಕ 15.12.2025ನೇ ಸೋಮವಾರ “ಅಗಲು ಸೇವೆ” ಮತ್ತು 16.12.2025ನೇ ಮಂಗಳವಾರ “ಹಾಲು ಹಬ್ಬ” ಕಾರ್ಯಕ್ರಮ ಜರಗಲಿವೆ ಎಂದು ಪ್ರಕಟನೆ ತಿಳಿಸಿದೆ.
ಉಡುಪಿ:ಸಾಲ ಸಹಾಯಧನ ಸೌಲಭ್ಯ : ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗಾಗಿ ಕ್ರಿಶ್ಚಿಯನ್ ಸಮುದಾಯದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಸಹಾಯಧನ, ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆ, ಶ್ರಮಶಕ್ತಿ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ವೃತ್ತಿ ಪ್ರೋತ್ಸಾಹ ಯೋಜನೆ, ನೇರಸಾಲ, ಶ್ರಮಶಕ್ತಿ (ವಿಶೇಷ ಮಹಿಳಾ) ಯೋಜನೆ, ಗಂಗಾಕಲ್ಯಾಣ,ಅರಿವು ಸಾಲ ಯೋಜನೆ ಹಾಗೂ ಸಮುದಾಯ ಆಧಾರಿತ ಕೌಶಲ್ಯ ತರಬೇತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಈ ಯೋಜನೆಗಳಡಿ ಸಾಲ ಸಹಾಯಧನ ಸೌಲಭ್ಯ ಪಡೆಯಲು ಕ್ರಿಶ್ಚಿಯನ್ ಜನಾಂಗದವರಿಂದ […]