ಅ. 17ಕ್ಕೆ ‘ಟೈಮ್ ಪಾಸ್’ ಕನ್ನಡ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

ಉಡುಪಿ: ಶ್ರೀ ಚೇತನ ಸರ್ವಿಸಸ್ ಬ್ಯಾನರ್ ನಡಿ ನಿರ್ಮಾಣಗೊಂಡ ‘ಟೈಮ್ ಪಾಸ್’ ಕನ್ನಡ ಸಿನಿಮಾ ಅ.17ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಪೋಸ್ಟರ್​​ನಲ್ಲಿ ‘100 ಪರ್ಸೆಂಟ್ ಮನರಂಜನೆ’ ಎಂಬ ಲೈನ್ ಗಮನ ಸೆಳೆದಿದೆ. ಚೇತನ್ ಜೋಡಿದಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಚೊಚ್ಚಲ ಸಿನಿಮಾ ಇದಾಗಿದೆ. ಉಡುಪಿಯ ಡಯಾನ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರದ ಕುರಿತು ಮಾಹಿತಿ ನೀಡಿದ ನಿರ್ದೇಶಕ ಚೇತನ್ ಜೋಡಿದಾರ್ ಅವರು, ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಬೇಕೆಂಬುವುದು […]

ಕ್ರೈಸ್ಟ್ ಕಿಂಗ್: ರೋವರ್ಸ್ ಮತ್ತು ರೇಂಜರ್ಸ್ ಪುನಶ್ಚೇತನಾ ಕಾರ್ಯಾಗಾರ

ಕಾರ್ಕಳ: ಇಲ್ಲಿನ ಕ್ರೈಸ್ಟ್‍ಕಿಂಗ್ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಥೆಯ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಸದಸ್ಯರಿಗೆಒಂದು ದಿನದ ಪುನಶ್ಚೇತನಾ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಉಡುಪಿ ಜಿಲ್ಲಾ ಮುಖ್ಯ ಆಯುಕ್ತರಾದ ಜಯಕರ ಶೆಟ್ಟಿ ಇಂದ್ರಾಳಿ ಅವರು ದೀಪ ಬೆಳಗಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು “ಪ್ರಕೃತಿ ಹಾಗೂ ಸಮಾಜದಿಂದ ಎಲ್ಲವನ್ನೂ ಪಡೆದುಕೊಳ್ಳುವ ನಾವು ತಿರುಗಿ ಏನು ಕೊಡುತ್ತೇವೆ ಎಂದು ಯೋಚಿಸಬೇಕು. ಹಿಂತಿರುಗಿ ಏನನ್ನಾದರೂ ನೀಡುವಲ್ಲಿ ಸ್ಕೌಟ್ ಗೈಡ್ಸ್‍ನಂತಹ ಸಂಸ್ಥೆಗಳು ನಮಗೆ ಅವಕಾಶ […]

ಡ್ರಗ್ಸ್ ಜಾಲವನ್ನು ಮಟ್ಟ ಹಾಕಲು ಉಡುಪಿ ಪೊಲೀಸರಿಂದ ವಿನೂತನ ಪ್ರಯತ್ನ: ಕ್ಯೂ ಆರ್ ಕೋಡ್ ಅಭಿಯಾನ ಶುರು

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳು, ಯುವ ಸಮುದಾಯವನ್ನೇ ಗುರಿಯಾಗಿರಿಸಿಕೊಂಡು ಸಕ್ರೀಯವಾಗಿರುವ ಡ್ರಗ್ಸ್ ಜಾಲವನ್ನು ಮಟ್ಟ ಹಾಕಲು ಉಡುಪಿ ಜಿಲ್ಲಾ ಪೊಲೀಸ್ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೀಗ ಸಾರ್ವಜನಿಕರು ಈ ದಂಧೆಯ ಬಗ್ಗೆ ಅನಾಮಧೇಯವಾಗಿ ಮಾಹಿತಿ ನೀಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಕ್ಯೂಆರ್ ಕೋಡ್‌ನ್ನು ರಚಿಸಿದೆ. ಅಕ್ರಮ ಡ್ರಗ್ಸ್ ಹಾಗೂ ಸಿಗರೇಟ್ ಮಾರಾಟಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಅನಾಮಧೇಯರಾಗಿ ಕ್ಯೂಆರ್ ಕೋಡ್‌ನ್ನು ಸ್ಕ್ಯಾನ್ ಮಾಡಿ ಈ ಮೂಲಕ ಮಾಹಿತಿ ನೀಡಬಹುದಾಗಿದೆ. ಸ್ಕ್ಯಾನ್ ಮಾಡಿದಾಗ ಒಟ್ಟು 15 ಹಂತ ಗಳು ಬರಲಿದ್ದು, […]

ಮೂಡ್ಲಕಟ್ಟೆ ಎಂಐಟಿಯ ರಿಸರ್ಚ್ ಸೆಲ್ ವತಿಯಿಂದ ಎಐ, ಮೆಷಿನ್ ಲರ್ನಿಂಗ್ ಹಾಗೂ ಡೇಟಾ ಸೈನ್ಸ್ ಕುರಿತು ಅಂತರಾಷ್ಟ್ರೀಯ ಸಮ್ಮೇಳನ

ಕುಂದಾಪುರ: ಮೂಡ್ಲಕಟ್ಟೆ ಎಂಐಟಿಯ ರಿಸರ್ಚ್ ಸೆಲ್ ವತಿಯಿಂದ ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ಹಾಗೂ ಡೇಟಾ ಸೈನ್ಸ್ ಕುರಿತ ದ್ವಿತೀಯ ಅಂತಾರಾಷ್ಟ್ರೀಯ ಸಮ್ಮೇಳನ ಎರಡು ದಿನಗಳ ಕಾಲ ನಡೆಯಿತು. ಸಮ್ಮೇಳನವನ್ನು ಮಣಿಪಾಲ ಎಂಎಡಿಸಿ ಚೇಯರ್‌ಮೆನ್ ಡಾ. ಬ್ರಿಗೇಡಿಯರ್ ಸುರಜಿತ್ ಸಿಂಗ್ ಪಾಬ್ಲಾ ಉದ್ಘಾಟಿಸಿ ದರು. ದಿಕ್ಸೂಚಿ ಭಾಷಣ ಮಾಡಿದ ಅವರು, ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್(ಎಬಿಸಿ) ಮತ್ತು ಮಾನವ-ಕೇಂದ್ರಿತ ಎಐ ಕುರಿತು ಅತ್ಯುತ್ತಮ ವಿಷಯದ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ರಾಮಕೃಷ್ಣ ಹೆಗಡೆ […]

ರೈಲುಮಾರ್ಗದಲ್ಲಿ ವಿದ್ಯುತ್ ಕಾಮಗಾರಿ: ಡಿಸೆಂಬರ್ ವರೆಗೂ ಈ ದಾರಿಯಲ್ಲಿ ಹಗಲು ರೈಲು ಇಲ್ಲ!

ಮಂಗಳೂರು: ಸಕಲೇಶಪುರ-ಸುಬ್ರಹ್ಮಣ್ಯ ರೋಡ್‌ ನಡುವೆ ಘಾಟಿ ಪ್ರದೇಶದಲ್ಲಿ ವಿದ್ಯುತ್‌ ಮಾರ್ಗ ಕಾಮಗಾರಿಗಾಗಿ ಡಿ. 15ರ ವರೆಗೆ ಲೈನ್‌ ಬ್ಲಾಕ್‌ ಮಾಡುವ ನೈಋತ್ಯ ರೈಲ್ವೇ ಪ್ರಸ್ತಾವವನ್ನು ರೈಲ್ವೇ ಸಚಿವಾಲಯ ಅನುಮೋದಿಸಿದೆ. ಇದರಿಂದಾಗಿ ಬಹುತೇಕ ಹಗಲು ರೈಲುಗಳ ರದ್ಧತಿ ವಿಸ್ತರಣೆಗೊಂಡಿದೆ. ನಂ.16539 ಯಶವಂತಪುರ-ಮಂಗಳೂರು ಜಂಕ್ಷನ್‌ ಸಾಪ್ತಾಹಿಕ ರೈಲು ಡಿ.13ರ ವರೆಗೆ, ನಂ.16540 ಮಂಗಳೂರು ಜಂಕ್ಷನ್‌ ಯಶವಂತಪುರ ಸಾಪ್ತಾಹಿಕ ರೈಲು ಡಿ.14ರ ವರೆಗೆ, 16575 ಯಶವಂತಪುರ-ಮಂಗಳೂರು ಜಂಕ್ಷನ್‌ ಟ್ರೈವೀಕ್ಲಿ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ ಡಿ.14ರ ವರೆಗೆ, 16576 ಮಂಗಳೂರು ಜಂಕ್ಷನ್‌ ಯಶವಂತಪುರ ಟ್ರೈ […]