ಹಿಂದೂ ಸಮಾಜ ಕಟ್ಟಲು ಅಷ್ಟಮಠದ ಸ್ವಾಮೀಜಿಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ- ಶಾಸಕ ಯಶಪಾಲ್ ಸುವರ್ಣ

ಉಡುಪಿ: ಭಾವಿ ಪರ್ಯಾಯ ಶ್ರೀ ಶೀರೂರು ಮಠದ ವತಿಯಿಂದ ಪರ್ಯಾಯ ಪೂರ್ವಭಾವಿ ತಯಾರಿಗಳ ಬಗ್ಗೆ ಬ್ರಹ್ಮಾವರ ವಲಯದ ಸಭೆ ಶನಿವಾರ ಬ್ರಹ್ಮಾವರ ಉನ್ನತಿ ಸಭಾಂಗಣದಲ್ಲಿ ನಡೆಯಿತು. ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಉಡುಪಿ ಮಠದ ಸ್ವಾಮೀಜಿಗಳು ಬರೇ ಕೃಷ್ಣನ ಪೂಜೆಯಲ್ಲದೆ ಹಿಂದೂ ಸಮಾಜ ಕಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.ಶಿರೂರು ಮಠ ಹಿಂದಿನಿಂದಲು ಹಿಂದೂ ಸಮಾಜ ಕಟ್ಟಲು ಶ್ರಮಿಸಿದ್ದಾರೆ ಆದ್ದರಿಂದ ಶಿರೂರು ಮಠದ ಪರ್ಯಾಯ ಉಡುಪಿಯ ಜನತೆಯ ಪರ್ಯಾಯ ಆಗಬೇಕು ಮತ್ತು ನಾಡ ಹಬ್ಬದ ರೀತಿಯಲ್ಲಿ ಆಚರಿಸಬೇಕು […]

ಪ್ರಸಾದ ಶೆಣೈ ಅವರಿಗೆ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯ 2025 ರ ದ್ವಿತೀಯ ಕಥಾ ಪ್ರಶಸ್ತಿ

ಬೆಂಗಳೂರು: ಪ್ರಜಾವಾಣಿ ಪತ್ರಿಕೆಯ ಪ್ರತಿಷ್ಠಿತ ದೀಪಾವಳಿ ಕಥಾ ಸ್ಪರ್ಧೆ 2025 ರ ಪ್ರಶಸ್ತಿಯ ಫಲಿತಾಂಶ ಪ್ರಕಟವಾಗಿದ್ದು ಕತೆಗಾರ ದಯಾನಂದ ಅವರು ಮೊದಲ ಪ್ರಶಸ್ತಿ ಪಡೆದರೆ, ಎರಡನೇ ಕಥಾ ಪ್ರಶಸ್ತಿಯನ್ನು ಕತೆಗಾರ, ಬರಹಗಾರರಾದ ಉಡುಪಿ ಜಿಲ್ಲೆಯ ಕಾರ್ಕಳದ ಪ್ರಸಾದ ಶೆಣೈ ಆರ್ ಕೆ ಅವರು ಪಡೆದುಕೊಂಡಿದ್ದಾರೆ. ಪ್ರಶಸ್ತಿಯು ನಗದು ಮತ್ತು ಪ್ರಶಸ್ತಿಪತ್ರವನ್ನು ಒಳಗೊಂಡಿದೆ. ಪ್ರಸಾದ್ ಶೆಣೈ ಅವರು ಉಡುಪಿXPRESS’ನ ಸಂಪಾದಕರಾಗಿ, ಕ್ರಿಯೇಟಿವ್ ಕಂಟೆಂಟ್ ಹೆಡ್ ಆಗಿ, ಉಪನ್ಯಾಸಕರಾಗಿಯೂ ಸಕ್ರೀಯರಾಗಿದ್ದಾರೆ. “ಲೂಲು ಟ್ರಾವೆಲ್ಸ್” “ಒಂದು ಕಾಡಿನ ಪುಷ್ಪಕ ವಿಮಾನ”, “ನೇರಳೆ […]

ಕುಂದಾಪುರ: ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ ಸುಲಿಗೆ; ಇಬ್ಬರು ಆರೋಪಿಗಳ ಬಂಧನ

ಉಡುಪಿ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ ಸುಲಿಗೈದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬದ ಆನವಟ್ಟಿ ಗ್ರಾಮದ ಸಂಜಯ್‌ ಎಲ್‌ (33) ಮತ್ತು ದಾವಣಗೆರೆ ಜಿಲ್ಲೆಯ ವಿನೋಬನಗರದ ವಸಂತ ಕುಮಾರ್‌ (30) ಬಂಧಿತ ಆರೋಪಿಗಳು. ಮೀನಾಕ್ಷಿ ಎಂಬವರು ಮಗಳೊಂದಿಗೆ ಕುಂದಾಪುರ ಶಾಸ್ತ್ರೀ ಸರ್ಕಲ್ ಗೆ ಸರ್ವಿಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಬೈಕ್ ನಲ್ಲಿ ಬಂದ ಇಬ್ಬರು ಆರೋಪಿಗಳು ಅವರ ಕುತ್ತಿಗೆಯಲ್ಲಿದ್ದ […]

ಉಡುಪಿ:ಕೋಲ್ಕತ್ತಾ ಸೀರೆ ಪ್ರದರ್ಶನ ಹಾಗೂ ದೀಪಾವಳಿ ಮಾರಾಟ;ಇಂದು ಕೊನೆಯ ದಿನ

ಉಡುಪಿ:ಕೋಲ್ಕತ್ತಾ ಸೀರೆ ಪ್ರದರ್ಶನ ಹಾಗೂ ದೀಪಾವಳಿ ಮಾರಾಟವು ಬೆಳಿಗ್ಗೆ 10.00 ರಿಂದ ರಾತ್ರಿ 8.00 ರವರೆಗೆ ದಿ ಓಷನ್ ಪರ್ಲ್ ಜೇಡ್ ಹಾಲ್, ಕಡಿಯಾಳಿ ಜಂಕ್ಷನ್, ಉಡುಪಿ ಇಲ್ಲಿ ನಡೆಯಲಿದ್ದು, ನಿಮ್ಮ ಶೈಲಿಯನ್ನು ಪರಿಪೂರ್ಣ ಸೀರೆಯೊಂದಿಗೆ ಪರಿವರ್ತಿಸಿ. ಇಲ್ಲಿ ಅನೇಕ ವಿಧದ ಸೀರೆಗಳು ಎಲ್ಲಾ ದರದಲ್ಲೂ ಲಭ್ಯವಿದೆ. ದೀಪಾವಳಿ ಪ್ರಯುಕ್ತ ಎಲ್ಲಾ ವಿಧದ ಉತ್ಪನ್ನಗಳನ್ನು ವಿಶೇಷ ದರದಲ್ಲಿ ಮಾರಾಟ ಮಾಡಲಾಗುವುದು. ಬಂಗಾಳ ಕೈಮಗ್ಗ ಸೀರೆ, ಬಲುಚಾರಿ ಸೀರೆ,ತುಸೂರ್ ರೇಷ್ಮೆ ಸೀರೆ, ಆರ್ಗನ್ಜಾ ಸೀರೆ,ಕ್ರಷ್ ಟಿಶ್ಯೂ ಸೀರೆ,ಬನಾರಸ್ ಸೀರೆ […]

ಕಾಪು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ; ಪೋಕ್ಸೋ ಪ್ರಕರಣ ದಾಖಲು

ಕಾಪು: ಉತ್ತರ ಪ್ರದೇಶ ಮೂಲದ ಕಾರ್ಮಿಕನೋರ್ವ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿ, ಅತ್ಯಾಚಾರ ಎಸಗಿ ಆ ಬಳಿಕ ಪರಾರಿಯಾಗಿರುವ ಘಟನೆ ಕಾಪುವಿನಲ್ಲಿ ನಡೆದಿದೆ.ಕಾಪುವಿನ ಸೆಲೂನ್‌ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಶಾರುಖ್‌ ಖಾನ್‌ ಆರೋಪಿತ. ಆರೋಪಿ ಪತ್ನಿಯ ಜತೆಗೆ ಕಾಪುವಿನ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ. ಈ ನಡುವೆ ಆರೋಪಿ ಶಾರೂಖ್‌, ತನಗೆ ಮತ್ತು ಪತ್ನಿಗೆ ಆಶ್ರಯ ನೀಡಿದ್ದ ಮಹಿಳೆಯ ಅಪ್ರಾಪ್ತ ವಯಸ್ಸಿನ ಮಗಳನ್ನು ಪುಸಲಾಯಿಸಿ ದೈಹಿಕ ಸಂಬಂಧ ಬೆಳೆಸಿದ್ದನು. ಈ ಬಗ್ಗೆ ಬಾಲಕಿಯೂ ಬಾಯಿ […]