ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಜಿ. ಶಂಕರ್ ಸಮಾಜಮುಖಿ ಸೇವೆ ಅನುಕರಣೀಯ : ಯಶ್ ಪಾಲ್ ಸುವರ್ಣ

ಶಿಕ್ಷಣ ಹಾಗೂ ಆರೋಗ್ಯವಂತ ಸಮಾಜದ ಮೂಲಕ ದೇಶದ ಭವಿಷ್ಯ ರೂಪಿಸಲು ಸಾಧ್ಯ ಎಂಬ ಚಿಂತನೆಯ ಮೂಲಕ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಓರ್ವ ಸಹೃದಯಿ ದಾನಿಯಾಗಿ ಮಾಡಿರುವ ಸಮಾಜಮುಖಿ ಸೇವೆಗಳು ಸದಾ ಅನುಕರಣೀಯ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು. ಉಡುಪಿ ಅಜ್ಜರಕಾಡು ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ನಾಡೋಜ ಡಾ. ಜಿ. ಶಂಕರ್ ರವರ 70ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಅಭಿನಂದನಾ […]

ರಾಷ್ಟ್ರಮಟ್ಟದಲ್ಲಿ ಮಿಂಚಿದ ಹೊಟೇಲ್ ಮತ್ತು ಆತಿಥ್ಯ ಕ್ಷೇತ್ರದ ಆದರ್ಶ ವ್ಯಕ್ತಿ ಪೆರ್ಣಂಕಿಲ ಡಾ.ರಾಮದಾಸ ಪ್ರಭು.

ಉಡುಪಿ: ಉಡುಪಿ ಜಿಲ್ಲೆಯ ಪೆರ್ಣಂಕಿಲ ಗ್ರಾಮದ ಮೂಲದ ಡಾ.ರಾಮದಾಸ ಪ್ರಭು ಅವರು ಗ್ರಾಮೀಣ ಭಾಗದ ಪಟ್ಲ ಶಾಲೆಯಲ್ಲಿ ಕಷ್ಟಪಟ್ಟು ವಿದ್ಯಾಭ್ಯಾಸವನ್ನು ಪೂರೈಸಿ, ಉನ್ನತ ಶಿಕ್ಷಣ ಪಡೆದು ಆತಿಥ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ವ್ಯಕ್ತಿ. ಒಂದು ಸಣ್ಣ ಹಳ್ಳಿಯಿಂದ ಹೊರಟ ಅವರು ಪರಿಶ್ರಮದ ಮೂಲಕ ಆತಿಥ್ಯ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದ ಹೆಸರು ಗಳಿಸಿದ್ದಾರೆ. 25 ವರ್ಷಗಳ ಶ್ರೇಷ್ಠ ಸೇವೆ: ಕಳೆದ 25 ವರ್ಷಗಳಿಂದ ಮುಂಬೈ, ಪುಣೆ, ಲೋನಾವಲಾ, ಬರೋಡಾ, ಅಹಮದಾಬಾದ್, ಲಕ್ನೋ, ಕಾನ್ಪುರ್, ಇಂದೋರ್, ಗೋವಾ, ಬಂಡಿಪುರ […]

ಉಡುಪಿ: ಎಕೆಎಂಎಸ್ ಬಸ್ ಮಾಲಿಕ ಸೈಫುದ್ದಿನ್ ಕೊಲೆ ಪ್ರಕರಣ: ಮಹಿಳೆ ಬಂಧನ

ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೈಫುದ್ದಿನ್ ಕೊಲೆ ಪ್ರಕರಣಕ್ಕೆ ಸಂಬಧಿಸಿದಂತೆ ಕೊಲೆಗೆ ಒಳಸಂಚು ರೂಪಿಸಿ ಕೃತ್ಯದಲ್ಲಿ ಭಾಗಿಯಾದ ನಾಲ್ಕನೇ ಆರೋಪಿ ಶ್ರೀಮತಿ ರಿಧಾ ಶಭನಾ(27), ಗಂಡ : ಮೊಹಮ್ಮದ್ ಫೈಜಲ್ ಖಾನ್, ಸಿ ಗೇಟ್ ಅಪಾರ್ಟ್ಮೆಂಟ್, ಮೆಷಿನ್ ಕಂಪೌಂಡ್ ಹತ್ತಿರ, ಬಡಗುಬೆಟ್ಟು, ಉಡುಪಿ ಇವರನ್ನು ಈ ದಿನ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮಿಕ್ಕುಳಿದ ಆರೋಪಿಗಳಾದ ಉಡುಪಿ ಕರಂಬಳ್ಳಿ ಜನತಾ ಕಾಲೋನಿಯ ಮೊಹಮದ್ ಶರೀಫ್, ಸುರತ್ಕಲ್ ಕೃಷಾಪುರದ ಏಳನೇ ಬ್ಲಾಕ್ ನಿವಾಸಿ ಅಬ್ದುಲ್ ಶುಕೂರು ಯಾನೆ […]