ಉಡುಪಿ: ಡಿವೈಡರ್ ಏರಿ ಬಂದು ಬೈಕ್ ಗೆ ಡಿಕ್ಕಿ ಹೊಡೆದ ಟಿಪ್ಪರ್; ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಉಡುಪಿ: ಚಾಲಕ ನಿಯಂತ್ರಣ ತಪ್ಪಿದ ಟಪ್ಪರ್ ವೊಂದು ಡಿವೈಡರ್ ಏರಿ ಬಂದು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಘಟನೆ ಉಡುಪಿ ಗುಂಡಿಬೈಲು ಸಮೀಪ ಗುರುವಾರ ಮಧ್ಯಾಹ್ನ ಸಂಭವಿಸಿದೆ. ಕಲ್ಸಂಕದಿಂದ ಗುಂಡಿಬೈಲು ಕಡೆಗೆ ತೆರಳುತ್ತಿದ್ದ ಟಿಪ್ಪರ್ ಏಕಾಏಕಿಯಾಗಿ ಡಿವೈಡರ್ ಏರಿ ಬಂದು ಕಲ್ಸಂಕ ಕಡೆಗೆ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಗಣೇಶ್ ಕರ್ಕೇರ ಅವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ […]
ಫ್ಲಿಪ್‌ಕಾರ್ಟ್‌ನಲ್ಲೂ ಎಂಟ್ರಿ ಕೊಟ್ಟ ರಾಯಲ್ ಎನ್‌ಫೀಲ್ಡ್ 350 ಸಿಸಿ ಬೈಕ್!

ಮುಂಬೈ: ಮೋಟಾರ್‌ಬೈಕ್ ಪ್ರಿಯರಿಗೆ ಒಂದು ಗುಡ್ ನ್ಯೂಸ್. ವಾಲ್‌ಮಾರ್ಟ್ ಮಾಲೀಕತ್ವದ ಇ–ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್, ಇದೀಗ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನೂ ತನ್ನ ವೇದಿಕೆಯ ಮೂಲಕ ಗ್ರಾಹಕರಿಗೆ ತಲುಪಿಸುವುದಾಗಿ ಘೋಷಿಸಿದೆ. ರಾಯಲ್ ಎನ್‌ಫೀಲ್ಡ್ ತನ್ನ 350 ಸಿಸಿ ಶ್ರೇಣಿಯ ಬೈಕ್‌ಗಳು– ಬುಲೆಟ್ 350, ಕ್ಲಾಸಿಕ್ 350, ಹಂಟರ್ 350, ಗೋವಾನ್ ಕ್ಲಾಸಿಕ್ 350 ಮತ್ತು ಮೀಟಿಯರ್ 350–ಗಳನ್ನು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗುವಂತೆ ಮಾಡಲು ಒಪ್ಪಂದ ಮಾಡಿಕೊಂಡಿದೆ. ಕಂಪನಿ ಪ್ರಕಟಣೆಯ ಪ್ರಕಾರ, ಸೆಪ್ಟೆಂಬರ್ 22ರಿಂದ ಬೆಂಗಳೂರು, ಗುರುಗ್ರಾಮ್, ಕೋಲ್ಕತ್ತಾ, ಲಖನೌ ಮತ್ತು […]
ಉಡುಪಿ:ಸೆ.28ರಂದು ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮ

ಉಡುಪಿ:ಶ್ರೀ ಗಣೇಶೋತ್ಸವ ಸಮಿತಿ, ಕೊಡವೂರು ಯುವಕ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘ (ರಿ.) ಕೊಡವೂರು ಲಯನ್ಸ್ ಕ್ಲಬ್ ಪರ್ಕಳ ಇವರ ಆಶ್ರಯದಲ್ಲಿ ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆ, ಉಡುಪಿ ಪಶು ಚಿಕಿತ್ಸಾಲಯ, ಮಲ್ಪೆ ಇವರ ಜಂಟಿ ಆಶ್ರಯದಲ್ಲಿ 7ನೇ ಬಾರಿಗೆ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಬೀದಿನಾಯಿ, ಸಾಕುನಾಯಿ ಮತ್ತು ಬೆಕ್ಕುಗಳಿಗೆ ಹುಚ್ಚುರೋಗ ಬಾರದಂತೆ ತಡೆಗಟ್ಟಲು ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮವನ್ನುದಿನಾಂಕ 28-05-2025ನೇ ಭಾನುವಾರ ಬೆಳಿಗ್ಗೆ 9 ರಿಂದ 11 ಗಂಟೆಯ ತನಕ ಕೊಡವೂರು […]
ಬ್ರಹ್ಮಾವರ ಮೂರ್ತೆದಾರರ ಸೇವಾ ಸಹಕಾರಿ ಸಂಘ: ವಾರ್ಷಿಕ ಸಭೆ : ಶೇ.13% ಡಿವಿಡೆಂಡ್ ಹಾಗೂ ವಿದ್ಯಾರ್ಥಿವೇತನ ವಿತರಣೆ

ಬ್ರಹ್ಮಾವರ : ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ, ಬ್ರಹ್ಮಾವರ,ವಾರ್ಷಿಕ ಮಹಾಸಭೆಯು ರವಿವಾರ ಕೇಂದ್ರದ ಕಛೇರಿಯ ಹತ್ತಿರದ ನಾರಾಯಣಗುರು ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರು ಶ್ರೀ ಶಂಕರ ಪೂಜಾರಿ ಕುಕ್ಕುಡೆ ಅಧ್ಯಕ್ಷತೆವಹಿಸಿದ ಮಾತನಾಡಿ, ವರ್ಷಗಳ ಹಿಂದೆ ಆರಂಭವಾದ ಸಂಸ್ಥೆ ಗ್ರಾಹಕರಿಗೆ ಹಾಗೂ ಸದಸ್ಯರಿಗೆ ಕ್ಷಿಪ್ರಗತಿಯಲ್ಲಿ ಸೇವೆ ಒದಗಿಸುತ್ತಾ ಪ್ರಗತಿಯ ಹಾದಿಯಲ್ಲಿ ಸಾಗಿ ಯಶಸ್ವಿಯಾಗಿ ಪೂರೈಸಿ ಸಂಘವು ಈಗಾಗಲೇ ಪ್ರಧಾನಕಛೇರಿ ಸ್ವಂತ ಕಟ್ಟಡ ಹೊಂದಿ, ಸಂಪೂರ್ಣ ಹವಾನಿಯಂತ್ರಿತ ಅಳವಡಿಸಿಕೊಳ್ಳಲಾಗಿದೆ. 2024-25ನೇ ಸಾಲಿನಲ್ಲಿ ಸಂಘವು 174 ಕೋಟಿ ರೂ. ವಾರ್ಷಿಕ […]
ಉಡುಪಿ:ದೊಡ್ಡಣಗುಡ್ಡೆೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ವೈದ್ಯೆೆ ನಿಧಿಶ್ರೀ ಪ್ರಸಾದ್ ಹೆಗ್ಡೆೆ ಅವರಿಗೆ ಸಮ್ಮಾನ

ಉಡುಪಿ: ದೊಡ್ಡಣಗುಡ್ಡೆೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ನವಶಕ್ತಿ ವೇದಿಕೆಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ವೈಭವಕ್ಕೆೆ ಚಾಲನೆ ಕಾರ್ಯಕ್ರಮದಲ್ಲಿ ಕ್ಷೇತ್ರದ ವತಿಯಿಂದ ಕ್ಷೇತ್ರದ ಆವರಣದಲ್ಲಿ ನಡೆಯುತ್ತಿರುವ ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಪ್ರಾಾಥಮಿಕ ಪಡೆದ ವಿದ್ಯಾರ್ಥಿನಿ, ಪ್ರಸ್ತುತ ಎಂಬಿಬಿಎಸ್ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಡೆದ ನಿಧಿಶ್ರೀ ಪ್ರಸಾದ್ ಹೆಗ್ಡೆೆ ಅವರನ್ನು ಸಮ್ಮಾನಿಸಲಾಯಿತು. ಸಮ್ಮಾನಿಸಿದ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾತನಾಡಿ, ಕ್ಷೇತ್ರ ನಿರ್ಮಾಣಕ್ಕೆೆ ಕಾರಣೀಭೂತವಾದ ಶಿಕ್ಷಣ ಸಂಸ್ಥೆೆ […]