ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ವಾರ್ಷಿಕ ಮಹಾಸಭೆ: ಶೇ.15 ಡಿವಿಡೆಂಡ್ ಘೋಷಣೆ

ಉಡುಪಿ: ಉಡುಪಿ ಇಂಡಸ್ಟ್ರಿಯಲ್ ಕೋ – ಆಪರೇಟಿವ್ ಸೊಸೈಟಿಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ದಿನಾಂಕ:06-09-2025 ರಂದು ಸಂಘದ ಅಧ್ಯಕ್ಷರಾದ ಅರುಣ ಕುಮಾರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ಜರಗಿತು. ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ಹೆಗ್ಡೆ ಸಂಘದ67 ನೇ ವರ್ಷದ ವಾರ್ಷಿಕ ವರದಿ, ವರದಿಗೆ ತಯಾರಿಸಿದ ಅನುಪಾಲನಾ ವರದಿ, ಆಯ-ವ್ಯಯ ಪಟ್ಟಿ ಹಾಗೂ 2025-26 ನೇ ಸಾಲಿನ ಯೋಜಿತ ಕಾರ್ಯಕ್ರಮಗಳನ್ನು ಮಂಡಿಸಿದರು. ಹಾಗೂ 2025-26 ನೇ ಸಾಲಿನ ಲೆಕ್ಕ ಪರಿಶೋಧನೆಗೆ ಲೆಕ್ಕ ಪರಿಶೋಧಕರ ನೇಮಕಾತಿ ಬಗ್ಗೆ […]
ಕಾರ್ಕಳ: ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಸಂದೇಶ; ಬಿಜೆಪಿ ಐಟಿ ಸೆಲ್’ನ ಪ್ರಖ್ಯಾತ್ ವಿರುದ್ಧ ದೂರು ದಾಖಲು.

ಕಾರ್ಕಳ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಹೇಳನಕಾರಿ ಸಂದೇಶಗಳನ್ನು ಪ್ರಸಾರ ಮಾಡುವ ಮೂಲಕ ಅವರನ್ನು ಅವಹೇಳನಕಾರಿಯಾಗಿ ಟೀಕಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಐಟಿ ಸೆಲ್‌ಗೆ ಸೇರಿದ ಯುವಕನ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಕಾರ್ಕಳದ ಈದು ನಿವಾಸಿ ಪ್ರಖ್ಯಾತ್ ಬಿಜೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಸುಳ್ಳು ಸಂದೇಶಗಳು ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ಹರಡಿದ್ದಾನೆ ಎಂದು ಆರೋಪಿಸಲಾಗಿದೆ. ರಾಜ್ಯ ಸರ್ಕಾರದ ಬೆಲೆ ಏರಿಕೆಯು […]
ಸಿಬಿಎಸ್ಇ 10 ಮತ್ತು12 ತರಗತಿಯ ಬೋರ್ಡ್ ಎಕ್ಸಾಂ ದಿನಾಂಕ ಘೋಷಣೆ.

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ)ಯ 10 ಮತ್ತು 12ನೇ ತರಗತಿಗಳಿಗೆ ಬೋರ್ಡ್ ಎಕ್ಸಾಂ ಮುಂದಿನ ವರ್ಷದ ಫೆ.17ರಂದು ಆರಂಭವಾಗಲಿವೆ ಎಂದು ಬುಧವಾರ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ. ಪ್ರಮುಖ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಸಂಭಾವ್ಯ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಹತ್ತನೇ ತರಗತಿಗೆ ಇದೇ ಮೊದಲ ಸಲ ಶೈಕ್ಷಣಿಕ ಅವಧಿಯಲ್ಲಿ ಎರಡು ಸಲ ಬೋರ್ಡ್ ಎಕ್ಸಾಂ ನಡೆಸಲಾಗುತ್ತಿದೆ. ಮೊದಲ ಆವೃತ್ತಿ 2026ರ ಫೆ.17ರಿಂದ ಮಾ.6ರ ವರೆಗೆ ಮತ್ತು ಎರಡನೇ ಆವೃತ್ತಿ ಮೇ 15ರಿಂದ ಜೂನ್ 1ರ ವರೆಗೆ ನಡೆಯಲಿದೆ ಎಂದು ಸಿಬಿಎಸ್ಇ […]
ಉಡುಪಿ:ಅತಿಥಿ ಶಿಕ್ಷಕರ ಹುದ್ದೆ: ಅರ್ಜಿ ಆಹ್ವಾನ

ಉಡುಪಿ:ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಕಾರ್ಕಳತಾಲೂಕಿನ ಅಜೆಕಾರು ವಿನಲ್ಲಿ ನೂತನವಾಗಿ ಪ್ರಾರಂಭವಾಗಿರುವ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ (ಆಂಗ್ಲಮಾಧ್ಯಮ) ಯಲ್ಲಿ ಪ್ರಸಕ್ತ ಸಾಲಿಗೆ ಅತಿಥಿ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ವಿಷಯಗಳ ಶಿಕ್ಷಕರ ನೇಮಕಾತಿಗೆ ಬಿ.ಎ, ಬಿ.ಎಡ್ ವಿದ್ಯಾರ್ಹತೆ ಹೊಂದಿರುವವರು ಹಾಗೂ ಗಣಿತ ಶಿಕ್ಷಕರ ಹುದ್ದೆಗೆ ಬಿ.ಎಸ್ಸಿ., ಬಿ.ಎಡ್ ವಿದ್ಯಾರ್ಹತೆ ಹೊಂದಿರುವವರು ಅಕ್ಟೋಬರ್ 1 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ […]
ಉಡುಪಿ:ಜಾನಪದ ಕಲಾತಂಡಗಳ ಆಯ್ಕೆಗೆ ಅರ್ಜಿ ಆಹ್ವಾನ

ಉಡುಪಿ :ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪ್ರಸಕ್ತ ಸಾಲಿನ ಐ.ಇ.ಸಿ ಹಾಗೂ ಎಸ್.ಬಿ.ಸಿ.ಸಿ ಕಾರ್ಯ ಚಟುವಟಿಕೆಯಡಿ ಜಾನಪದ ಕಲಾ ಪ್ರಕಾರಗಳ ಮೂಲಕ ಜಿಲ್ಲೆಯಾದ್ಯಂತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಜಾನಪದ ಕಲಾತಂಡಗಳ ಅಗತ್ಯವಿರುವ ಹಿನ್ನೆಲೆ, ಜಿಲ್ಲೆಯಿಂದ ಸಾಂಗ್ ಆಂಡ್ ಡ್ರಾಮಾ ಡಿವಿಜನ್, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆಯಲ್ಲಿ ನೋಂದಣಿಯಾಗಿರುವ ಹಾಗೂ ಆರೋಗ್ಯ ಇಲಾಖೆಯ ವಿಭಾಗೀಯ ಮಟ್ಟದಲ್ಲಿ ತರಬೇತಿ ಪಡೆದಿರುವ ಆಸಕ್ತ ಜಾನಪದ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟಂಬರ್ 30 ಕೊನೆಯ ದಿನ. ಅರ್ಜಿ ನಮೂನೆ ಹಾಗೂ […]