ನಾ ಕಂಡಂತೆ ಪ್ರಧಾನಿ ನರೇಂದ್ರ ಮೋದಿ ವಿಷಯದ ಕುರಿತ ಪ್ರಬಂಧ ಸ್ಪರ್ಧೆ ಕಾರ್ಯಕ್ರಮ ಉದ್ಘಾಟನೆ

ಉಡುಪಿ: ಭಾರತವು ಸಮರ್ಥ, ಸಮೃದ್ಧ, ಸ್ವಾಭಿಮಾನಿ, ಶಕ್ತಿಶಾಲಿ ದೇಶವಾಗಿ ರೂಪುಗೊಳ್ಳಬೇಕೆಂಬುವುದು ದೇಶದ ಕೋಟ್ಯಾಂತರ ಜನರ ಹಲವಾರು ವರ್ಷಗಳ ಕನಸಾಗಿತ್ತು. ಆ ಕನಸನ್ನು ಪ್ರಧಾನಿ ನರೇಂದ್ರ ಮೋದಿಯವರು ಈಡೇರಿಸಿದ್ದಾರೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 75ನೇ ಹುಟ್ಟು ಹಬ್ಬದ ಅಂಗವಾಗಿ ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್ ಉಡುಪಿ ಇದರ ವತಿಯಿಂದ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಆಯೋಜಿಸಿದ “ನಾ ಕಂಡಂತೆ ಪ್ರಧಾನಿ ನರೇಂದ್ರ ಮೋದಿ” ವಿಷಯದ ಕುರಿತ ಪ್ರಬಂಧ […]
ಕುಂದಾಪುರ:ಸುಜ್ಞಾನ ವಿದ್ಯಾಸಂಸ್ಥೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ

ಕುಂದಾಪುರ: ಆಕಾಶದಲ್ಲಿ ಕಾರ್ಮೋಡದ ವಾತಾವರಣ, ಹಿತವಾದ ತಂಗಾಳಿ ಮೈ ಮನಕೆ ತಂಪನಿಯುತ್ತಿತ್ತು.ಆಗಷ್ಟೇ ಜಡಿಮಳೆಯೊಂದು ಧೋ ಎಂದು ಸುರಿದ ಹೋದ ಕುರುಹು ಕೂಡ ಅಲ್ಲಿತ್ತು. ಮಳೆಯಲಿ ಮಿಂದೆದ್ದ ಮರಗಿಡಗಳು ನವವಧುವಿನಂತೆ ಕಂಗೊಳಿಸುತ್ತಿದ್ದರೆ ದೂರದಲ್ಲಿ ನಿಧಾನಕ್ಕೆ ಕೇಳಿಬರುತ್ತಿರುವ ಗೋಮಾತೆಯ ಕೊರಳಿನ ಘಂಟೆಯ ನಿನಾದ, ತುಳಸಿಯ ಕಂಪು, ಹಬ್ಬದೂಟದ ಪರಿಮಳ, ಜೊತೆಗೆ ಸಾಲು ಸಾಲು ಬೆಳಕಿನ ಹಣತೆ,ಹೊಸ ಬಟ್ಟೆ ತೊಟ್ಟ ಕನಸು ಕಂಗಳಿನ ಮಕ್ಕಳ ಕಲರವ ಒಂದು ಕಡೆಯಾದರೆ, ನೇಗಿಲು, ನೊಗ, ಕಳಸಿಗೆ, ತೊಟ್ಟಿಲು ಹೀಗೆ ಪ್ರಾಚೀನ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳು, […]
ಹಾಸನಾಂಬೆ ಹುಂಡಿಯಲ್ಲಿ 25 ಕೋಟಿ ರೂ. ಸಂಗ್ರಹ: ಇದು ಇತಿಹಾಸದಲ್ಲೇ ಅತ್ಯಧಿಕ ಕಾಣಿಕೆ!

ಹಾಸನ: ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಕೊನೆಗೊಂಡಿದ್ದು, ನಿನ್ನೆ ಶುಕ್ರವಾರ ನಡೆದ ಹುಂಡಿ ಎಣಿಕೆ ಮತ್ತು ಟಿಕೆಟ್ ಆದಾಯ ಸೇರಿ 25.59 ಕೋಟಿ ಸಂಗ್ರಹವಾಗಿದೆ. ಇದು ದೇಗುಲದ ಇತಿಹಾಸದಲ್ಲೇ ಅತ್ಯಧಿಕ ಕಾಣಿಕೆಯಾಗಿದೆ. ಸುಮಾರು 300 ಸಿಬ್ಬಂದಿ ಎಣಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಕಂದಾಯ ಇಲಾಖೆ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಹಾಗೂ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ, ಒಟ್ಟು ಕಾಣಿಕೆ ಮೊತ್ತ […]
ಉಡುಪಿ:ಅ.26, 27ರಂದು ಉಚಿತ ಶ್ರವಣ ತಪಾಸಣಾ ಶಿಬಿರ

ಉಡುಪಿ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ, ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ 317ಸಿ, ಟೀಮ್ ಈಶ್ವರ್ ಮಲ್ಪೆ ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಅ. 26 ಮತ್ತು 27 ರಂದು ಬೆಳಗ್ಗೆ 10 ಗಂಟೆಗೆ ಬ್ರಹ್ಮಗಿರಿಯ ರೆಡ್ ಕ್ರಾಸ್ ಭವನದಲ್ಲಿ ಉಚಿತ ಶ್ರವಣ ತಪಾಸಣಾ ಶಿಬಿರ ನಡೆಯಲಿದ್ದು, ಅ.27ರಂದು ಬೆಳಿಗ್ಗೆ 10 ಗಂಟೆಗೆ ಫಲಾನುಭವಿಗಳಿಗೆ ಶ್ರವಣಯಂತ್ರಕ್ಕೆ ಸಹಾಯಧನ ಮತ್ತು ಶ್ರವಣಯಂತ್ರ ವಿತರಣಾ ಸಮಾರಂಭ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9902344399/9964583433 ಅನ್ನು ಸಂಪರ್ಕಿಸಲು […]
ಉಡುಪಿ: ಶಿವಮಣಿ ಮಾಂತ್ರಿಕ ವಾದನಕ್ಕೆ ಮೈಮರೆತ ಸಾವಿರಾರು ಮಂದಿ

ಉಡುಪಿ: ಜಗತ್‌ಪ್ರಸಿದ್ಧ ಡ್ರಮ್ಸ್ ವಾದಕ ಶಿವಮಣಿ ಅವರ ಡ್ರಮ್‌ಗಳಿಂದ ಮೊಳಗಿದ ಝೇಂಕಾರಕ್ಕೆ ಉಡುಪಿಯ ಜನತೆ ಮನಸೋತರು. ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ನಡೆದ ಶ್ರೀ ಪುತ್ತಿಗೆ ನೃಸಿಂಹ ಸಭಾಭವನವನದ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಡ್ರಮ್ಸ್ ಕಲಾವಿದ ಶಿವಮಣಿ ಮತ್ತು ಐರಾ ಆಚಾರ್ಯ ಅವರು ನಾದವೈಭವ ಕಾರ್ಯಕ್ರಮ ಪ್ರಸ್ತುಪಡಿಸಿದರು. ಡ್ರಮ್ಸ್‌ಗಳ ಜತೆಗೆ ನೀರು ತುಂಬಿದ ಪ್ಲಾಸ್ಟಿಕ್ ಬಕೆಟ್, ಸೂಟ್‌ಕೇಸ್, ತಟ್ಟೆ, ಚಮಚ ಹೀಗೆ ಸಂಗೀತ ಹೊರಹೊಮ್ಮಿಸಲು ಯಾವುದಾದರೇನು ಎಂಬಂತೆ ಶಿವಮಣಿ ಪ್ರತಿಯೊಂದರಿಂದಲೂ ನಾದ ಹೊರಹೊಮ್ಮಿಸಿದರು. ಒಂದೂವರೆಗಂಟೆಗಳ ಮಾಂತ್ರಿಕ ವಾದನದಲ್ಲಿ […]