ಗೋಕರ್ಣ ಗುಹೆಯಲ್ಲಿ ವಾಸವಿದ್ದ ತಾಯಿ-ಮಗಳಿಗೆ ರಷ್ಯಾಗೆ ಹಿಂದಿರುಗಲು ಕೋರ್ಟ್ ಅನುಮತಿ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಗುಹೆಯಲ್ಲಿ ವಾಸವಾಗಿದ್ದ ಪ್ರಕರಣದಲ್ಲಿ, ತಾಯಿ ಮತ್ತು ಆಕೆಯ ಇಬ್ಬರು ಮಕ್ಕಳು ರಷ್ಯಾಕ್ಕೆ ಹಿಂತಿರುಗಲು ಅಗತ್ಯವಾದ ಪ್ರಯಾಣ ದಾಖಲೆಗಳನ್ನು ಒದಗಿಸಲು ಹೈಕೋರ್ಟ್, ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿದೆ.ಈ ಸಂಬಂಧ ಮಕ್ಕಳ ತಂದೆ ಡ್ರೋರ್ ಶ್ಲೋಮೊ ಗೋಲ್ಡ್‌ಸ್ಟೈನ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ. “ಗುಹೆಯಲ್ಲಿ ತಂಗಿದ್ದ ಮಹಿಳೆ ಮತ್ತು ಮಕ್ಕಳು ಪರವಾನಗಿ ಪಡೆದು ರಷ್ಯಾದಿಂದ ಭಾರತಕ್ಕೆ ಬಂದಿದ್ದರೂ, ಅವಧಿ […]
ಎಂಟು ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗೆ ಮರಣದಂಡನೆ ಶಿಕ್ಷೆ – ನ್ಯಾಯಾಲಯ ತೀರ್ಪು

ಬೆಳಗಾವಿ: 2019ರಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ರಾಯಬಾಗ ತಾಲೂಕಿನ ಪರಮಾನಂದವಾಡಿ ಮೂಲದ ಆರೋಪಿ ಭರತೇಶ್ ರಾವಸಾಬ ಮಿರ್ಜಿ(28)ಗೆ ಬೆಳಗಾವಿ ಜಿಲ್ಲಾ ಪೊಕ್ಸೊ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿದೆ. 2019ರ ಅಕ್ಟೋಬರ್ 15ರಂದು ಸಂಜೆ ಬಾಲಕಿ ಮನೆ ಹತ್ತಿರದ ಅಂಗಡಿಗೆ ಹೋಗಿ ಮರಳುವಾಗ ಆರೋಪಿ ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ ಆಕೆಯ ದೇಹಕ್ಕೆ ಕಲ್ಲು ಕಟ್ಟಿ ಬಾವಿಗೆ ಎಸೆದು ಕೊಲೆ ಮಾಡಿದ್ದ. ಹುಡುಕಾಟದ […]
ಉಡುಪಿ: ಎಕೆಎಂಎಸ್ ಬಸ್ ಮಾಲೀಕ ಸೈಪುದ್ದೀನ್ ಭೀಕರ ಹತ್ಯೆ

ಉಡುಪಿ: ಎಕೆಎಂಎಸ್ ಬಸ್ ಮಾಲೀಕ, ಉದ್ಯಮಿ, ಆತ್ರಾಡಿ ನಿವಾಸಿ ಸೈಪುದ್ದೀನ್ ಎಂಬಾತನನ್ನು ದುಷ್ಕರ್ಮಿಗಳ ತಂಡವು ಭೀಕರವಾಗಿ ಹತ್ಯೆಗೈದ ಘಟನೆ ಮಲ್ಪೆ ಕೊಡವೂರಿನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ಪಡುಬಿದ್ರಿ: ದಸರಾ ಕಳೆ ಹೆಚ್ಚಿಸಿದ ವಸ್ತು ಪ್ರದರ್ಶನ

ಪಡುಬಿದ್ರಿ: ಸಮುದ್ರದ ಮತ್ತು ಹೊಳೆಯ ಮೀನುಗಳು, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ, ನಿರುಪಯುಕ್ತ ವಸ್ತುಗಳಿಂದ ತಯಾರಿಸಿರುವ ಕಲಾಕೃತಿಗಳು, ತೆಂಗಿನ ಸೋಗೆಯ ದ್ವಾರ, ಕುಬ್ಜ ಅಣ್ಣ –ತಂಗಿಯರು ರಚಿಸಿರುವ ಬಗೆ ಬಗೆಯ ವಸ್ತುಗಳು.ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ನಾಲ್ಕನೇ ವರ್ಷದ ಉಡುಪಿ– ಉಚ್ಚಿಲ ದಸರಾದಲ್ಲಿ ಹಮ್ಮಿಕೊಂಡಿರುವ ವಸ್ತುಪ್ರದರ್ಶನದಲ್ಲಿ ಈ ಕಲಾಕೃತಿಗಳು ಜನರನ್ನು ಸೆಳೆಯುತ್ತಿವೆ. ತೆಂಗಿನಗರಿ ಮತ್ತು ನಿರುಪಯುಕ್ತ ಬಾಟಲಿಗಳನ್ನು ಸಂಗ್ರಹಿಸಿ ಅವುಗಳ ಮೂಲಕ ರಚಿಸಿದ ಸ್ವಾಗತ ದ್ವಾರ ಆಕರ್ಷಣೀಯವಾಗಿದೆ. ಇಲ್ಲಿಗೆ ಭೇಟಿ ನೀಡುವವರನ್ನು ಪ್ರಮುಖವಾಗಿ ಆಕರ್ಷಸುತ್ತಿದೆ. ಪ್ರವೇಶ ದ್ವಾರದ […]
ಈ ಮುಟ್ಟಿನ ಬಟ್ಟಲನ್ನು ಬಳಸಿದ್ರೆ ಎಷ್ಟೊಂದೆಲ್ಲಾ ಲಾಭ! ಮಹಿಳೆಯರಿಗೆ ಮಾತ್ರವಲ್ಲ, ಹೆಣ್ಣು ಮಕ್ಕಳ ಕಾಳಜಿಯಿರುವ ಪುರುಷರಿಗೂ ಈ ವಿಷ್ಯ ಗೊತ್ತಿರಬೇಕು!ಇದು ಉಡುಪಿXPRESS.COM ಕಾಳಜಿ

ನೀವು ನಿಮ್ಮ ಹೆಂಡತಿ, ಮಗಳು, ಅಕ್ಕ- ತಂಗಿಯರ ಕುರಿತು ಕಾಳಜಿ ಇರುವ ಪುರುಷರಾಗಿದ್ದರೆ, ನಿಮ್ಮದೇ ಆರೋಗ್ಯ, ಪರಿಸರದ ಕುರಿತು ಕಾಳಜಿ ಹೊಂದಿರುವ ಮಹಿಳೆಯಾಗಿದ್ದರೆ ಒಮ್ಮೆ ಇಲ್ಲಿ ಗಮನಿಸಿ. ಮೆನ್ಸ್ಟ್ರುವಲ್ ಕಪ್ ಅಥವಾ ಮುಟ್ಟಿನ ಬಟ್ಟಲು ಅನ್ನೋ ಪದ ಒಮ್ಮೆಯಾದರೂ ನಿಮ್ಮ ಕಿವಿಗೆ ಬಿದ್ದಿರುತ್ತದೆ. ಮುಟ್ಟು ಅನ್ನೋ ಪದವನ್ನೇ ಹೇಳಲಿಕ್ಕೆ ಹಿಂಜರಿಯುವ ಹೆಣ್ಣುಮಕ್ಕಳು ಅಥವಾ ಇದು ನಮಗೆ ಸಂಬಂಧಿಸಿದ್ದಲ್ಲ ಅಂತ ಕಡೆಗಣಿಸುವ ಗಂಡುಮಕ್ಕಳು ಎಲ್ಲರೂ ಕೂಡಾ ಏನಿದು ಮುಟ್ಟಿನ ಬಟ್ಟಲು ಅಂತ ಯೋಚನೆ ಮಾಡೇ ಮಾಡಿರುತ್ತೀರಾ. ಹಾಗಾದ್ರೆ ಈ […]