ಉಡುಪಿ:ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ – ಚುನಾವಣಾಧಿಕಾರಿಗಳ ನೇಮಕ

ಉಡುಪಿ: ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಕುಂದಾಪುರ ತಾಲೂಕು ಚಿತ್ತೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷ (ಮೀಸಲಾತಿ-ಸಾಮಾನ್ಯ) ಸ್ಥಾನವನ್ನು ಆಯ್ಕೆ ಮಾಡುವ ಸಲುವಾಗಿ ಗೊತ್ತುಪಡಿಸಿದ ಅಧಿಕಾರಿಯಾಗಿ ಕುಂದಾಪುರ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ, ಮೊ.ನಂ: 9449143880 ಹಾಗೂ ಹಂಗಳೂರು ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ (ಮೀಸಲಾತಿ-ಸಾಮಾನ್ಯ) ಸ್ಥಾನವನ್ನು ಆಯ್ಕೆ ಮಾಡುವ ಸಲುವಾಗಿ ಕುಂದಾಪುರ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಕುಲಾಲ ಮೊ.ನಂ: 9113288169 ಅವರನ್ನು ಗೊತ್ತುಪಡಿಸಿದ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಸದ್ರಿರವರು ಕರ್ನಾಟಕ ಪಂಚಾಯತ್ […]
ಉಡುಪಿ:ಜಿಲ್ಲೆಯಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ಮಾಡಲು ನಿಯಮಾನುಸಾರ ಕ್ರಮವಹಿಸಿ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ: ಜಿಲ್ಲೆಯಲ್ಲಿ ದೀಪಾವಳಿ ಹಬ್ಬ ಆಚರಣೆ ಸಂದರ್ಭದಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ಮಾಡುವವರು ಸಂಬಂಧಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದು, ನಿಯಮಾನುಸಾರ ಮಾರ್ಗಸೂಚಿಗಳನ್ನು ಪಾಲಿಸುವುದರೊಂದಿಗೆ ಯಾವುದೇ ಅನಾಹುತಗಳು ಸಂಭವಿಸದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ನೋಡಿಕೊಳ್ಳಬೇಕು ಎಂದುಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ತಾತ್ಕಾಲಿಕಸುಡುಮದ್ದು ಮಾರಾಟ ಮಳಿಗೆಗಳನ್ನು ತೆರೆಯಲು ಅನುಮತಿ ನೀಡುವ ಕುರಿತು ಚರ್ಚಿಸುವ ಸಲುವಾಗಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. […]
ಮಂಗಳೂರು: ಯುವತಿ ನಾಪತ್ತೆ

ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ-ಕೆಂಜಾರು ಗ್ರಾಮದ ಕಾಪಿಕಾಡು ಗುಡ್ಡೆ ಮನೆ ನಿವಾಸಿ ಟೀನಾ (23) ಎಂಬಾಕೆ ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ. ಸುಮಾರು 5.1 ಅಡಿ ಎತ್ತರದ, ಗೋಧಿ ಮೈ ಬಣ್ಣದ ಈಕೆ ಕೊಂಕಣಿ, ಇಂಗ್ಲಿಷ್, ಹಿಂದಿ, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಕಾಣೆಯಾದ ಯುವತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ಉಡುಪಿ ಉಚ್ಚಿಲ ದಸರಾ ಮೆರುಗು ಹೆಚ್ಚಿಸಿದೆ ಮರಳು ಶಿಲ್ಪ

ಪಡುಬಿದ್ರಿ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಸನ್ನಿಧಾನದಲ್ಲಿ ಉಡುಪಿ– ಉಚ್ಚಿಲ ದಸರಾ ಮೆರುಗನ್ನು ಸಾರುವ ಬೃಹತ್ ಮರಳು ಶಿಲ್ಪ ಗಮನ ಸೆಳೆಯುತ್ತಿದೆ.6 ಅಡಿ ಎತ್ತರ 12 ಅಡಿ ಅಗಲವಿರುವ ಶಾರದಾಂಬೆ, ಉಚ್ಚಿಲ ದಸರಾ ರೂವಾರಿ ಜಿ. ಶಂಕರ್ ಅವರ ಭಾವಶಿಲ್ಪದೊಂದಿಗೆ ರಚಿಸಲಾಗಿದೆ. ಉಡುಪಿಯ ಸ್ಯಾಂಡ್ ಥೀಂ, ಕಲಾವಿದರಾದ ಹರೀಶ್ ಸಾಗಾ, ಸಂತೋಷ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ಅವರಿಂದ ರಿತೇಶ್ ಕಿದಿಯೂರು ಸಹಕಾರದೊಂದಿಗೆ ರಚಿಸಿರುವ ಆಕರ್ಷಕ ಕಲಾಕೃತಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಉಡುಪಿ ಉಚ್ಚಿಲ ದಸರಾದ 2ನೇ ದಿನವಾದ […]
ಉಡುಪಿ: ಬ್ಯೂಟಿ ಪಾರ್ಲರ್’ನಲ್ಲಿ ಉದ್ಯೋಗಾವಕಾಶ

ಉಡುಪಿ: ಉಡುಪಿಯಲ್ಲಿ ಇರುವ ಬ್ಯೂಟಿ ಪಾರ್ಲರ್’ಗೆ ಲೇಡೀಸ್ ಬ್ಯೂಟಿಷಿಯನ್, ಲೇಡೀಸ್ ರಿಸೆಪ್ಶನಿಷ್ಟ್, ಜಂಟ್ಸ್ ಬ್ಯೂಟಿಷಿಯನ್ ಹಾಗೂ ಜಂಟ್ಸ್ ಸೂಪರ್ವೈಸರ್ ಬೇಕಾಗಿದ್ದಾರೆ. ನಮ್ಮಲ್ಲಿ ಬ್ಯೂಟಿಷಿಯನ್ ಕೋರ್ಸ್ ಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಮೊ: 9900250666, 9481269415