ಮಣಿಪಾಲದ MSDC ಯಿಂದ ಕೌಶಲ್ಯಾಭಿವೃದ್ದಿ ಸ್ಪರ್ಧೆ: ಭರ್ಜರಿ ಬಹುಮಾನ ಗೆಲ್ಲುವ ಅವಕಾಶ

ಮಣಿಪಾಲ: ಮಣಿಪಾಲದ MSDC ಯಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೊಂದು ಅದ್ಬುತ ಅವಕಾಶ ಒದಗಿಸುತ್ತಿದ್ದು ನವೆಂಬರ್ 8 ರಂದು ಕೌಶಲ್ಯಾಭಿವೃದ್ದಿ ಸ್ಪರ್ಧೆಗಳನ್ನು ಆಯೋಜಿಸಿದೆ. ಇದರಲ್ಲಿ ಎಲೆಕ್ಟ್ರೋ ಫೆಸ್ಟ್, ಫ್ಯಾಶನ್ ಶೋ, ವುಡ್ ಕ್ರಾಫ್ಟ್ ಕ್ಯಾಂಪೇನ್, ಗ್ಲಾಮರ್ ಇನ್ ಟ್ರೆಡಿಷನ್, ಕೋಡ್ ಕ್ರುಸೇಡರ್ ಎನ್ನುವ ಇವೆಂಟ್ ಗಳಿವೆ. ಏಳನೇ ತರಗತಿ ಮೇಲ್ಪಟ್ಟವರು ಈ ಸ್ಪರ್ಧೆಗಳಲ್ಲಿ ಭಾಗವಹಿಸಿ ಆಕರ್ಷಕವಾದ ಭರ್ಜರಿ ಬಹುಮಾನಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಡಾ.ಟಿ.ಎಂಎ ಪೈ ಕ್ಯಾಂಪಸ್,ಎಂಎಸ್ ಡಿ ಸಿ ಬಿಲ್ಡಿಂಗ್, ಈಶ್ವರ್ ನಗರ ಮಣಿಪಾಲ www.msdcskills.org […]

ಕರ್ನೂಲ್ ಬಸ್ ದುರಂತದಲ್ಲಿ 20 ಮಂದಿ ಮೃತ್ಯು: ಮೃತರ ಕುಟುಂಬಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ; 2 ಲಕ್ಷ ರೂ. ಪರಿಹಾರ ಘೋಷಣೆ

ನವದೆಹಲಿ: ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ 20 ಮಂದಿ ಸಜೀವ ದಹನವಾಗಿದ್ದು, ದುರ್ಘಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಸಂಭವಿಸಿದ ಭೀಕರ ಬಸ್ ಅಗ್ನಿ ಅಪಘಾತದಲ್ಲಿ ಜೀವಹಾನಿ ಸಂಭವಿಸಿರುವುದು ಅತ್ಯಂತ ದುರದೃಷ್ಟಕರ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು […]

ಮಂಗಳೂರು: ಅಪರಾಧ ಪ್ರಕರಣ ಇದ್ದವರ ಜತೆ ತಿರುಗಾಡಿದ್ರೆ ನಿಮಗೆ ತೊಂದರೆ; ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಎಚ್ಚರಿಕೆ.

ಮಂಗಳೂರು: ‘ಈಗಾಗಲೇ ಪ್ರಕರಣದಲ್ಲಿ ಭಾಗಿಯಾದವರ ಜತೆ ಯಾವುದೇ ಪ್ರಕರಣ ಇಲ್ಲದವರು ತಿರುಗಾಡದಂತೆ ಈಗಾಗಲೇ ನಾವು ಎಚ್ಚರಿಕೆ ನೀಡಿದ್ದೇವೆ. ಸರಿಯಾಗಿ ಕೇಳಿಸಿದಂತೆ ಕಾಣುತ್ತಿಲ್ಲ. ಈಗಾಗಲೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರ ಜತೆ ತಿರುಗಾಡುವವರಿಗೂ ತೊಂದರೆ ಆಗಲಿದೆ. ಇಲ್ಲ ನಾವು ತಿರುಗುತ್ತೇವೆ. ನಮ್ಮ ಇಷ್ಟ ಎಂದು ನೀವು ಬಯಸಿದರೆ ನಮಗೆ ಸಮಸ್ಯೆ ಇಲ್ಲ. ನೀವು ಮಾಡುವುದು ನೀವು ಮಾಡಿ, ನಾವು ಮಾಡುವುದು ನಾವುಮಾಡುತ್ತೇವೆ’ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ವೀಡಿಯೋ ಮೂಲಕ ಸಾರ್ವಜನಿಕ ಸಂದೇಶದ ನೀಡಿದ […]

ನೀರು ತುಂಬಿದ ಬಕೆಟ್ ಗೆ ಬಿದ್ದು ಒಂದು ವರ್ಷದ ಮಗು ಮೃತ್ಯು!

ಹಾವೇರಿ: ಇಲ್ಲಿಯ ಶಿವಬಸವನಗರದ ಮನೆಯೊಂದರ ಎದುರು ತುಂಬಿಟ್ಟಿದ್ದ ಬಕೆಟ್ ನೀರಿನಲ್ಲಿ ಬಿದ್ದು ಅಸ್ವಸ್ಥಗೊಂಡಿದ್ದ 14 ತಿಂಗಳ ದಕ್ಷಿತ್ ಎಂಬ ಮಗು ಹಾವೇರಿ‌ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ರಾತ್ರಿ ಮೃತಪಟ್ಟಿದೆ.ಈ ಅವಘಡದ ಬಗ್ಗೆ ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯ ಮುಂಭಾಗದಲ್ಲಿ ಅ.19ರಂದು ಮಗು ಆಟವಾಡುತ್ತಿತ್ತು. ಮನೆಯ ಎದುರು ನೀರು ತುಂಬಿದ್ದ ಬಕೆಟ್‌ನಲ್ಲಿ ತಲೆ ಕೆಳಗಾಗಿ ಮಗು ಬಿದ್ದಿತ್ತು. ಅಲ್ಲಿಯೇ ಪ್ರಜ್ಞೆ ತಪ್ಪಿತ್ತು. ಬಕೆಟ್‌ನಲ್ಲಿ ಮಗುವಿನ ಕಾಲು ನೋಡಿದ್ದ ಪೋಷಕರು ಹಾಗೂ ಸ್ಥಳೀಯರು, ಮಗುವನ್ನು‌‌ ಮೇಲಕ್ಕೆ ಎತ್ತಿ ಜಿಲ್ಲಾ […]

ಭಾರತದ ಜಾಹಿರಾತು ಲೋಕದ ದಿಗ್ಗಜ ‘ಪದ್ಮಶ್ರೀ ಪಿಯೂಷ್ ಪಾಂಡೆ’ ನಿಧನ

ಬೆಂಗಳೂರು: 1980ರ ದಶಕದಿಂದ ಭಾರತದ ಜಾಹೀರಾತು ಲೋಕಕ್ಕೆ ವಿಶೇಷ ಮೆರಗು ತುಂಬಿದ್ದ ಪದ್ಮಶ್ರೀ ಪಿಯೂಷ್ ಪಾಂಡೆ ಅವರು ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಾಂಡೆ ಅವರು ನವದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ರಾಜಸ್ಥಾನದ ಜೈಪುರ ಮೂಲದವರಾಗಿದ್ದ ಪಾಂಡೆ ಅವರು, ಫೇವಿಕೊಲ್, ಡೈರಿ ಮಿಲ್ಕ್, ಕ್ಯಾಡ್‌ಬರಿ, ಏಷಿಯನ್ ಪೇಂಟ್ಸ್, ವೋಡಾಪೋನ್ ZooZoos ಸೇರಿದಂತೆ ಮುಂತಾದ ಜನಪ್ರಿಯ ಟಿವಿ ಜಾಹೀರಾತುಗಳ ಹಿಂದಿನ ರೂವಾರಿಯಾಗಿದ್ದರು. […]