ಉಡುಪಿ: ಡಿ.7ರಂದು “ಎರಡನೇ ಆವೃತ್ತಿಯ ಲೊಂಬಾರ್ಡ್ ಆಸ್ಪತ್ರೆ ಉಡುಪಿ ಮ್ಯಾರಥಾನ್ 2025”; ನೋಂದಣಿ ಆರಂಭ

ಉಡುಪಿ: ಉಡುಪಿ ರನ್ನರ್ಸ್ ಕ್ಲಬ್ ವತಿಯಿಂದ ಉಡುಪಿ ಸಿಎಸ್‌ಐ ಲೊಂಬಾರ್ಡ್‌ ಸ್ಮಾರಕ (ಮಿಷನ್‌) ಆಸ್ಪತ್ರೆಯ ಸಹಯೋಗದಲ್ಲಿ ಎರಡನೇ ಆವೃತ್ತಿಯ ಲೊಂಬಾರ್ಡ್ ಆಸ್ಪತ್ರೆ ಉಡುಪಿ ಮ್ಯಾರಥಾನ್ 2025 ಅನ್ನು ಇದೇ ಡಿ. 7ರಂದು ಉಡುಪಿ ಜಿಲ್ಲಾ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಮ್ಯಾರಥಾನ್ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಿಂದ ಆರಂಭಗೊಂಡು ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ಜಿಲ್ಲಾ […]

ಬ್ರಹ್ಮಾವರದ ಲಕ್ಷ್ಮೀ ವೆಂಕಟೇಶ್ವರ ಸ್ವೀಟ್ಸ್, ಕೇಕ್ಸ್ ಮತ್ತು ಬೇಕರಿಯಲ್ಲಿ ನಿಮಗಾಗಿ ಕಾದಿದೆ ತಾಜಾ ತುಪ್ಪದ, ಡ್ರೈಫ್ರೂಟ್ಸ್ ನ ಬಗೆಬಗೆ ತಿಂಡಿಗಳು: ದೀಪಾವಳಿಯನ್ನು ಸ್ವೀಟ್ಸ್ ಜೊತೆ ಸಂಭ್ರಮಿಸಿ

ಸಿಹಿ ಸಿಹಿಯ ತಿಂಡಿ ಬಾಯೊಳಗಿದ್ದರೆ ಅದು ಸ್ವರ್ಗ ಸುಖ. ಆ ಸಿಹಿ ತಿಂಡಿಗಳು ತುಪ್ಪದ್ದೋ ಡ್ರೈ ಫ್ರೂಟ್ಸ್ ನದ್ದೋ ಆದರಂತೂ ಹೇಳುವುದೇ ಬೇಡ ಅದು ಕೊಡುವ ಅನುಭೂತಿಯನ್ನು ವರ್ಣಿಸಲು ಸಾಧ್ಯವಿಲ್ಲ. ಅಂತದ್ದೇ ಶುದ್ಧ ತುಪ್ಪದಿಂದ, ಡ್ರೈ ಫ್ರೂಟ್ಸ್ ನಿಂದ ತಯಾರಿಸಿದ ಬಗೆಬಗೆಯ ಸಿಹಿತಿಂಡಿಗಳು ಬ್ರಹ್ಮಾವರದ ಲಕ್ಷ್ಮೀ ವೆಂಕಟೇಶ್ವರ ಸ್ವೀಟ್ಸ್,ಕೇಕ್ಸ್ ಮತ್ತು ಬೇಕರಿಯಲ್ಲಿ ದೀಪಾವಳಿಯ ಈ ಹೊತ್ತಿನಲ್ಲಿ ನಿಮಗಾಗಿ ಸಿದ್ಧಗೊಂಡಿವೆ. ದೀಪಾವಳಿಗೆ ಸಿಹಿತಿಂಡಿಗಳ ಸುಗ್ಗಿ:ಬ್ರಹ್ಮಾವರದ ಲಕ್ಷ್ಮೀ ವೆಂಕಟೇಶ್ವರ ಸ್ವೀಟ್ಸ್,ಕೇಕ್ಸ್ ಮತ್ತು ಬೇಕರಿಯಲ್ಲಿ ಬಣ್ಣ ಬಣ್ಣದ, ವಿಭಿನ್ನ ಶೈಲಿಯ,ಅತ್ಯದ್ಬುತ ರುಚಿಯ […]

ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಸಿಬ್ಬಂದಿಗೆ ಜಿಲ್ಲಾ ಮಟ್ಟದ ವಿಶೇಷ ತರಬೇತಿ

ಹೆಬ್ರಿ: ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್ ನಿ., ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿ., ಪೆರ್ಡೂರು ಹಾಗೂ ಸಹಕಾರ ಇಲಾಖೆ, ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಕುಂಬಾರರ ಗುಡಿ ಕೈಗಾರಿಕಾ, ಸಹಕಾರ ಸಂಘದ ಹಾಗೂ ಇತರ ಸಹಕಾರ ಸಂಘದ ಸಿಬಂದಿ ವರ್ಗದವರಿಗೆ ಜಿಲ್ಲಾಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ […]

ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ: ವಿಕ್ರಂ ಐ ಆಚಾರ್ಯ ಆಗ್ರಹ

ಉಡುಪಿ: ಆತ್ಮಹತ್ಯೆ ಮಾಡಿಕೊಂಡ ಅಭಿಷೇಕ್ ಆಚಾರ್ಯ ನನ್ನು ನಾಲ್ಕು ಮಂದಿಯ ತಂಡವೊಂದು ಹನಿಟ್ರ್ಯಾಪ್ ಬಲೆಗೆ ಬೀಳಿಸಿ, ಹಣ ನೀಡುವಂತೆ ಚಿತ್ರಹಿಂಸೆ ಕೊಟ್ಟಿದ್ದರು. ಆತನಿಂದ ಮೂರ್ನಾಲ್ಕು ಲಕ್ಷ ರೂ. ಗಳನ್ನು ಬಲವಂತವಾಗಿ ಕಿತ್ತುಕೊಂಡಿದ್ದರು. ಅಲ್ಲದೆ ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ. ಈ ಚಿತ್ರಹಿಂಸೆ ತಾಳಲಾರದೆ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ವಿಶ್ವಕರ್ಮ ಯುವ ಮಿಲನ ಸ್ಥಾಪಕ ಅಧ್ಯಕ್ಷ ವಿಕ್ರಂ ಐ ಆಚಾರ್ಯ ಆಗ್ರಹಿಸಿದ್ದಾರೆ. ನಿರೀಕ್ಷಾ, […]

ಕಾಲೇಜಿನ ಪುರುಷರ ಶೌಚಾಲಯದಲ್ಲಿ ಸೀನಿಯರ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: 21 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಬಂಧನ.

ಬೆಂಗಳೂರು: ಪುರುಷರ ಶೌಚಾಲಯದಲ್ಲಿ ತನ್ನ ಸೀನಿಯರ್​ ವಿದ್ಯಾರ್ಥಿನಿಯ ( Student ) ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 21 ವರ್ಷದ ಇಂಜಿನಿಯರಿಂಗ್​ ವಿದ್ಯಾರ್ಥಿಯನ್ನು ಬಂಧಿಸಿರುವ ಘಟನೆ ಬೆಂಗಳೂರಿನ ಖಾಸಗಿ ಇಂಜಿನಿಯರಿಂಗ್​ ಕಾಲೇಜಿನಲ್ಲಿ ನಡೆದಿದೆ.ಬಂಧಿತ ಯುವಕನನ್ನು ಜೀವನ್​ ಗೌಡ ಎಂದು ಗುರುತಿಸಲಾಗಿದೆ. ಈತ ಆರನೇ ಸಮಿಸ್ಟರ್​ನ ವಿದ್ಯಾರ್ಥಿ. ಆತನನ್ನು ಬೆಂಗಳೂರು ಪೊಲೀಸರು ಬುಧವಾರ (ಅ.15) ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಅಂದಿನಿಂದ ಆತ ನ್ಯಾಯಾಂಗದ ವಶದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂದಹಾಗೆ, ಈ ಘಟನೆ ಅ.10ರಂದು ನಡೆದಿದೆ. ಸಂತ್ರಸ್ತೆ […]