ಕಲ್ಯಾಣಪುರ ಮಿಲಾಗ್ರಿಸ್ ಹೈಸ್ಕೂಲಿನಲ್ಲಿ ರಂಗಶಿಕ್ಷಣ ಉದ್ಘಾಟನೆ

ರಂಗಶಿಕ್ಷಣ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ವೇದಿಕೆ : ಡಾ.ತಲ್ಲೂರು ಉಡುಪಿ: ರಂಗ ಶಿಕ್ಷಣದಿಂದ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ವ್ಯಕ್ತಿಯೊಳಗೆ ಅಡಿಗಿರುವ ಪ್ರತಿಭೆಯನ್ನು ಈ ರಂಗ ಶಿಕ್ಷಣದ ಮೂಲಕ ಹೊರ ಬರಲು ಸಧ್ಯವಿದೆ. ನಾಟಕ ಕೇವಲ ಮನೋರಜನೆ ಮಾತ್ರವಲ್ಲ ಅದು ವ್ಯಕ್ತಿತ್ವವನ್ನು ರೂಪಿಸುವ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಈ ರಂಗ ಶಿಕ್ಷಣದ ಪ್ರಯೋಜನ ಪಡೆಯಲು ಮುಂದಾಗಬೇಕು ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಶುಕ್ರವಾರ ಕಲ್ಯಾಣಪುರ ಮಿಲಾಗ್ರಿಸ್ ಹೈಸ್ಕೂಲಿನಲ್ಲಿ ರಾಜ್ಯದ ಪ್ರತಿಷ್ಠಿತ ರಂಗಸoಸ್ಥೆ ರಂಗಭೂಮಿ […]
ಕಾಪು ಹೊಸ ಮಾರಿಗುಡಿಗೆ ನಿರ್ದೇಶಕಿ, ನಟಿ ರೂಪ ಐಯ್ಯರ್ ಭೇಟಿ: ನವದುರ್ಗಾ ಲೇಖನ ಯಜ್ಞ ಸಂಕಲ್ಪ ಕೈಗೊಂಡ ನಟಿ

ಉಡುಪಿ: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕಿ ಮತ್ತು ನಟಿ ರೂಪ ಐಯ್ಯರ್ ಭೇಟಿ ನೀಡಿ, ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರುಶನ ಪಡೆದರು. ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ ಅವರ ಸಮಕ್ಷಮದಲ್ಲಿ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯ ಪರವಾಗಿ ಗೌರವಿಸಲಾಯಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಶ್ರೀದೇವಿಯಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದ ನೀಡಿದರು. ದೇವಳದ ಪ್ರಥಮ […]
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ಉದ್ಯೋಗ ನಷ್ಟವಾಗದಂತೆ ನಮ್ಮ ಭಾಷೆಯನ್ನು ಹೊಸ ಸವಾಲಿಗೆ ಬೇಕಾದ ಹಾಗೆ ಸಿದ್ಧಪಡಿಸಲು ಸರ್ಕಾರ ಬದ್ದವಾಗಿದೆ: ಸಿ.ಎಂ.ಸಿದ್ದರಾಮಯ್ಯ ಘೋಷಣೆ

ಬೆಂಗಳೂರು ನ1:ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ಕನ್ನಡ ನೆಲದಲ್ಲಿ ಉದ್ಯೋಗ ನಷ್ಟವಾಗದಂತೆ ನಮ್ಮ ಭಾಷೆಯನ್ನು ಹೊಸ ಸವಾಲಿಗೆ ಬೇಕಾದ ಹಾಗೆ ಸಿದ್ಧಪಡಿಸಲು ಸರ್ಕಾರ ಬದ್ದವಾಗಿದೆ. ಕನ್ನಡವನ್ನು ಹೊಸ ತಂತ್ರಜ್ಞಾನದ ಭಾಷೆಯನ್ನಾಗಿಸಲು ವಿದ್ವಾಂಸರು, ತಾಂತ್ರಿಕ ತಜ್ಞರು ಮುಂದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ನಾಡನ್ನು ಉದ್ದೇಶಿಸಿ ಮಾತನಾಡಿದರು. ಮಾಹಿತಿ ತಂತ್ರಜ್ಞಾನ ಯುಗ ಈಗ ಆರ್ಟಿಫಿಷಿಯಲ್ ತಂತ್ರಜ್ಞಾನದ ಯುಗವಾಗಿ ಮಾರ್ಪಾಡಾಗುತ್ತಿದೆ. ಇದರಿಂದ ಉದ್ಯೋಗ ನಷ್ಟವಾಗಬಹುದು ಎಂಬ […]
ಉಡುಪಿ: ಕನ್ನಡ ಧ್ವಜದೊಂದಿಗೆ ಆಟೋವನ್ನು ಸಿಂಗರಿಸಿ ಕನ್ನಡ ಅಭಿಮಾನ ಮೆರೆದ ಜಯಕರ್ ಕುಂದರ್

ಉಡುಪಿ: ನಾಡಿನಲ್ಲಡೆ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ನೆಲೆಸಿದ್ದು, ಕನ್ನಡದ ಕಂಪು ಎಲ್ಲೆಡೆ ಹರಿದಾಡಿದೆ. ಉಡುಪಿಯ ಕಟಪಾಡಿ ನಿವಾಸಿ ಜಯಕರ್ ಕುಂದರ್ ತಮ್ಮ ಆಟೋ ರಿಕ್ಷಾಕ್ಕೆ ಕನ್ನಡ ಧ್ವಜ ದೊಂದಿಗೆ ಸಿಂಗರಿಸಿ ಉಡುಪಿ ಕಟಪಾಡಿ ಪರಿಸರದಲ್ಲಿ ಓಡಾಡಿ ಕನ್ನಡ ಅಭಿಮಾನ ಮೆರೆದಿದ್ದಾರೆ. ಜಯಕರ್ ಕುಂದರ್ ರಾಷ್ಟ್ರೀಯ ಹಬ್ಬಗಳು ಮತ್ತು ಇನ್ನಿತರ ಹಬ್ಬ ದಿನಗಳಲ್ಲಿ ತಮ್ಮ ಆಟೋ ರಿಕ್ಷಾ ವಿವಿಧ ರೀತಿಯಲ್ಲಿ ಸಿಂಗರಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇಂದು ಕನ್ನಡ ಅಭಿಮಾನ ಮೆರೆದಿದ್ದಾರೆ.
ಮೂಡುಬಿದಿರೆ:ಕರ್ನಾಟಕ ಬಹುಸಂಸ್ಕೃತಿಯ ಆಡುಂಬೊಲ

ಮೂಡುಬಿದಿರೆ: ಕರ್ನಾಟಕದ ಏಕೀಕರಣ ಸುದೀರ್ಘ ಕಾಲದ ಹೋರಾಟದ ಫಲವಾಗಿದ್ದು, ಈ ಹೋರಾಟವನ್ನು ಅರಿತುಕೊಳ್ಳುವುದರಿಂದ ಕನ್ನಡದ ಇತಿಹಾಸ ಪ್ರಜ್ಞೆ ಮತ್ತು ರಾಜ್ಯೋತ್ಸವದ ಮಹತ್ವ ಅರಿಯಲು ಸಾಧ್ಯ ಎಂದು ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಹೇಳಿದರು. ಅವರು ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರದಂದು ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕನ್ನಡ ರಾಜ್ಯೋತ್ಸವ ಕೇವಲ ಆಚರಣೆಗೆ ಸೀಮಿತವಲ್ಲ. ಅದು ನಮ್ಮ ಗುರುತು, ಆತ್ಮಗೌರವ ಮತ್ತು ಒಗ್ಗಟ್ಟಿನ ಸಂಕೇತ. ಇಲ್ಲಿನ ಜನರ […]