ಕಾರ್ಕಳ ಬಿಜೆಪಿ ಹಿರಿಯ ನೇತಾರ, ಖ್ಯಾತ ವಕೀಲ ಎಂ.ಕೆ.ವಿಜಯ್ ಕುಮಾರ್ ನಿಧನ.

ಕಾರ್ಕಳ: ಕಾರ್ಕಳ ಬಿಜೆಪಿಯ ಹಿರಿಯ ನೇತಾರ, ಖ್ಯಾತ ವಕೀಲ ಎಂ.ಕೆ.ವಿಜಯ್ ಕುಮಾರ್ (82) ಹೃದಯಾಘಾತದಿಂದ ನಿಧನ ಹೊಂದಿದ್ದರು. ಅ.3 ರಂದು ಸಾಯಂಕಾಲ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಮೇಲೆ‌ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಉಡುಪಿ: ಮಲ್ಪೆ ಬೀಚ್ ನಲ್ಲಿ ಇಬ್ಬರು ಯುವಕರು ನೀರುಪಾಲು; ಓರ್ವನ ರಕ್ಷಣೆ, ಇನ್ನೋರ್ವ ನಾಪತ್ತೆ

ಉಡುಪಿ: ಮಲ್ಪೆ ಬೀಚ್ ನಲ್ಲಿ ಈಜಾಡುತ್ತಿದ್ದ ಇಬ್ಬರು ಯುವಕರು ನೀರುಪಾಲಾಗಿದ್ದು, ಓರ್ವನನ್ನು ರಕ್ಷಿಸಿರುವ ಘಟನೆ ಇಂದು ಸಂಜೆ ಸಂಭವಿಸಿದೆ.ಹಾಸನ ಮೂಲದ ಮಿಥುನ್ ಮತ್ತು ಶಶಾಂಕ್ ನೀರುಪಾಲಾಗಿದ್ದಾರೆ. ಇದನ್ನು ಗಮನಿಸಿದ ಸಹ ಪ್ರವಾಸಿಗರು ಶಶಾಂಕ್ ನನ್ನು ರಕ್ಷಿಸಿದ್ದಾರೆ. ಆತನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಿಥುನ್ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಶೋಧಕಾರ್ಯ ಮುಂದುವರಿದಿದೆ.ಜಿಲ್ಲಾಡಳಿತದಿಂದ ಭಾರೀ ನಿರ್ಲಕ್ಷ್ಯ ಆರೋಪ:ದಸರಾ ರಜೆ ಹಿನ್ನೆಲೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಪ್ರವಾಸಿಗರು ಉಡುಪಿಗೆ ಆಗಮಿಸುತ್ತಿದ್ದಾರೆ. ಸಾವಿರಾರು ಜನರಿಗೆ ಕೇವಲ ಮೂರು ಜನ ಲೈಫ್ ಗಾರ್ಡ್ […]

ಉಡುಪಿ ಜಿಲ್ಲಾ ಬಿಜೆಪಿ ನೂತನ ಕಟ್ಟಡ ಶಿಲಾನ್ಯಾಸ ನೆರವೇರಿಸಿದ ಬಿ.ಎಲ್ ಸಂತೋಷ್

ಉಡುಪಿ: ಉಡುಪಿ ಜಿಲ್ಲಾ ಬಿಜೆಪಿಯ ನೂತನ ಜಿಲ್ಲಾ ಕಚೇರಿ ಕಟ್ಟಡದ ಶಿಲಾನ್ಯಾಸ ಹಾಗೂ ಕಾರ್ಯಕರ್ತರ ಸಮಾವೇಶ ಇಂದು ಉಡುಪಿಯ ಗುಂಡಿಬೈಲುವಿನಲ್ಲಿ ನಡೆಯಿತು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು ಕಟ್ಟಡದ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ ಸುನಿಲ್ ಕುಮಾ‌ರ್, ಉಡುಪಿ […]

ಆಗಾಗ ಒಂದಷ್ಟು ಕ್ಷಣ ನಗೋಣ ಪ್ಲೀಸ್ : ಇಂದು ವಿಶ್ವ ನಗು ದಿನ, ನಗೋದು ಆರೋಗ್ಯಕ್ಕೆ ಒಳ್ಳೇದು

ವಿಶ್ವ ನಗು ದಿನ ಪ್ರತಿ ವರ್ಷ ಅಕ್ಟೋಬರ್ ತಿಂಗಳ ಮೊದಲ ಶುಕ್ರವಾರದಂದು ಆಚರಿಸಲಾಗುತ್ತದೆ. ಈ ದಿನದ ಉದ್ದೇಶ ಸರಳವಾದರೂ ಬಹು ಮುಖ್ಯವಾದದ್ದು – ಜನರ ಮುಖದಲ್ಲಿ ನಗುವನ್ನು ತರಲು ಮತ್ತು ನಗುವಿನ ಮೂಲಕ ಅರು ಆರೋಗ್ಯದಿಂದಿರಿಸಲು ಈ ದಿನವನ್ನು ಆಚರಿಸಲಾಗುತ್ತೆ. ಸ್ಮೈಲಿ ಮುಖದ ಚಿಹ್ನೆಯನ್ನು ರಚಿಸಿದ ಹಾರ್ವೆ ಬಾಲ್ ಅವರು 1999ರಲ್ಲಿ ವಿಶ್ವ ನಗು ದಿನವನ್ನು ಆರಂಭಿಸಿದರು. ನಗುವು ಮಾನವ ಹೃದಯಗಳನ್ನು ಒಂದಾಗಿಸುವ ಶಕ್ತಿ ಹೊಂದಿದೆ ಎನ್ನು ನಂಬಿಕೆ ಅವರದ್ದಾದ್ದರಿಂದ ಈ ದಿನದ ಆಚರಣೆ ಹುಟ್ಟಿಕೊಂಡಿತು. ಏಕೆ […]

ಗಂಡು ಶಿಶುವಿನ ಹೊಟ್ಟೆಯೊಳಗೆ ಮತ್ತೊಂದು ಮಗು: ಹುಬ್ಬಳ್ಳಿಯಲ್ಲಿ ವಿಚಿತ್ರ ಪ್ರಕರಣ ಏನಿದು?

ವೈದ್ಯಕೀಯ ಲೋಕದಲ್ಲೇ ಅತಿ ಅಪರೂಪವಾದ ಪ್ರಕರಣವೊಂದನ್ನು ಕರ್ನಾಟಕದ ವೈದ್ಯರು ವರದಿ ಮಾಡಿದ್ದಾರೆ. ಅದೇನೆಂದರೆ, ನವಜಾತ ಗಂಡು ಶಿಶುವಿನ ಹೊಟ್ಟೆಯೊಳಗೆ ಮತ್ತೊಂದು ಮಗು ಬೆಳೆಯುತ್ತಿರುವುದು ಕಂಡುಬಂದಿದೆ. ಈ ವಿಚಿತ್ರ ಪ್ರಕರಣವನ್ನು ಫೀಟಸ್ ಇನ್ ಫೀಟು (ಭ್ರೂಣದಲ್ಲಿ ಭ್ರೂಣ) ಎಂದು ಕರೆಯಲಾಗುತ್ತದೆ.ಅಂದಹಾಗೆ, ಈ ರೀತಿಯ ವಿಚಿತ್ರ ಪ್ರಕರಣ 5,00,000 ಜೀವಂತ ಜನನಗಳಲ್ಲಿ 1 ರಲ್ಲಿ ಮಾತ್ರ ಸಂಭವಿಸುತ್ತದೆ. ಗರ್ಭಾವಸ್ಥೆಯ ಅವಧಿಯಲ್ಲಿ ತನ್ನ ಸಹೋದರನ ಹೊಟ್ಟೆಯ ಒಳಗೆ ಬೆಳೆಯುವ ಪರಾವಲಂಬಿ ಅವಳಿ ಶಿಶುವನ್ನು ಒಳಗೊಂಡಿರುತ್ತದೆ. ಇದು ವೈದ್ಯ ಲೋಕದಲ್ಲಿ ತುಂಬಾ ಅಪರೂಪವಾಗಿದೆ. […]