ಕಾರ್ಕಳ ಕ್ರೈ ಸ್ಟ್ಕಿಂಗ್: ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಪೂರ್ಣಿಮಾ ಪ್ರಭುಗೆ ಕಂಚಿನಪದಕ

ಕಾರ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ,ವಿಜಯಪುರ ಜಿಲ್ಲೆ ಹಾಗೂ ಹೆಚ್.ಜಿ ಪ.ಪೂ ಕಾಲೇಜು ಸಿಂದಗಿ ಇವರಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜುಗಳಬಾಲಕಿಯರ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಕಾರ್ಕಳದಕ್ರೈ ಸ್ಟ್ಕಿಂಗ್ ಪದವಿಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದವಿದ್ಯಾರ್ಥಿನಿ ಪೂರ್ಣಿಮ ಪ್ರಭು ಕಂಚಿನ ಪದಕ ಪಡೆದುಕೊಂಡಿದ್ದಾರೆ. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿ ಕು.ಲಾವಣ್ಯ ಶೆಟ್ಟಿ ವಿದ್ಯಾರ್ಥಿನಿಗೆ ತರಬೇತಿ ನೀಡಿದ್ದರು.
ಉಡುಪಿಯ FUN KIDZ ನಲ್ಲಿ ಮಹಿಳಾ ಮ್ಯಾನೇಜರ್ ಹುದ್ದೆಗೆ ನೇಮಕಾತಿ

ಉಡುಪಿ:ಉಡುಪಿಯ FUN KIDZ ನಲ್ಲಿ ಮಹಿಳಾ ಮ್ಯಾನೇಜರ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಕೆಲಸದ ಸಮಯ: ವಾರದ ದಿನಗಳು: ಮಧ್ಯಾಹ್ನ 3.30 ರಿಂದ ರಾತ್ರಿ 8.30 ರವರೆಗೆ.ವಾರಾಂತ್ಯಗಳು: ಬೆಳಿಗ್ಗೆ 11 ರಿಂದ ರಾತ್ರಿ 8.30 ರವರೆಗೆ ವಾರದಲ್ಲಿ ಒಂದು ದಿನ ರಜೆ ಇದೆ.( ವಾರಾಂತ್ಯಗಳಲ್ಲಿ ಇರುವುದಿಲ್ಲ) ಮಾಹಿತಿಗಾಗಿ ಕರೆ ಮಾಡಿ: 8317346853ಒಕುಡೆ ಟವರ್ಸ್, ಕಡಿಯಾಳಿ, ಉಡುಪಿ
ಉಡುಪಿಯಲ್ಲಿ ಮೊದಲ ಬಾರಿಗೆ ನ.1 ಮತ್ತು 2ರಂದು “ಕೋಸ್ಟಲ್ ಟೆಕ್ ಕ್ರಿಕೆಟ್ ಲೀಗ್ – 2025”

ಉಡುಪಿ:ಉಡುಪಿ ಹಾಗೂ ಮಂಗಳೂರು ಪ್ರದೇಶದ ವಿವಿಧ ಐಟಿ ಕಂಪನಿಗಳ ನೌಕರರನ್ನು ಒಂದೇ ಅಂಕಣದಲ್ಲಿ ಒಗ್ಗೂಡಿಸುವ ಉದ್ದೇಶದಿಂದ, “ಯುನೈಟೆಡ್ ಟೆಕ್ ಕ್ರಿಕೆಟರ್ಸ್” ತಂಡದ ವತಿಯಿಂದ “ಕೋಸ್ಟಲ್ ಟೆಕ್ ಕ್ರಿಕೆಟ್ ಲೀಗ್ – 2025” ನ್ನು ನವೆಂಬರ್ 1 ಮತ್ತು 2ರಂದು ಹೆಜಮಾಡಿ ರಾಜೀವ್ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ. ಈ ವಿಶಿಷ್ಟ ಕ್ರಿಕೆಟ್ ಲೀಗ್, ಐ.ಟಿ ಕ್ಷೇತ್ರದ ನೌಕರರಿಗೆ ಕ್ರೀಡೆಯ ಮೂಲಕ ಪರಸ್ಪರ ಬಾಂಧವ್ಯವನ್ನು ಬೆಳೆಸುವಂತಾಗಲಿದೆ. ಆಟಗಾರರನ್ನು ಹರಾಜು (Auction) ಪದ್ಧತಿಯಲ್ಲಿ ಆಯ್ಕೆ ಮಾಡುವ ಮೂಲಕ ವ್ಯವಸ್ಥೆ ನಡೆದಿದೆ. ಉಡುಪಿ […]
ಶರಾವತಿ ಯೋಜನೆ ಅಲ್ಲದೇ ರಾಜ್ಯದ ಮತ್ತೆರಡು ಪಂಪ್ಡ್ ಸ್ಟೋರೇಜ್ ಯೋಜನೆಗೆ ಪ್ರಸ್ತಾವ; ವಿ.ಎಂ.ವಿಜಯ್

ಕಾರವಾರ: ‘ಶರಾವತಿ ಪಂಪ್ಸ್ ಸ್ಟೋರೇಜ್ ಯೋಜನೆ ಅಲ್ಲದೇ ಬೆಳಗಾವಿ ಜಿಲ್ಲೆ ಸವದತ್ತಿ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಪಂಪ್ಸ್ ಸ್ಟೋರೇಜ್ ಯೋಜನೆ ಕೈಗೆತ್ತಿಕೊಳ್ಳುವ ಪ್ರಸ್ತಾವ ಇದೆ’ ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಸಿಎಲ್) ಕಾರ್ಯಪಾಲಕ ಎಂಜಿನಿಯರ್ ವಿ.ಎಂ.ವಿಜಯ್ ತಿಳಿಸಿದರು. ‘ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ 1,600 ಮೆಗಾ ವ್ಯಾಟ್ ಸಾಮರ್ಥ್ಯದ ಪಂಪ್ ಸ್ಟೋರೇಜ್ ಯೋಜನೆಯ ಪ್ರಸ್ತಾವಕ್ಕೆ ಸಮ್ಮತಿ ಸಿಕ್ಕಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ‘ರಾಜ್ಯದಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚುವ ಅವಧಿಯಲ್ಲಿ ತಡೆರಹಿತ ವಿದ್ಯುತ್ ಪೂರೈಕೆಗೆ 2 ಸಾವಿರ […]
ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಪದಕ ಗೆದ್ದ 7 ತಿಂಗಳ ಗರ್ಭಿಣಿ!

ನವದೆಹಲಿ: 7 ತಿಂಗಳ ಗರ್ಭಿಣಿಯಾಗಿದ್ದೂ 145 ಕೆಜಿ ತೂಕ ಎತ್ತಿ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ನಲ್ಲಿ ಪದಕ ಪಡೆದ ದೆಹಲಿ ಪೊಲೀಸ್ ಕಾನ್ಸ್‌ಟೇಬಲ್ ವೊಬ್ಬರ ಸಾಹಸ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ದೆಹಲಿಯ ಮಹಿಳಾ ಪೊಲೀಸ್ ಪೇದೆಯೊಬ್ಬರ ಸಾಧನೆ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 7 ತಿಂಗಳ ಗರ್ಭಿಣಿಯಾಗಿರುವ ದೆಹಲಿ ಪೊಲೀಸ್ ಕಾನ್ಸ್‌ಟೇಬಲ್ 145 ಕೆಜಿ ತೂಕ ಎತ್ತಿ ಅದ್ಭುತ ಪದಕ ಗೆದ್ದಿದ್ದಾರೆ. ಧೈರ್ಯವಿದ್ದರೆ ಯಾವುದೂ ಅಸಾಧ್ಯವಲ್ಲ ಎಂದು ಅವರು ತಮ್ಮ ಸಾಧನೆಯ ಮೂಲಕ ಸಂದೇಶ […]