ಅಮೆರಿಕಾದಿಂದ ಸುಮಾರು 2,417 ಮಂದಿ ಭಾರತೀಯರು ಗಡಿಪಾರು: ವಿದೇಶಾಂಗ ಇಲಾಖೆ ಹೇಳಿಕೆ

ಹೊಸದಿಲ್ಲಿ: ಈ ವರ್ಷದ ಜನವರಿ ತಿಂಗಳಿನಿಂದೀಚೆಗೆ 2,417 ಭಾರತೀಯ ಪ್ರಜೆಗಳು ಅಮೆರಿಕದಿಂದ ಗಡಿಪಾರಾಗಿದ್ದಾರೆ ಅಥವಾ ಸ್ವದೇಶಕ್ಕೆ ವಾಪಸಾಗಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ ಜೈಸ್ವಾಲ್ ಶುಕ್ರವಾರ ತಿಳಿಸಿದ್ದಾರೆ. ಕಾನೂನಾತ್ಮಕ ಮಾರ್ಗಗಳ ಮೂಲಕ ವಲಸೆಯನ್ನು ಭಾರತ ಉತ್ತೇಜಿಸುತ್ತದೆ. ಭಾರತವು ಅಕ್ರಮ ವಲಸೆಗೆ ವಿರುದ್ಧವಾಗಿದೆ ಎಂದು ಜೈಸ್ವಾಲ್‌ ಹೇಳಿದರು. ಅಮೆರಿಕದಿಂದ ಭಾರತಕ್ಕೆ ಗಡಿಪಾರು ಮಾಡಲ್ಪಟ್ಟವರ ರಾಷ್ಟ್ರೀಯತೆಯನ್ನು ಸರಕಾರವು ದೃಢೀಕರಿಸಿಕೊಳ್ಳಲಿದೆ ಎಂದವರು ಹೇಳಿದ್ದಾರೆ.

ಉಡುಪಿ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು; ಕಾರಿನಲ್ಲಿದ್ದವರು ಅಪಾಯದಿಂದ ಪಾರು

ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ಮನೆಯ‌ ಆವರಣ ಗೋಡೆಗೆ ಗುದ್ದಿದ ಘಟನೆ ಕುಂಜಿಬೆಟ್ಟು ಹೋಂಡಾ ಶೋರೂಮ್‌ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮಣಿಪಾಲದಿಂದ ಉಡುಪಿಗೆ ಕಡೆಗೆ ಬರುತ್ತಿದ್ದ ಕೇರಳ ನೋಂದಣಿ ಸಂಖ್ಯೆ ಹೊಂದಿರುವ ಕಾರು ಅಪಘಾತಕ್ಕೀಡಾಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ಪಿಜಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದ ಯುವತಿ!

ಬಾಗಲಕೋಟೆ: ಯುವತಿಯೊಬ್ಬಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಗರದ ವಿದ್ಯಾಗಿರಿಯ ಪಿಜಿಯೊಂದರಲ್ಲಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿನಿಯನ್ನು ಸುನಗ ತಾಂಡಾದ ಸೀಮಾ ರಾಠೋಡ (17) ಎಂದು ಗುರುತಿಸಲಾಗಿದೆ. ಸೀಮಾ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ಓದುತ್ತಿದ್ದಳು. ಪಿಜಿಯಲ್ಲಿ ಕೆಲವು ವಿದ್ಯಾರ್ಥಿನಿಯರು ರೂಮ್ ಒಳಗೆ ಹೋಗುತ್ತಿದ್ದಂತೆ ಯುವತಿಯ ಮೃತದೇಹ ಸ್ಲ್ಯಾಬ್‍ನ ಹುಕ್‍ನಲ್ಲಿ ನೇತಾಡುತ್ತಿರುವುದನ್ನು ಕಂಡು ಕಿರುಚಾಡುತ್ತ ಹೊರಗೆ ಓಡಿ ಬಂದಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವತಿಯ ಪೋಷಕರು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. […]

ದಸರಾ ಹಬ್ಬಕ್ಕೆ ಮಂಗಳೂರು-ಬೆಂಗಳೂರು ನಡುವೆ ವಿಶೇಷ ರೈಲು ವ್ಯವಸ್ಥೆ.

ಮಂಗಳೂರು: ನೈರುತ್ಯ ರೈಲ್ವೆ ವಲಯವು ದಸರಾ ಹಬ್ಬದ ಪ್ರಯುಕ್ತ ಬೆಂಗಳೂರಿನ ಯಶವಂತಪುರ ಜಂಕ್ಷನ್ ರೈಲು ನಿಲ್ದಾಣದಿಂದ ಕುಣಿಗಲ್ ಮಾರ್ಗವಾಗಿ ಮಂಗಳೂರಿನ ಮಂಗಳೂರು ಜಂಕ್ಷನ್ ಹಾಗು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಕುಣಿಗಲ್ ಮಾರ್ಗವಾಗಿ ಯಶವಂತಪುರ ಜಂಕ್ಷನ್ ನಡುವೆ ವಿಶೇಷ ರೈಲು ಓಡಿಸಲಿದೆ. ದಿನಾಂಕ 30/09/2025 ಮಂಗಳವಾರ ರೈಲು ಸಂಖ್ಯೆ 06257 ಯಶವಂತಪುರ ಜಂಕ್ಷನ್ – ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್‌ ಯಶವಂತಪುರ ಜಂಕ್ಷನ್ ರೈಲು ನಿಲ್ದಾಣದಿಂದ ರಾತ್ರಿ 11:55ಕ್ಕೆ ಹೊರಟು ಮರುದಿನ ಅಂದರೆ ಮಹಾನವಮಿಯ ಶುಭದಿನವಾದ 01/10/2025ರಂದು […]

ತರಾತುರಿ ಸಮೀಕ್ಷೆಯಿಂದ ರಾಜಕೀಯ ಲಾಭದ ಉದ್ದೇಶ: ವಿ.ಸುನಿಲ್ ಕುಮಾರ್

ಶಿರಸಿ: ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆ ತ್ಯಜಿಸುವ ಕಾಲ ಸನ್ನಿಹಿತವಾಗಿದೆ. ಅದಕ್ಕೆ ರಾಜಕೀಯ ಲಾಭಕ್ಕಾಗಿ ತರಾತುರಿಯಲ್ಲಿ ಜಾತಿವಾರು ಸಮೀಕ್ಷೆ ಜಾರಿಗೊಳಿಸಿದ್ದಾರೆ. ಆದರೆ, ಅದು ವಿಫಲವಾಗಿದೆ’ ಎಂದು ಶಾಸಕ ವಿ.ಸುನಿಲಕುಮಾರ ಆರೋಪಿಸಿದರು. ‘ಸಮೀಕ್ಷೆ ಸರಿಯಾಗಿ ನಡೆಸುವ ಉದ್ದೇಶ ಇದ್ದಿದ್ದರೆ, ಪೂರ್ವ ತಯಾರಿ ಮಾಡಿಕೊಳ್ಳಬೇಕಿತ್ತು. ಕಾಂತರಾಜ ಆಯೋಗದ ವರದಿಯನ್ನು ಸ್ವೀಕರಿಸದ ಅವರು, ₹ 420 ಕೋಟಿ ಬಳಸಿಕೊಂಡು ಪೂರ್ವ ಸಿದ್ಧತೆ ಮಾಡಿಕೊಳ್ಳದೇ ಸಮೀಕ್ಷೆ ಆರಂಭಿಸಿದ್ದು ಸರಿಯಲ್ಲ’ ಎಂದರು. ಪ್ರಕ್ರಿಯೆ ಕೈಗೊಂಡಿರುವುದು ಸರಿಯಲ್ಲ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ‘ಗ್ಯಾರಂಟಿ […]