ರಸ್ತೆ ಗುಂಡಿಗೆ ವಿದ್ಯಾರ್ಥಿನಿ ಬಲಿ: ಟಿಪ್ಪರ್ ಡಿಕ್ಕಿಯಾಗಿ ಬಿ.ಕಾಂ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತ್ಯು

ಬೆಂಗಳೂರು: ಬೂದಿಗೆರೆ ಕ್ರಾಸ್ ಬಳಿ ರಸ್ತೆ ಗುಂಡಿ ತಪ್ಪಿಸುವ ಯತ್ನದಲ್ಲಿ ನಿಯಂತ್ರಣ ತಪ್ಪಿ ಬಿದ್ದ ವಿದ್ಯಾರ್ಥಿನಿ ಮೇಲೆ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್) ರಸ್ತೆಯ ಆವಲಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ ಘಟನೆ ಸಂಭವಿಸಿದೆ. ಬೈಯಪ್ಪನಹಳ್ಳಿ ನಿವಾಸಿ ತನುಶ್ರೀ (22) ಅವರು ಬಿ.ಕಾಂ ಓದುತ್ತಿದ್ದರು. ಬೂದಿಗೆರೆ ಕ್ರಾಸ್ ಬಳಿಯ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ತನುಶ್ರೀ ಅವರು, ರಸ್ತೆ ಗುಂಡಿ ತಪ್ಪಿಸಲು ಬಲ ಬದಿಗೆ ವಾಹನ ಚಾಲನೆ ಮಾಡಿದ್ದರು. […]
30ನೇ ಫೆನೆಸ್ಟಾ ಓಪನ್ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಶಿಪ್; ಕರ್ನಾಟಕದ ಪ್ರಜ್ವಲ್ ಗೆ ಜಯ!

ನವದೆಹಲಿಯಲ್ಲಿ ಆರಂಭವಾದ ಫೆನೆಸ್ಟಾ ಓಪನ್ ರಾಷ್ಟ್ರೀಯ ಟೆನ್ನಿಸ್ ಚಾಂಪಿಯನ್ ಶಿಪ್ ನಲ್ಲಿ ವೈಷ್ಣವಿ ಅಡ್ಕರ್ ಹಾಗೂ ಕರ್ನಾಟಕದ ಎಸ್ಡಿ ಪ್ರಜ್ವಲ್ ದೇವ್ ತಮ್ಮ ತಮ್ಮ ವಿಭಾಗಗಳಲ್ಲಿ ಗೆಲುವು ಸಾಧಿಸಿದರು. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಆಡಿದ ಮಹಾರಾಷ್ಟ್ರದ ವೈಷ್ಣವಿ ಮೊದಲ ಸುತ್ತಿನಲ್ಲಿ, ತಮಿಳುನಾಡಿನ ಮ್ರಿದುಲಾ ಪಾಲನಿವೇಲ್ ವಿರುದ್ಧ 6-2, 6-4 ಅಂತರದಿಂದ ಜಯ ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದರು. ಡಿಸಿಎಂ ಶ್ರೀರಾಮ್ ಲಿಮಿಟೆಡ್‌ನ ಬೆಂಬಲದೊಂದಿಗೆ ಮತ್ತು ಆಲ್ ಇಂಡಿಯಾ ಟೆನಿಸ್ ಅಸೋಸಿಯೇಶನ್ (AITA) ಹಾಗೂ ದೆಹಲಿ ಲಾನ್ ಟೆನಿಸ್ […]
MSDC ಓರೇನ್ ಇಂಟರ್ನ್ಯಾಷನಲ್’ನಲ್ಲಿ ಹಬ್ಬಗಳ ಪ್ರಯುಕ್ತ ಹೇರ್, ಸ್ಕಿನ್, ನೈಲ್ ಹಾಗೂ ಕಾಸ್ಮೆಟಾಲಜಿಗೆ ಶೇ.40% ವರೆಗೆ ವಿಶೇಷ ಕೊಡುಗೆ.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ(ಡಾ. ಟಿ.ಎಂ.ಎ. ಪೈ ಫೌಂಡೇಶನ್‌ನ ಒಂದು ಘಟಕ) ಓರೇನ್ ಇಂಟರ್ನ್ಯಾಷನಲ್’ನಲ್ಲಿ ಹೇರ್, ಸ್ಕಿನ್, ನೈಲ್ ಹಾಗೂ ಕಾಸ್ಮೆಟಾಲಜಿಗೆ ಶೇ.40% ವರೆಗೆ ವಿಶೇಷ ಕೊಡುಗೆಗಳನ್ನು ನೀಡಲಾಗಿದೆ. ಈ ಕೌಶಲ್ಯ ತರಬೇತಿಗಳು ಯುಜಿಸಿ ಅನುಮೋದಿತ, ಪದವಿ ಸರ್ಕಾರಿ ಅನುಮೋದಿತ ಪ್ರಮಾಣೀಕರಣ ಹಾಗೂ ವಿಶ್ವ ದರ್ಜೆಯ ಪ್ರಯೋಗಾಲಯಗಳನ್ನು ಒಳಗೊಂಡಿದೆ. ಓರೇನ್ ಇಂಟರ್ನ್ಯಾಷನಲ್ ಶೇ.100% ಉದ್ಯೋಗ ಸಹಾಯ ನೀಡಲಿದೆ. ಸೀಮಿತ ಸಮಯದ ಕೊಡುಗೆಯಾಗಿದ್ದು, ಹಬ್ಬಗಳ ಪ್ರಯುಕ್ತ ಶೇ.50% ವರೆಗೆ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದು. ನಿಮ್ಮ ಉಚಿತ ಡೆಮೊ ತರಗತಿಯನ್ನು […]
ಎಸ್.ಕೆ. ಗೋಲ್ಡ್ ಸ್ಮಿತ್ಸ್ ಸೊಸೈಟಿ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯರಿಗೆ ವಿಶ್ವಕರ್ಮ ಶ್ರೀ ಪ್ರಶಸ್ತಿ

ಮಂಗಳೂರು: ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯರಿಗೆ ಸಹಕಾರಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ವಿಶ್ವಕರ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಾಸನ ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಮಹಾಸ್ವಾಮಿಗಳು ಹಾಗೂ ಪರಸಮಯ ಕೋಲರಿನಾಥರ್ ಅಧೀನಂ ಪೀಠಾಧಿಪತಿ ಶ್ರೀ ಸ್ವಾಮಿ ಬುದ್ಧಾತ್ಮಾನಂದ ಸರಸ್ವತಿ ಅವರ ಉಪಸ್ಥಿತಿಯಲ್ಲಿ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ನಾಡೋಜ ಡಾ.ಬಿ.ಎಂ.ಉಮೇಶ್ ಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ […]
ಕಮಲಶಿಲೆ, ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನದಲ್ಲಿ ಅ.01ರಂದು ಚಂಡಿಕಾ ಯಾಗ, ಅ.02ರಂದು ವಿಜಯೋತ್ಸವ.

ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶ್ರೀ ಕ್ಷೇತ್ರ ಕಮಲಶಿಲೆ, ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನದಲ್ಲಿ ಸೆ.22 ರಿಂದ ಅ.02ರ ವರೆಗೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ ನಡೆಯುತ್ತಿದೆ. ಅ.01, ಬುಧವಾರ ನವಮಿಯಂದು ಮಧ್ಯಾಹ್ನ ಶ್ರೀ ಚಂಡಿಕಾ ಯಾಗ, ರಾತ್ರಿ ರಜತ ರಥೋತ್ಸವ ಮತ್ತು ಪುಷ್ಪಕವಾಹನದಲ್ಲಿ ಪುರಮೆರವಣಿಗೆ (ರಥಬೀದಿ ಮತ್ತು ರಾಜಬೀದಿ) ನಡೆಯಲಿದ್ದು, ಅ.02 ರಂದು ಉದಯಪೂರ್ವ 6-05 ಗಂಟೆಗೆ ಕದಿರು ಮುಹೂರ್ತ, ಧಾನ್ಯ ಸಂಗ್ರಹ ಕಣಜ ತುಂಬಿಸುವುದು, ಶಮೀ ಪೂಜೆ […]