ಕಟಪಾಡಿ: ತ್ರಿಶಾ ಕ್ಲಾಸಸ್ : 25 ದಿನಗಳ ಸಿ.ಎ ಫೌಂಡೇಶನ್ ರಿವಿಷನ್ ತರಗತಿಗಳು ಆರಂಭ

ಉಡುಪಿ: ಸಿ.ಎ ಪೌಂಡೇಶನ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯವಾಗುವ ಉದ್ದೇಶದಿಂದ ತ್ರಿಶಾ ಕ್ಲಾಸಸ್ ವತಿಯಿಂದ ಅಕ್ಟೋಬರ್13ರಿಂದ 25 ದಿನಗಳ ಸಿ.ಎ ಫೌಂಡೇಶನ್ ರಿವಿಷನ್ ತರಗತಿಯನ್ನು ಆರಂಭಿಸಲಾಗುತ್ತಿದೆ. ಅನುಭವಿ ಅಧ್ಯಾಪಕ ವೃಂದ, ನಾಲ್ಕು ವಿಷಯಗಳ ಸಂಪೂರ್ಣ ಅಧ್ಯಯನ ಐಸಿಎಐ ಮಾದರಿಯ ಪೂರ್ವ ಸಿದ್ಧತಾ ಪರೀಕ್ಷೆ, ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಲಹೆ ಸೂಚನೆಗಳು ಇವೆಲ್ಲವೂ ತರಗತಿಯ ವಿಶೇಷಣಗಳಾಗಿವೆ, ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನ ಎದುರಿಸಲು ಬೇಕಾದ ಆತ್ಮವಿಶ್ವಾಸ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ರಿವಿಶನ್ ತರಗತಿಗಳನ್ನ ಆಯೋಜಿಸಲಾಗಿದೆ. ಆಸಕ್ತರು ಕಟಪಾಡಿಯ ತ್ರಿಶಾ […]
ಬೆಳ್ಮಣ್ ಲಾಡ್ಜ್ ನಲ್ಲಿ ಡೆತ್‌ನೋಟು ಬರೆದಿಟ್ಟು ಯುವಕ ಆತ್ಮಹತ್ಯೆ ಪ್ರಕರಣ: ನಾಲ್ವರು ಗೆಳೆಯರ ಮೊಬೈಲ್ ವಶ.

ಕಾರ್ಕಳ: ಗೆಳೆಯರು ಬ್ಲಾಕ್‌ಮೇಲ್ ಮಾಡಿ ಕಿರುಕುಳ ನೀಡುತ್ತಿರುವುದಾಗಿ ಡೆತ್‌ನೋಟು ಬರೆದಿಟ್ಟು ನಿಟ್ಟೆಯ ಯುವಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದು, ಆ ನಾಲ್ವರು ಗೆಳೆಯರ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ಲೇಡಿಗೋಶನ್ ಆಸ್ಪತ್ರೆಯಲ್ಲಿ ಬಯೋಮೆಡಿಕಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಿಟ್ಟೆ ಗ್ರಾಮದ ಪರಪ್ಪಾಡಿಯ ಅಭಿಷೇಕ್ ಆಚಾರ್ಯ(23) ಎಂಬವರು ಯುವತಿ ಸೇರಿದಂತೆ ನಾಲ್ವರು ಗೆಳೆಯರು ವಿಡಿಯೋ ವೈರಲ್ ಮಾಡುವುದಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆಂದು ಡೆತ್‌ನೋಟು ಬರೆದಿಟ್ಟು ಗುರುವಾರ ಬೆಳ್ಮಣ್‌ನ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ […]
ಉಡುಪಿ:ಎನ್ ಸಿಸಿ ಸಾಗರ ನೌಕಾಯಾನ ದಂಡಯಾತ್ರೆ ಪ್ರಾರಂಭ

ಉಡುಪಿ: ಕರ್ನಾಟಕ ಮತ್ತು ಗೋವಾದ ಎನ್‌ಸಿಸಿಯ ಎಪ್ಪತ್ತೆರಡು ನೌಕಾ ಕೆಡೆಟ್‌ಗಳು ಇಂದು ತಮ್ಮ ಅಖಿಲ ಭಾರತ “ಸಾಗರ ನೌಕಾಯಾನ ದಂಡಯಾತ್ರೆ – ಮೆನು (ಅತ್ಯಂತ ಉದ್ಯಮಶೀಲ ನೌಕಾ ಘಟಕ) 2025” ಟ್ರೋಫಿಯ ಭಾಗವಾಗಿ ಮಂಗಳೂರಿಗೆ ತಲುಪಲು ಉಡುಪಿಯ ಮಲ್ಪೆ ಬಂದರಿನಿಂದ ನೌಕಾಯಾನ ಆರಂಭಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಉಡುಪಿ ಜಿಲ್ಲೆಯ ಮಲ್ಪೆ ಪ್ರವಾಸೋದ್ಯಮ ಜೆಟ್ಟಿಯಲ್ಲಿ, ಏರ್ ಕಮೋಡೋರ್ ಎಸ್‌ಬಿ ಅರುಣ್‌ಕುಮಾರ್ ವಿಎಸ್‌ಎಂ ಅವರ ಪತ್ನಿ ಶ್ರೀಮತಿ ವಿನಿತಾ ಅರುಣ್‌ಕುಮಾರ್ ಜೊತೆಗೆ ಸಾಗರ ನೌಕಾಯಾನ ದಂಡಯಾತ್ರೆಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು. […]
ಉಡುಪಿ:ರಕ್ತದಾನದ ಮಹತ್ಕಾರ್ಯದಲ್ಲಿ ಯುವಕರು ಕೈಜೋಡಿಸಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ: ದಾನಗಳಲ್ಲೇ ಅತ್ಯಂತ ಶ್ರೇಷ್ಠ ದಾನ ರಕ್ತದಾನ. ಒಬ್ಬ ವ್ಯಕ್ತಿಯು ನೀಡುವ ರಕ್ತದಾನದಿಂದ ಕನಿಷ್ಠ ಮೂರು ಜೀವಗಳನ್ನು ಉಳಿಸಬಹುದು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಕಾರ್ಯಗಳಲ್ಲಿ ಕೈಜೋಡಿಸಿ ಜನರ ಜೀವ ಉಳಿಸಲುಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೇಳಿದರು. ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂತಡೆಗಟ್ಟುವ ಘಟಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಕ್ತನಿಧಿ ಕೇಂದ್ರ, ಯೂತ್ ರೆಡ್ ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ, […]