ಕೃಷ್ಣ ಮಠದಲ್ಲಿ ಶ್ರೀ ಹಟ್ಟಿಯಂಗಡಿ ಮೇಳದ ಯಕ್ಷ ಪಂಚಮಿ ಉದ್ಘಾಟನೆ

ಉಡುಪಿ: ನಿರಂತರವಾಗಿ 6 ವರ್ಷಗಳಿಂದ ಉಡುಪಿ ಕೃಷ್ಣ ಮಠದಲ್ಲಿ ಐದು ದಿನಗಳ ಯಕ್ಷಗಾನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುವುದು ನಿಜವಾಗಿಯೂ ಹೆಮ್ಮೆಯ ವಿಷಯ. ಶ್ರೀ ಕೃಷ್ಣನ ಕುರಿತಾದ ಯಕ್ಷಾರ್ಚನೆಯನ್ನು ಹಟ್ಟಿಯಂಗಡಿ ಮೇಳದವರು ನಿರ್ವಹಿಸಿಕೊಂಡು ಬರುತ್ತಿದ್ದಾರೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಉಡುಪಿ ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಸುಗುಣೇಂದ್ರತೀರ್ಥ ಶೀಪಾದರ ಶುಭಾಶೀರ್ವಾದದೊಂದಿಗೆ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್, ಕರ್ನಾಟಕ ಜಾನಪದ ಪರಿಷತ್ತು, ಉಡುಪಿ ಜಿಲ್ಲೆ, […]

ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳು ಲಭ್ಯ – ಪ್ರಶಾಂತ್ ಜತ್ತನ್ನ

ಉಡುಪಿ: ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ಮೂಲಕ ವಿವಿಧ ಸಾಲ ಯೋಜನೆಗಳು, ಸಹಾಯಧನ ಹಾಗೂ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿದೆ ಎಂದು ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಹೇಳಿದರು. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕ ಸರಕಾರವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಧ್ಯೇಯವನ್ನು ಇಟ್ಟುಕೊಂಡು ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಸಬಲೀಕರಣಕ್ಕಾಗಿ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸಿದ್ದು ವಿಶೇಷ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಷ್ಠಾನಗೊಳಿಸುತ್ತಿದ್ದಾರೆ. ಕ್ರಿಶ್ಚಿಯನ್ ಸಮುದಾಯದ ಸಾಮಾಜಿಕ ಹಾಗೂ ಆರ್ಥಿಕ ಹಿತಕ್ಕಾಗಿ ಮತ್ತು ಅವರ […]

ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಮೃತ್ಯು.

ಸುಳ್ಯ: ‘ಹೈಪರ್‌ ಐಜಿಇ ಸಿಂಡ್ರೋಮ್‌’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಸುಳ್ಯದ ಚಾಂದಿನಿ (38) ಮಂಗಳೂರಿನ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ. ನಾವೂರಿನ ದಿ.ಧನಂಜಯ ಮತ್ತು ಸರೋಜಿನಿ ದಂಪತಿ ಪುತ್ರಿಯಾದ ಚಾಂದಿನಿ ಇಪ್ಪತ್ತಕ್ಕೂ ಅಧಿಕ ಬಾರಿ ಶಸ್ತ್ರಚಿಕಿತ್ಸೆ, ಹತ್ತು ಬಾರಿ ಕೃತಕ ಉಸಿರಾಟ, ಶಾಕ್ ಟ್ರೀಟ್‌ಮೆಂಟ್, ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆಗಾಗಿ ಲಕ್ಷಗಟ್ಟಲೆ ಹಣ ವ್ಯಯಿಸಿದರೂ ಆರೋಗ್ಯದಲ್ಲಿ ಸುಧಾರಣೆ ಆಗಿರಲಿಲ್ಲ. ರಾಜ್ಯ ಸರ್ಕಾರ ಉಚಿತ ಚಿಕಿತ್ಸೆಯ ಭರವಸೆ ನೀಡಿದ್ದರೂ ಅದರ ಅನುಷ್ಠಾನದಲ್ಲಿ ಹಲವು ತೊಡಕು ಇದ್ದವು. ಆರ್ಥಿಕ ನೆರವಿನ […]

ದೀಪಾವಳಿಯ ಹಣತೆಗಳ ಬೆಳಕಿನಲ್ಲಿ ನೀವೂ ಹೊಳೆದುಬಿಡಿ: ಬೆಳಕಿನ ಹಬ್ಬದ ವಿಶೇಷ ಬರಹ

ಕಣ್ಣ ಕೋರೈಸುವ ಅಲಂಕಾರಿಕ ಬಲ್ಬುಗಳ ಬೆಳಕು, ವಾಹನಗಳ ಮಿಣಿ ಮಿಣಿ ಬೆಳಕು ದಿನನಿತ್ಯವೂ ನಮ್ಮ ಬೆನ್ನಟ್ಟುತ್ತಿದ್ದರೂ ದೀಪಾವಳಿಗೆ ಮಾತ್ರ ಜಿಗ್ಗೆಂದು ಹೊಳೆಯುವ ಸಾಲು ಸಾಲು ಹಣತೆಗಳ ಫಳಫಳ ಹೊಳಪಿದೆಯಲ್ಲವಾ, ಅದು ಎದೆಯೊಳಗೆ ಎಬ್ಬಿಸುವ ಭಾವತರಂಗಗಳು ಮುಗಿಲಿನಷ್ಟೆ ಮಿಗಿಲು. ಎಷ್ಟೇ ಕತ್ತಲಲ್ಲಿದ್ದರೂ ಈ ದೀಪಾವಳಿಯ ಹಣತೆಯ ಹೊಂಬೆಳಕಿಗೆ ಸುಮ್ಮನೆ ಕಣ್ಣು ತೇಲಿಸಿಬಿಟ್ಟರೆ, “ಆಹಾ ದೀಪಾವಳಿ ಬಂತು” ಎಂದು ಮೊದಲೇ ಹೊಳಪೇರಿದ್ದ ಕಣ್ಣು, ಸಾವಿರ ಮೆಗಾ ವ್ಯಾಟ್ ಭರವಸೆಯ ವಿದ್ಯುತ್ ತುಂಬಿಕೊಂಡು ಬೆಳಕಿನ ಜಾತ್ರೆಯಾಗುತ್ತದೆ. ದೀಪ, ಪಟಾಕಿ, ಗೂಡುದೀಪ, ರುಚಿ […]

ಉಡುಪಿ ಕಿನ್ನಿಮೂಲ್ಕಿ ಪೃಥ್ವಿ ಏಜೆನ್ಸಿಸ್: ದೀಪಾವಳಿ ಹಬ್ಬದ ಪ್ರಯುಕ್ತ ಎಕ್ಸ್ಚೇಂಜ್ ಆಫರ್, ಲಕ್ಕಿ ಕೂಪನ್ ಹಾಗೂ ವಿಶೇಷ ರಿಯಾಯಿತಿ.

ಉಡುಪಿ: ಕಿನ್ನಿಮೂಲ್ಕಿ ಯಲ್ಲಿರುವ ‘ಪೃಥ್ವಿ ಏಜೆನ್ಸಿಸ್’ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಫರ್ನಿಚರ್ ಹಾಗೂ ಹೋಂ ಅಪ್ಲೈನ್ಸೆಸ್, ಗೃಹ ಬಳಕೆ ವಸ್ತುಗಳ ಮೇಲೆ ಸ್ಪೆಷಲ್ ಆಫರ್ ಸೇಲ್ಸ್‌ ಆಯೋಜಿಸಲಾಗಿದೆ. ಇಲ್ಲಿ 4 ಚೆಯರ್‌ ವಿದ್ ಡೈನಿಂಗ್ ಟೇಬಲ್ 9,999 ರೂ., 2 ಡೋರ್‌ವಾರ್ಡ್ ರೋಬ್ 7,999 ರೂ., ಕಂಪ್ಯೂಟರ್‌ ಟ್ರಾಲಿ 1,999 ರೂ., ಕಂಪ್ಯೂಟರ್‌ ಟೇಬಲ್ 3,500 ರೂ., ಡ್ರೆಸ್ಸಿಂಗ್ ಮಿರರ್ 1,500 ರೂ., ಸೋಫಾಸೆಟ್ಸ್ (3 ಪ್ಲಸ್ 1 ಪ್ಲಸ್ 1) 12,000 ರೂ., ಕಂಪ್ಯೂಟರ್‌ ಚೆಯರ್ […]