ನಂದಿನಿ ಉತ್ಪನ್ನಗಳಲ್ಲಿ ಕಲಬೆರಿಕೆ ತಡೆಯಲು KMF ಕ್ರಮ: ರಾಜ್ಯದ್ಯಂತ 890 ಸ್ಯಾಂಪಲ್ ಪರೀಕ್ಷೆ.

ಬೆಂಗಳೂರು:ನಂದಿನಿ ಉತ್ಪನ್ನಗಳಲ್ಲಿ ಕಲಬೆರಕೆ ತಡೆಯಲು ಕೆಎಂಎ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.ಪ್ರತಿ ವಾರದಲ್ಲಿ ಇಂತಿಷ್ಟು ಪ್ರಕರಣವನ್ನು ಪರೀಕ್ಷೆಗೊಳಪಡಿಸಿ, ವರದಿ ನೀಡಬೇಕು ಎನ್ನುವ ಸೂಚನೆಯನ್ನು ಕೆಎಂಎ ಜಾಗೃತ ತನಿಖಾದಳಕ್ಕೆ ನೀಡಲಾಗಿದೆ. ಅಲ್ಲದೆ ತನಿಖಾ ದಳಕ್ಕೆ ಇದ್ದ ಸಿಬ್ಬಂದಿ ಕೊರತೆಯನ್ನು ನೀಗಿಸಿದ್ದು, ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ.ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ನಡೆದ ಕೆಲ ಪ್ರಕರಣಗಳು ಬಯಲಿಗೆ ಬಂದ ಬೆನ್ನಲ್ಲಿಯೇ ಜಾಗೃತ ತನಿಖಾ ದಳ ಸಕ್ರೀಯವಾಗಿ ಇಡೀ ರಾಜ್ಯದಾದ್ಯಂತ ಕೆಲಸ ಮಾಡುತ್ತಿದೆ.ನಂದಿನಿ ಬ್ರಾಂಡಿಂಗ್ ಕೂಡ ದುರುಪಯೋಗವಾಗುತ್ತಿರುವ ಪ್ರಕರಣವನ್ನು ಪತ್ತೆ […]
ಜನಾರ್ದನ ಕೊಡವೂರು ಅವರಿಗೆ ‘ಮಹಷಿ ವಾಲ್ಮೀಕಿ ಸಮ್ಮಾನ್-2025’ ಪ್ರಶಸ್ತಿ

ಉಡುಪಿ: ಉಡುಪಿ ಜಿಲ್ಲಾ ಮಹರ್ಷಿ ವಾಲ್ಮೀಕಿ ಸಂಘದ ವತಿಯಿಂದ ಇದೇ ಅ.7ರಂದು ಉಡುಪಿಯ ಮಿಷನ್ ಕಾಂಪೌಂಡ್‌ನಲ್ಲಿರುವ ಜಗನ್ನಾಥ ಸಭಾಭವನದಲ್ಲಿ ಆಯೋಜಿಸಲಾಗುವ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯ ಕ್ರಮದಲ್ಲಿ ಕನ್ನಡ ನಾಡು – ನುಡಿ ಸಂಸ್ಕೃತಿ, ಸಾಹಿತ್ಯ, ಛಾಯಾಗ್ರಹಣ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಉಡುಪಿಯ ಜನಾರ್ದನ್ ಕೊಡವೂರು ಅವರಿಗೆ ‘ಮಹರ್ಷಿ ವಾಲ್ಮೀಕಿ ಸಮ್ಮಾನ್-2025’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ತಿಳಿಸಿದ್ದಾರೆ. ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, […]
ಕಾರ್ಕಳದ ಪುಲ್ಕೆರಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ಕಾರ್ಕಳ: ಪುಲ್ಕೆರಿಯ A L ಗ್ರೂಪ್ ಮತ್ತು ಮುರತಂಗಡಿಯ S.B.Y. S ಸಂಸ್ಥೆಯ ಜಂಟಿ ಆಶ್ರಯದಲ್ಲಿ ಶಿವ ಡಿಜಿಟಲ್ಸ್ ಪುಲ್ಕೆರಿ ಇವರ ಸಹಕಾರದಲ್ಲಿ ಕಾರ್ಕಳ ಪುಲ್ಕೆರಿ ಬೈಪಾಸ್ ವೃತದಿಂದ ಅನೇಕೆರೆ ಭವಾನಿ ಸರ್ಕಲ್ ವರೆಗೆ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕಮ ಜರಗಿತು.