ಉಡುಪಿ ಜಿಲ್ಲಾ ಮಟ್ಟದ ಗ್ರಾಮೀಣ ರಸಪ್ರಶ್ನೆ ಸ್ಪರ್ಧೆಯಲ್ಲಿ ಮದರ್ ತೆರೆಸಾ ಮೆಮೋರಿಯಲ್ ಶಾಲೆಯ ವಿದ್ಯಾರ್ಥಿಗಳ ಅಪ್ರತಿಮ ಸಾಧನೆ.

ಕುಂದಾಪುರ: ಮದರ್ ತೆರೆಸಾ ಮೆಮೋರಿಯಲ್ ಶಾಲೆ ಶಂಕರನಾರಾಯಣ, ಈ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಾದ ಪ್ರೀತಂ ಜಿ 10ನೇ ತರಗತಿ ಹಾಗೂ ಧನ್ವಿತ್ ಡಿ 9ನೇ ತರಗತಿ ಇವರು ಸರಕಾರಿ ಪ್ರೌಢಶಾಲೆ, ಒಳಕಾಡು ,ಉಡುಪಿ ಇಲ್ಲಿ ಅ.29 ರಂದು ನಡೆದ ಜಿಲ್ಲಾಮಟ್ಟದ ಐಟಿ ಕ್ವಿಜ್ ನಲ್ಲಿ ಭಾಗವಹಿಸಿ ಮೈಸೂರಿನಲ್ಲಿ ನಡೆಯುವ ವಿಭಾಗೀಯ ಮಟ್ಟದ ಐಟಿ ಕ್ವಿಜ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಒಟ್ಟು 250 ವಿದ್ಯಾರ್ಥಿಗಳಲ್ಲಿ 50ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ,ಈ ವಿಶೇಷ ಸಾಧನೆ ಮಾಡಿದ ಮದರ್ ತೆರೆಸ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ […]
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದೃಷ್ಟಿ ಚಕ್ರ – ಸುಧಾರಿತ ಸಂಚಾರಿ ನೇತ್ರ ತಪಾಸಣಾ ಘಟಕದ ಉದ್ಘಾಟನೆ.

ಮಣಿಪಾಲ, ಅ.30: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮಣಿಪಾಲ ಫೌಂಡೇಶನ್‌ನ ಸಹಯೋಗದೊಂದಿಗೆ, ದೃಷ್ಟಿ ಚಕ್ರವನ್ನು ಉದ್ಘಾಟಿಸಿತು – ಇದು ಸಮುದಾಯಕ್ಕೆ ನೇರವಾಗಿ ಉತ್ತಮ ಗುಣಮಟ್ಟದ ಕಣ್ಣಿನ ಆರೈಕೆ ಸೇವೆಗಳನ್ನು ತರಲು ವಿನ್ಯಾಸಗೊಳಿಸಲಾದ ಸುಧಾರಿತ ಸಂಚಾರಿ ನೇತ್ರ ತಪಾಸಣಾ ಘಟಕವಾಗಿದೆ. ಮಣಿಪಾಲ್ ಫೌಂಡೇಶನ್‌ನಿಂದ ಬೆಂಬಲಿತವಾದ ಈ ಉಪಕ್ರಮವು, ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನೇತ್ರವಿಜ್ಞಾನ ಮತ್ತು ಸಮುದಾಯ ವೈದ್ಯಕೀಯ ವಿಭಾಗಗಳು ಮತ್ತು ಮಣಿಪಾಲದ ಮಣಿಪಾಲ ಆರೋಗ್ಯ ವೃತ್ತಿಪರರ ಕಾಲೇಜಿನ ಆಪ್ಟೋಮೆಟ್ರಿ ವಿಭಾಗದ ಸಹಯೋಗದ […]
ಮಧುಮೇಹಿಗಳು ಐಸ್ ಕ್ರೀಮ್ ತಿನ್ನಬಹುದೇ? ಈ ಮಾಹಿತಿ ಒಮ್ಮೆ ನೋಡಿ, ಆ ಮೇಲೆ ಐಸ್ ಕ್ರೀಂ ತಿನ್ನಲು ಹೊರಡಿ!

ಐಸ್ ಕ್ರೀಮ್ ಎಲ್ಲರಿಗೂ ಇಷ್ಟವಾಗುವ ತಣ್ಣನೆಯ ಸಿಹಿತಿಂಡಿ. ಆದರೆ ಮಧುಮೇಹ ಇರುವವರು ಅದನ್ನು ತಿನ್ನುವುದಕ್ಕೆ ಸಂದೇಹಪಡುತ್ತಾರೆ. ಏಕೆಂದರೆ ಐಸ್ ಕ್ರೀಂನಲ್ಲಿರುವ ಸಕ್ಕರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಬೇಗನೆ ಹೆಚ್ಚಿಸುವ ಸಾಧ್ಯತೆ ಇದೆ ಎನ್ನುವ ಭಯದಲ್ಲಿ. ಆದರೆ ಅವರು ನಿಜವಾಗಲೂ ಐಸ್ ಕ್ರೀಂ ತಿನ್ನಬಹುದೇ ತಿನ್ನಬಾರದೇ ಏನೆಂಬುದನ್ನು ನೋಡೋಣ. ಇಷ್ಟು ಗೊತ್ತಿರಲಿ: ಐಸ್ ಕ್ರೀಂನಲ್ಲಿರುವ ಕಾರ್ಬೋಹೈಡ್ರೇಟ್‌ಗಳು ದೇಹದಲ್ಲಿ ಗ್ಲೂಕೋಸ್‌ಗೆ ತಿರುಗುತ್ತವೆ. ಸಾಮಾನ್ಯವಾಗಿ ಇನ್ಸುಲಿನ್ ಗ್ಲೂಕೋಸ್ ಅನ್ನು ದೇಹದ ಕೋಶಗಳಿಗೆ ತೆಗೆದುಕೊಂಡು ಹೋಗುತ್ತವೆ. ಆದರೆ ಮಧುಮೇಹ ಇರುವವರಲ್ಲಿ ಈ ಪ್ರಕ್ರಿಯೆ […]
ಮೂಡುಬಿದಿರೆ:ಆಳ್ವಾಸ್‌ನಲ್ಲಿ ‘ಪ್ರಾಣ’ ಸಮಗ್ರ ಸ್ವಾಸ್ಥ್ಯಧಾಮ ಉದ್ಘಾಟನೆ

ಮೂಡಬಿದಿರೆ: ಪ್ರತಿ ಜ್ಞಾನೇಂದ್ರೀಯವನ್ನೂ ಪ್ರಕೃತಿಯೇ ಅದ್ಭುತವಾಗಿ ಸೃಷ್ಟಿಸಿದೆ. ಇವುಗಳ ಸಮತೋಲನ ಮತ್ತು ಸಾಮರಸ್ಯ ಮಾನವನ ಮನಸ್ಸು, ದೇಹ ಹಾಗೂ ಆತ್ಮದ ಶಾಂತಿಗೆ ಆಧಾರವಾಗಿವೆ. ಆದರೆ ಇಂದಿನ ಜೀವನ ಶೈಲಿಯಲ್ಲಿ ನಾವು ಇಂದ್ರಿಯ ಉಪಕಾರವನ್ನು ಮರೆತು, ಅವುಗಳಿಗೆ ಹಿತವಲ್ಲದ ವಿಷಯಗಳಲ್ಲಿ ತೊಡಗಿಕೊಂಡಿದ್ದೇವೆ. ಕಣ್ಣು ಸೌಂದರ್ಯವನ್ನು, ಕಿವಿ ಸುಶ್ರಾವ್ಯತೆಯನ್ನು, ನಾಸಿಕ ಸುವಾಸನೆಯನ್ನು, ನಾಲಿಗೆ ರುಚಿಯನ್ನು ಹಾಗೂ ತ್ವಚೆ ಕೋಮಲತೆಯನ್ನು ಬಯಸುತ್ತದೆ. ಈ ಪಂಚೇಂದ್ರಿಯಗಳ ಪ್ರಜ್ಞಾಪೂರ್ವಕ ಸಂತೃಪ್ತಿಯ ಮೂಲಕ ಸಮಗ್ರ ಆರೋಗ್ಯವನ್ನು ಪಡೆಯಬಹುದು ಎಂದು ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ. […]
ಮೊಬೈಲ್ Wi-Fi ಸರ್ಚಿಂಗ್ ವೇಳೆ ‘ಪಾಕಿಸ್ತಾನ ಜಿಂದಾಬಾದ್’ ಯೂಸರ್ ನೇಮ್: ಕ್ರಮಕ್ಕೆ ಸ್ಥಳೀಯರ ಆಗ್ರಹ

ಬೆಂಗಳೂರು: ಕೆಲವರು ಮೊಬೈಲ್ ವೈಫೈ ಕನೆಕ್ಷನ್ ಸರ್ಚಿಂಗ್ ವೇಳೆ ಪಾಕಿಸ್ತಾನ ಜಿಂದಾಬಾದ್ ಯೂಸರ್ ಐಡಿ ನೇಮ್ ತೋರಿಸಿದ್ದು, ಇದನ್ನು ಕಂಡ ಗ್ರಾಮಸ್ಥರು ಶಾಕ್ ಆಗಿದ್ದಾರೆ. ಈ ಘಟನೆಯು ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲುಬಾಳು ಗ್ರಾಮದಲ್ಲಿ ನಡೆದಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಿ ಗೋವರ್ಧನ್ ಸಿಂಗ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ. ಇಂಟರ್ನೆಟ್ ಸೌಲಭ್ಯ ಪಡೆಯಲು ವೈ-ಫೈ ನೆಟ್‌ವರ್ಕ್‌ಗಳನ್ನು ಪರಿಶೀಲಿಸುವಾಗ, ‘ಪಾಕಿಸ್ತಾನ ಜಿಂದಾಬಾದ್’ ಎಂಬ ವೈ-ಫೈ ಸಂಪರ್ಕ ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೂರುದಾರರು ವೈ-ಫೈ […]
