ನಾಳೆ(ಅ.10) ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ (MCHP), ಮಾಹೆ ಮಣಿಪಾಲದ ಕ್ಲಿನಿಕಲ್ ಸೈಕಾಲಜಿ ವಿಭಾಗದಿಂದ ಮಾನಸಿಕ ಆರೋಗ್ಯ ಜಾಗೃತಿ ಮತ್ತು ಉಚಿತ ಸಮಾಲೋಚನಾ ಶಿಬಿರ

ಉಡುಪಿ: ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ, ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ (MCHP), ಮಾಹೆ ಮಣಿಪಾಲವು ಅಕ್ಟೋಬರ್ 10, 2025 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಿರೇಬೆಟ್ಟು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮಾನಸಿಕ ಆರೋಗ್ಯ ಜಾಗೃತಿ ಸಮಾಲೋಚನಾ ಶಿಬಿರವನ್ನು ಆಯೋಜಿಸಿದೆ. ಗೀಳು ರೋಗ , ಖಿನ್ನತೆ, ಆತಂಕ ಮತ್ತು ಮಕ್ಕಳಲ್ಲಿ ಅತಿಯಾದ ಚಟುವಟಿಕೆ , ಆಟಿಸಂ, ಬೆಳವಣಿಗೆಯ ವಿಳಂಬ ಅಥವಾ ಮಾನಸಿಕ ಕುಂಠಿತ, ಕಲಿಕಾ ನ್ಯೂನತೆಗಳು, ಪರೀಕ್ಷಾ ಆತಂಕ ಮತ್ತು […]
ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿಯೇ ಸಹಕಾರಿ ಕ್ಷೇತ್ರದ ಮುಖ್ಯ ಉದ್ದೇಶ- ಜಯಕರ ಶೆಟ್ಟಿ ಇಂದ್ರಾಳಿ

ಉಡುಪಿ: ಗ್ರಾಮೀಣ ಪ್ರದೇಶದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಶಕ್ತಿ ತುಂಬುವ ಉದ್ದೇಶದಿಂದ ಸಾಮಾಜಿಕ ಕಳಕಳಿಯ ಚಿಂತನೆ ಇಟ್ಟುಕೊಂಡು ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಕಾರ್ಯನಿರ್ವಹಿಸುತ್ತಿದೆ. ಇದು ಸಹಕಾರಿ ಸಂಸ್ಥೆಯ ಪ್ರಗತಿಗೆ ಪೂರಕವಾಗಿದೆ ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬುಧವಾರ ಉಡುಪಿ ಬಡಗುಬೆಟ್ಟು […]
ಶಿರ್ವ: ಗಾಂಜಾ ಮಾರಾಟಕ್ಕೆ ಯತ್ನ; ಇಬ್ಬರ ಬಂಧನ

ಉಡುಪಿ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಕೊಡವೂರು ಲಕ್ಷ್ಮೀನಗರ ನಿವಾಸಿ ಅಭಿಷೇಕ್ ಪಾಲನ್ (30) ಮತ್ತು ಕೊಳಲಗಿರಿಯ ಆರ್. ಶಾಶ್ವತ್(24) ಬಂಧಿತ ಆರೋಪಿಗಳು. ಬೆಳಪು ಇಂಡಸ್ಟ್ರಿಯಲ್ ಏರಿಯಾ ಕ್ರಾಸ್ ರಸ್ತೆ ಬಳಿ ಗಾಂಜಾ ಮಾರಾಟ ಮಾಡುವ ಬಗ್ಗೆ ದೊರೆತ ಮಾಹಿತಿ ಮೇರೆಗೆ ದಾಳಿ ನಡೆಸಿದ ಶಿರ್ವ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಮಂಜುನಾಥ ಮರಬದ ನೇತೃತ್ವದ ತಂಡವು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರಿಂದ 5 ಸಾವಿರ ರೂ. ಮೌಲ್ಯದ 115.44 ಗ್ರಾಂ ಗಾಂಜಾ, ತೂಕದ […]
ಉಡುಪಿ:ಅ.10,11 ರಂದು ಕೋಲ್ಕತ್ತಾ ಸೀರೆ ಪ್ರದರ್ಶನ ಹಾಗೂ ದೀಪಾವಳಿ ಮಾರಾಟ

ಉಡುಪಿ:ಅ.10,11 ರಂದು ಕೋಲ್ಕತ್ತಾ ಸೀರೆ ಪ್ರದರ್ಶನ ಹಾಗೂ ದೀಪಾವಳಿ ಮಾರಾಟವು ಬೆಳಿಗ್ಗೆ 10.00 ರಿಂದ ರಾತ್ರಿ 8.00 ರವರೆಗೆ ದಿ ಓಷನ್ ಪರ್ಲ್ ಜೇಡ್ ಹಾಲ್, ಕಡಿಯಾಳಿ ಜಂಕ್ಷನ್, ಉಡುಪಿ ಇಲ್ಲಿ ನಡೆಯಲಿದೆ. ನಿಮ್ಮ ಶೈಲಿಯನ್ನು ಪರಿಪೂರ್ಣ ಸೀರೆಯೊಂದಿಗೆ ಪರಿವರ್ತಿಸಿ. ಇಲ್ಲಿ ಅನೇಕ ವಿಧದ ಸೀರೆಗಳು ಲಭ್ಯವಿದೆ.ಬಂಗಾಳ ಕೈಮಗ್ಗ ಸೀರೆ,ಬಲುಚಾರಿ ಸೀರೆ,ತುಸೂರ್ ರೇಷ್ಮೆ ಸೀರೆ, ಆರ್ಗನ್ಜಾ ಸೀರೆ,ಕ್ರಷ್ ಟಿಶ್ಯೂ ಸೀರೆ,ಬನಾರಸ್ ಸೀರೆ ಎಲ್ಲಾ ರೀತಿಯ ಸಲ್ವಾರ್ ಸೂಟ್ ಮತ್ತು ಇನ್ನೂ ಹಲವು ಬಗೆಯ ಉಡುಪುಗಳು ಇರಲಿವೆ ಎಂದು […]
ಸಂಚಾರ ನಿಯಮ ಉಲ್ಲಂಘನೆಯಲ್ಲಿ ಬೆಂಗಳೂರು ಮೊದಲ ಸ್ಥಾನ: ACKO ಸಮೀಕ್ಷಾ ವರದಿ

ಬೆಂಗಳೂರು: ದೇಶಗಳ ನಗರಗಳ ಪೈಕಿ ಬೆಂಗಳೂರು ಅತೀ ಹೆಚ್ಚು ಟ್ರಾಫಿಕ್ ನಗರವಾಗಿ ಗುರುತಿಸಿಕೊಂಡಿದೆ. ಬೆಂಗಳೂರಿನ ಬಹುತೇಕ ರಸ್ತೆಗಳು ಕಿಕ್ಕಿರಿದು ತುಂಬಿರುತ್ತದೆ. ಪೀಕ್ ಸಮಯದಲ್ಲಿ ಬೆಂಗಳೂರಿನ ಪ್ರಯಾಣ ಯಾರಿಗೂ ಬೇಡ. ಅಕ್ಟೋಬರ್ ತಿಂಗಳಿನಿಂದ ಎಲ್ಲಾ ಕಂಪನಿಗಳು ವರ್ಕ್ ಫ್ರಮ್ ಹೋಮ್ ಅಂತ್ಯಗೊಳಿಸಿ ಕಚೇರಿಯಿಂದ ಕೆಲಸ ಮಾಡಲು ಸೂಚಿಸಿದೆ. ಹೀಗಾಗಿ ಬೆಂಗಳೂರು ಟ್ರಾಫಿಕ್ ಮತ್ತಷ್ಟು ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಮಾತ್ರವಲ್ಲ, ಪದೇ ಪದೇ ಸಂಚಾರ ನಿಯಮ ಉಲ್ಲಂಘನೆಯಲ್ಲೂ ಮುಂದಿದೆ. ರಿಪೀಟೆಡ್ ಟ್ರಾಫಿಕ್ ರೂಲ್ಸ್ ಪ್ರಕರಣದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. […]