ಕಾಪು : ತಾತ್ಕಾಲಿಕ ಸುಡುಮದ್ದು ಮಾರಾಟ ಮಳಿಗೆ ತೆರೆಯಲು ಅರ್ಜಿ ಆಹ್ವಾನ

ಉಡುಪಿ: ಕಾಪು ತಾಲೂಕಿನಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅನುಮತಿ ಪಡೆಯದೇ ಯಾವುದೇಅಂಗಡಿಗಳಲ್ಲಿ ಸುಡುಮದ್ದು ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಅನಧಿಕೃತವಾಗಿ ಅನುಮತಿ ಪಡೆಯದೇ ಸುಡುಮದ್ದು ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ತಾತ್ಕಾಲಿಕ ಪಟಾಕಿ ಮಳಿಗೆಗಳನ್ನು ತೆರೆಯಲು ಅನುಮತಿ ಕೋರಿ ಸೆಪ್ಟಂಬರ್ 26 ರ ಒಳಗಾಗಿ ಕಾಪು ತಹಶೀಲ್ದಾರರ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕಾಪು ತಹಶೀಲ್ದಾರರ ಕಚೇರಿಪ್ರಕಟಣೆ ತಿಳಿಸಿದೆ.

ಸೆ.25-ವಿಶ್ವ ಫಾರ್ಮಸಿಸ್ಟ್‌ ದಿನ; ನಂಬಿಕೆಗೆ ಪ್ರತೀಕವಾದ ಫಾರ್ಮಸಿಸ್ಟ್‌ಗಳ ಸೇವೆಗೆ ನಮ್ಮದೊಂದು ಸಲಾಂ!

ವೈದ್ಯಕೀಯ ಕ್ಷೇತ್ರದಲ್ಲಿ ಫಾರ್ಮಸಿಸ್ಟ್‌ಗಳ ಸೇವೆ ಅನನ್ಯವಾಗಿದೆ. ವಿವಿಧ ರೋಗಗಳ ವಿರುದ್ಧ ಪರಿಣಾಮಕಾರಿ ಔಷಧ ಕಂಡುಹಿಡಿದು ರೋಗಿಗಳಿಗೆ ಸೂಕ್ತ ಪ್ರಮಾಣ ನೀಡುವಲ್ಲಿ ಮಹತ್ತರ ಪಾತ್ರ ಹೊಂದಿದ್ದಾರೆ. 2009ರಲ್ಲಿ ಇಂಟರ್‌ನ್ಯಾಶನಲ್‌ ಫಾರ್ಮಸುಟಿಕಲ್‌ ಫೆಡರೇಶನ್‌ನ ಆದೇಶದಂತೆ ಪ್ರತಿ ವರ್ಷ ಸೆಪ್ಟಂಬರ್‌ 25ರಂದು ವಿಶ್ವದಾದ್ಯಂತ ಫಾರ್ಮಸಿಸ್ಟ್‌ ದಿನ ಆಚರಿಸಲಾಗುತ್ತಿದೆ. ಸೆ.25-ವಿಶ್ವ ಫಾರ್ಮಸಿಸ್ಟ್‌ ದಿನ; ನಂಬಿಕೆಗೆ ಪ್ರತೀಕವಾದ ಫಾರ್ಮಸಿಸ್ಟ್‌ಗಳ ಸೇವೆಗೆ ನಮ್ಮದೊಂದು ಸಲಾಂ! ಆರೋಗ್ಯ ಕ್ಷೇತ್ರದ ಅವಿಭಾಜ್ಯ ಅಂಗವೇ ಎನಿಸಿಕೊಂಡ ಫಾರ್ಮಸಿ ವಿಭಾಗ ಹಲವು ವರ್ಷಗಳಿಂದ ತನ್ನದೆ ಆದ ಛಾಪು ಮೂಡಿಸಿದೆ. 2009ರಲ್ಲಿ ಇಂಟರ್‌ನ್ಯಾಶನಲ್‌ […]

ಉಡುಪಿ:ವೃದ್ಧ ನಾಪತ್ತೆ

ಉಡುಪಿ: ಕಾಪು ತಾಲೂಕು ಉಚ್ಚಿಲ ಬಡಾ ಗ್ರಾಮದ ಮುಳ್ಳುಗುಡ್ಡೆ ನಿವಾಸಿ ಉಮರಬ್ಬ (69) ಎಂಬ ವೃದ್ಧವ್ಯಕ್ತಿಯು ಸೆಪ್ಟಂಬರ್ 20 ರಂದು ಮನೆಯಿಂದ ಹೊರಗೆ ಹೋದವರು ಸಂಬಂಧಿಕರ ಮನೆಗೂ ಹೋಗದೇ, ವಾಪಾಸು ಮನೆಗೂ ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ತುಳು, ಬ್ಯಾರಿ ಹಾಗೂ ಮಳೆಯಾಳಿ ಭಾಷೆಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪಡುಬಿದ್ರಿ ಪೊಲೀಸ್ ಠಾಣೆಯ ಉಪನಿರೀಕ್ಷಕರು ಮೊ.ನಂ: 9480805450, ದೂ.ಸಂಖ್ಯೆ:0820-2555452, ಕಾಪು ಪೊಲೀಸ್ ವೃತ್ತ ನಿರೀಕ್ಷಕರು ಮೊ.ನಂ: […]

ಗೆಳೆಯನಾಗಿ ಮಾರ್ಗದರ್ಶನ ಮಾಡುವುದು ಗುರುವಿನ ಕರ್ತವ್ಯ – ಪ್ರೋ ಡಾ.ರಘುನಾಥ್ ಕೆ.ಎಸ್

ಉಡುಪಿ: ಗುರು ಹಾಗು ವಿದ್ಯಾರ್ಥಿಗಳ ನಡುವೆ ವಯಸ್ಸಿನ ಅಂತರವಿದ್ದರೂ, ಗೆಳಯ, ಮಾರ್ಗದರ್ಶಕ, ನಾಯಕನಾಗಿ ವಿದ್ಯಾರ್ಥಿಗಳಿಗೆ ಬದುಕಿನ ಹೆಜ್ಜೆಯನ್ನಿಡಲು ಕಲಿಸಿ ಕೊಡುವವನೇ ಪರಿಪೂರ್ಣ ಗುರು ಎಂದು ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಪ್ರೋ.ಡಾ.ರಘುನಾಥ್ ಕೆ.ಎಸ್ ಅಭಿಪ್ರಾಯಪಟ್ಟರು. ಬುಧವಾರ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ತಾನು ಕಲಿತ ವಿದ್ಯಾಸಂಸ್ಥೆಯನ್ನು ಬೆಳೆಸುವುದರ ಜೊತೆಗೆ ಜಗ್ಗತ್ತಿನಲ್ಲೇ ತಾವೆಲ್ಲರೂ ಧ್ರುವತಾರೆಗಳಂತೆ ಮಿಂಚಬೇಕು. ಸೂರ್ಯನ ರಶ್ಮಿಯಂತೆ ಪ್ರಕಾಶಿಸುತ್ತಾ, ತಮ್ಮ ಸಾಧನೆಯ ಮೂಲಕ ಪ್ರಪಂಚ ತಮ್ಮೆಲ್ಲರನ್ನು ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಇತಿಹಾಸವನ್ನು […]

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎಂ.ಎ. ಗಫೂರ್, ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಹೆಬ್ರಿ ಮುದ್ರಾಡಿ ಮಂಜುನಾಥ್ ಪೂಜಾರಿ ನೇಮಕ!

ಉಡುಪಿ: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕೆಪಿಪಿಸಿ ಉಪಾಧ್ಯಕ್ಷ ಎಂ.ಎ. ಗಫೂರ್ ಹಾಗೂ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ನ ಮಾಜಿ‌ ಅಧ್ಯಕ್ಷ ಮಂಜುನಾಥ್ ಪೂಜಾರಿ ಮುದ್ರಾಡಿ ಅವರನ್ನು ನೇಮಕಗೊಳಿಸುವ ಪ್ರಸ್ತಾವನೆಗೆ ಎಐಸಿಸಿ ಗ್ರೀನ್ ಸಿಗ್ನಲ್ ನೀಡಿದೆ. 39 ಮಂದಿಯನ್ನು ವಿವಿಧ ನಿಗಮ ಮಂಡಳಿಗೆ ನೇಮಕ ಮಾಡುವ ಪ್ರಸ್ತಾವನೆಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ. ವಿವಿಧ ನಿಗಮ ಮಂಡಳಿಗೆ ಅಧ್ಯಕ್ಷರಾಗಿ ನೇಮಕಗೊಂಡ ಪಟ್ಟಿ ಈ ಕೆಳಕಂಡಂತಿದೆ.