ನವೆಂಬರ್ ನಲ್ಲಿ 800 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ(KPS) ಸಿಎಂ ಚಾಲನೆ; ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ‘ರಾಜ್ಯದಲ್ಲಿ ₹ 3,000 ಕೋಟಿ ವೆಚ್ಚದಲ್ಲಿ ಆರಂಭಿಸಲಿರುವ 800 ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಗಳಿಗೆ ಮುಖ್ಯಮಂತ್ರಿ ನವೆಂಬರ್ ಎರಡನೇ ವಾರ ಶಿವಮೊಗ್ಗದಲ್ಲಿ ಚಾಲನೆ ನೀಡಲಿದ್ದಾರೆ’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಎಸ್.ಬಂಗಾರಪ್ಪ ಇಲ್ಲಿ ತಿಳಿಸಿದರು. “ಈ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಮನೆಯಿಂದ ಕರೆತರಲು, ಬಿಟ್ಟುಬರಲು ಇಲಾಖೆಯಿಂದಲೇ ಉಚಿತವಾಗಿ ಬಸ್ ವ್ಯವಸ್ಥೆ ಮಾಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಮಕ್ಕಳು ಶಾಲೆ ಬಿಡುವುದನ್ನು ತಪ್ಪಿಸಲು ಈ ಕ್ರಮಕ್ಕೆ ಇಲಾಖೆ ಮುಂದಾಗಿದೆ. ಆಯಾ ಶಾಲೆಯ ಆಡಳಿತ ಮಂಡಳಿಗಳೇ ಬಸ್‌ನ […]
ಉಡುಪಿಯ ದೇವಸ್ಥಾನಗಳಲ್ಲಿ ಕಾರ್ತಿಕ ದೀಪೋತ್ಸವಕ್ಕೆ ಸಹಕಾರ: ‘ಉಡುಪಿ ದರ್ಶನ’ ವತಿಯಿಂದ ಅಭಿಯಾನ.

ಉಡುಪಿ: ಉಡುಪಿ ಜಿಲ್ಲೆಯ ಪೌರಾಣಿಕ ದೇವಸ್ಥಾನಗಳಲ್ಲಿ ಕಾರ್ತಿಕ ಮಾಸದ ಪವಿತ್ರ ದೀಪೋತ್ಸವದ ಸಜ್ಜುಗಳು ನಡೆಯುತ್ತಿವೆ. ಈ ಹಿನ್ನೆಲೆ ‘ಉಡುಪಿ ದರ್ಶನ’ ವತಿಯಿಂದ “ಬೆಳಕಿನ ದೀಪ ಬೆಳಗಿಸಿ – ಜೀವನವನ್ನೂ ಬೆಳಗಿಸಿ” ಎಂಬ ಆಶಯದೊಂದಿಗೆ ವಿಶೇಷ ದೇಣಿಗೆ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದ ಭಾಗವಾಗಿ ಜಿಲ್ಲೆಯ ದೇವಸ್ಥಾನಗಳಲ್ಲಿ ಸಾವಿರಾರು ಮಣ್ಣಿನ ದೀಪಗಳನ್ನು ಬೆಳಗಿಸಲು ಅಗತ್ಯ ವಸ್ತುಗಳನ್ನು ದೇಣಿಗೆಯಾಗಿ ನೀಡಲಾಗುತ್ತಿದೆ. ಒಂದು ದೇವಾಲಯಕ್ಕೆ 1008 ಮಣ್ಣಿನ ದೀಪಗಳು, 2000 ಹತ್ತಿ ಬತ್ತಿಗಳು ಹಾಗೂ 5 ಲೀಟರ್ ಎಳ್ಳೆಣ್ಣೆ ಒಳಗೊಂಡ ಒಂದು […]
ಉಡುಪಿ ಬಲ್ಲಾಳ್ ಮೊಬೈಲ್ಸ್’ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಭರ್ಜರಿ ಆಫರ್ಸ್; ನೀವು ಮಿಸ್ ಮಾಡ್ಕೋಬೇಡಿ!

ಉಡುಪಿ: ಉಡುಪಿ ನಗರದ ಕಲ್ಪನಾ ಚಿತ್ರಮಂದಿರ ಬಳಿಯ ಒರಾಯನ್ ಕಟ್ಟಡದಲ್ಲಿ ಹೆಸರಾಂತ ಮೊಬೈಲ್ ಶೋರೂಮ್ ಆದ “ಬಲ್ಲಾಳ್ ಮೊಬೈಲ್ಸ್” ನಲ್ಲಿ ಇದೀಗ ದೀಪಾವಳಿಯ ಭರ್ಜರಿ ಆಫರ್ ಲಾಂಚ್ ಮಾಡಿದ್ದಾರೆ.ಗ್ರಾಹಕರಿಗೆ ಸೆ.22 ರಿಂದ ಜ.15ರ ವರೆಗೆ “ದಿ ಗ್ರೇಟ್ ಫೆಸ್ಟಿವಲ್ ಸೇಲ್ಸ್” ನಡೆಯುತ್ತಿದ್ದು ಈ ದೀಪಾವಳಿಯನ್ನು ಗ್ರ್ಯಾಂಡ್ ಆಗಿ ಸಂಭ್ರಮಿಸಬಹುದು! ಬಲ್ಲಾಳ್ ಮೊಬೈಲ್ಸ್ ಜೊತೆಗೆ ದೀಪಾವಳಿ ಭರ್ಜರಿಯಾಗಿ ಸಂಭ್ರಮಿಸಿ: ಕಳೆದ 38 ವರ್ಷದಿಂದ ಗ್ರಾಹಕರ ವಿಶ್ವಾಸವನ್ನು ಗೆದ್ದು, ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯನ್ನು ಸಲ್ಲಿಸುತ್ತಿರುವ, ಗ್ರಾಹಕರ ನಂಬಿಕೆಗೆ ಹೆಸರುವಾಸಿಯಾಗದ ಬಲ್ಲಾಳ್ […]
ಬಾಲಿವುಡ್ ಹಿರಿಯ ನಟ ಗೋವರ್ಧನ ಅಸ್ರಾನಿ ನಿಧನ.

ಮುಂಬೈ: ಖ್ಯಾತ ಹಿಂದಿ ಸಿನಿಮಾ ಹಾಸ್ಯನಟ ಮತ್ತು ನಟ ಗೋವರ್ಧನ್ ಅಸ್ರಾನಿ 84ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಳೆದ ಐದು ದಿನಗಳಿಂದ ಅವರನ್ನು ಮುಂಬೈನ ಜುಹುವಿನಲ್ಲಿರುವ ಆರೋಗ್ಯ ನಿಧಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಸ್ರಾನಿ ಅವರ ವ್ಯವಸ್ಥಾಪಕ ಬಾಬುಭಾಯಿ ತಿಬಾ ಅವರ ನಿಧನವನ್ನು ದೃಢಪಡಿಸಿದ್ದು ಅವರ ಅಂತ್ಯಕ್ರಿಯೆಯನ್ನು ಅ.20 ರಂದು ಸಂಜೆ ಸಾಂತಾಕ್ರೂಜ್ ಪಶ್ಚಿಮದಲ್ಲಿರುವ ಶಾಸ್ತ್ರಿನಗರ ಸ್ಮಶಾನದಲ್ಲಿ ನಡೆಸಲಾಯಿತು ಎಂದು ಹೇಳಿದರು. 1941 ಜನವರಿ 1ರಂದು ಜೈಪುರದಲ್ಲಿ ಜನಿಸಿದ ಗೋವರ್ಧನ್ ಅಸ್ರಾನಿ ಕಳೆದ ಆರು ದಶಕಗಳಿಂದ ಬಾಲಿವುಡ್‌ನ ಮುಖವಾಗಿದ್ದರು. 1960ರ […]