“ನಿಮ್ಮ ಸೋನ್ ಪಾಪ್ಡಿ ಬಾಕ್ಸ್ ಯಾರಿಗೆ ಬೇಕು”?ಎಂದು ಮಾಲಿಕ ಕೊಟ್ಟ ಸ್ವೀಟ್ಸ್ ಬಾಕ್ಸ್ ನ್ನು ಗೇಟ್ ಮುಂದೆ ಎಸೆದ ಉದ್ಯೋಗಿಗಳು!

ಚಂಡೀಗಢ: ದೀಪಾವಳಿ ಹಬ್ಬದ ಸಂದರ್ಭ ಕಂಪೆನಿಯ ಮಾಲಿಕರು ಸ್ವೀಟ್ಸ್ ನೀಡುವುದು ಮಾಮೂಲು, ಆದರೆ ಸ್ವೀಟ್ಸ್ ಜೊತೆ ಬೋಸನ್ ಅಥವಾ ಗಿಫ್ಟ್ ಅನ್ನು ಕೂಡ ನೀಡುವ ರೂಢಿ ಕಂಪೆನಿಗಳಿಗಿವೆ. ಬರೀ ಸ್ವೀಟ್ಸ್ ಮಾತ್ರ ನೀಡಿದ್ದಾರೆ ಎನ್ನುವ ಕಾರಣಕ್ಕಾಗಿ ಚಂಡೀಗಢದ ಕಂಪೆನಿಯ ಕೆಲಸಗಾರರು ಸಂಸ್ಥೆಯ ಗೇಟ್ ಮುಂದೆ ಎಸೆದು ಹೋದ ವಿಡಿಯೋವೊಂದು ವೈರಲ್ ಆಗುತ್ತಿದೆ. ಹರ್ಯಾಣದ ಸೋನಿಪತ್ ನ ಗನ್ನೌರ್ ಕೈಗಾರಿಕಾ ಪ್ರದೇಶಲ್ಲಿನ ಕಾರ್ಖಾನೆಯೊಂದರ ಮಾಲೀಕ ನೀಡಿದ್ದ ದೀಪಾವಳಿ ಉಡುಗೊರೆಗೆ ಅವರದ್ದೇ ಸಿಬ್ಬಂದಿ ಕೆಂಡಾಮಂಡಲರಾಗಿದ್ದಾರೆ. ಮಾತ್ರವಲ್ಲದೇ ಸಂಸ್ಥೆಯ ಗೇಟ್ ಮುಂದೆ ಎಸೆದು […]
ಉಡುಪಿ: ಚರಂಡಿಗೆ ಎಸೆದ ಹೂವುಗಳ ಮರುಮಾರಾಟ

ಉಡುಪಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹೊರ ಜಿಲ್ಲೆಯ ಹಲವು ಮಾರಾಟಗಾರರು ಕಳೆದ ಮೂರು ದಿನಗಳಿಂದ ಉಡುಪಿಯಲ್ಲಿ ಠಿಕಾಣಿ ಹೂಡಿ ಹೂ ಮಾರಾಟ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಚರಂಡಿಗೆ ಎಸೆದ ಹೂವುಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳ ತಂಡವೊಂದು ನಗರದ ಮಾರುಥಿ ವೀಥಿಕಾದಲ್ಲಿ ಕಂಡುಬಂದಿದೆ. ಸಾರ್ವಜನಿಕರಿಂದ ಬಂದ ಮಾಹಿತಿ ಮೇರೆಗೆ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಸ್ಥಳಕ್ಕೆ ಧಾವಿಸಿ ವ್ಯಾಪಾರಿಗಳನ್ನು ತರಾಟೆಗೆ ತೆಗೆದುಕೊಂಡು ಹೂವು ಮಾರಾಟ ನಿಲ್ಲಿಸಿದರು. ಮಳೆ ಬಂದ ಕಾರಣ ಹೂವು ವ್ಯಾಪಾರ ಕುಸಿತ ಕಂಡ […]
ಉಡುಪಿ ಶ್ರೀ ಕೃಷ್ಣಮಠದಲ್ಲಿ ಗೋಪೂಜೆ ಸಂಪನ್ನ

ಉಡುಪಿ: ಪೊಡವಿಗೊಡೆಯ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಗೋಪೂಜೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡಲಾಯಿತು. ಈ ಪ್ರಯುಕ್ತ ಕನಕ ಗೋಪುರದ ಎದುರು ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಪಾದರು ಗೋವುಗಳಿಗೆ ವಿಶೇಷ ಗೋಗ್ರಾಸವನ್ನು ನೀಡಿದರು. ನಂತರ ರಥಬೀದಿಯ ಸುತ್ತಲೂ ಗೋವುಗಳ ವೈಭವದ ಮೆರವಣಿಗೆ ನಡೆಯಿತು. ನಂತರ ಶ್ರೀ ಕೃಷ್ಣ ಮಠದ ಆವರಣದಲ್ಲಿ ಸಂಕಲ್ಪ ಸಹಿತ ಸಾಮೂಹಿಕ ಗೋಪೂಜೆ ಕಾರ್ಯಕ್ರಮವು ನಡೆಯಿತು. ಪರ್ಯಾಯ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಬಲ್ಲಾಳ್ ಮೊಬೈಲ್ಸ್’ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಭರ್ಜರಿ ಆಫರ್ಸ್; ನೀವು ಮಿಸ್ ಮಾಡ್ಕೋಬೇಡಿ!

ಉಡುಪಿ: ಉಡುಪಿ ನಗರದ ಕಲ್ಪನಾ ಚಿತ್ರಮಂದಿರ ಬಳಿಯ ಒರಾಯನ್ ಕಟ್ಟಡದಲ್ಲಿ ಹೆಸರಾಂತ ಮೊಬೈಲ್ ಶೋರೂಮ್ ಆದ “ಬಲ್ಲಾಳ್ ಮೊಬೈಲ್ಸ್” ನಲ್ಲಿ ಇದೀಗ ದೀಪಾವಳಿಯ ಭರ್ಜರಿ ಆಫರ್ ಲಾಂಚ್ ಮಾಡಿದ್ದಾರೆ.ಗ್ರಾಹಕರಿಗೆ ಸೆ.22 ರಿಂದ ಜ.15ರ ವರೆಗೆ “ದಿ ಗ್ರೇಟ್ ಫೆಸ್ಟಿವಲ್ ಸೇಲ್ಸ್” ನಡೆಯುತ್ತಿದ್ದು ಈ ದೀಪಾವಳಿಯನ್ನು ಗ್ರ್ಯಾಂಡ್ ಆಗಿ ಸಂಭ್ರಮಿಸಬಹುದು! ಬಲ್ಲಾಳ್ ಮೊಬೈಲ್ಸ್ ಜೊತೆಗೆ ದೀಪಾವಳಿ ಭರ್ಜರಿಯಾಗಿ ಸಂಭ್ರಮಿಸಿ: ಕಳೆದ 38 ವರ್ಷದಿಂದ ಗ್ರಾಹಕರ ವಿಶ್ವಾಸವನ್ನು ಗೆದ್ದು, ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯನ್ನು ಸಲ್ಲಿಸುತ್ತಿರುವ, ಗ್ರಾಹಕರ ನಂಬಿಕೆಗೆ ಹೆಸರುವಾಸಿಯಾಗದ ಬಲ್ಲಾಳ್ […]
ಉಡುಪಿ:ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ : ಸಹಾಯಧನ ಸೌಲಭ್ಯ

ಉಡುಪಿ: ಕೇಂದ್ರ ಸರ್ಕಾರದ ವತಿಯಿಂದ ಗರ್ಭಿಣಿ / ಬಾಣಂತಿ ಮಹಿಳೆಯರಿಗಾಗಿ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ ಮೊದಲ ಪ್ರಸವದ ಗರ್ಭಿಣಿ/ ಬಾಣಂತಿ ಮಹಿಳೆಯರಿಗೆ 5000 ರೂ.ಗಳ ಸಹಾಯಧನ ಲಭ್ಯವಿದ್ದು, ಮೊದಲ ಪ್ರಸವದ ಗರ್ಭಿಣಿಯು ಎಲ್.ಎಂ.ಪಿ ದಿನಾಂಕದಿಂದ 150 ದಿನಗಳ ಒಳಗೆ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಮೊದಲನೇ ಕಂತಿನ ಅರ್ಜಿಯನ್ನು ನೋಂದಾಯಿಸಬೇಕು ಹಾಗೂ ಎರಡನೇ ಕಂತಿನಲ್ಲಿ ಮಗುವಿನ ಜನನದ ನೋಂದಣಿ ಮತ್ತು 3 ನೇ ಚುಚ್ಚುಮದ್ದು ಪೂರ್ಣಗೊಂಡ ಬಳಿಕ ಅರ್ಜಿಯನ್ನು ನೋಂದಾಯಿಸಬಹುದಾಗಿದೆ. ಮೊದಲನೆ ಕಂತಿನಲ್ಲಿ ರೂ.3000 ಹಾಗೂ ಎರಡನೇ […]