ಉಡುಪಿ: ರಾಷ್ಟ್ರೀಯ ಲಾಂಛನ ಸ್ತಂಭ ನಿರ್ಮಿಸಲು ಆಗ್ರಹ

ಉಡುಪಿ: ರಾಷ್ಟ್ರೀಯ ಹೆದ್ದಾರಿ 169ಎ, ಇಂದ್ರಾಳಿಯ ಹಳೆ ಮೇಲ್ಸೇತುವೆಯ ಅಶೋಕ ಸ್ತಂಭಗಳು ಧರೆಗುರುಳಿ ಹಲವು ವರ್ಷಗಳು ಕಳೆದಿವೆ. ಹಳೆ ಸೇತುವೆ ನಿರ್ಮಾಣದ‌ ಸಮಯದಲ್ಲಿಯೇ ನಿರ್ಮಿಸಲ್ಪಟ್ಟ ಸ್ತಂಭಗಳು ಇವಾಗಿವೆ. ಶಿಥಿಲಗೊಂಡ ರಾಷ್ಟ್ರಲಾಂಛನದ ಅವಶೇಷಗಳು ಹೆದ್ದಾರಿಯ ಸನಿಹದ ಪೊದೆಗಳಲ್ಲಿ ಎಸೆದಿರುವುದು ಕಂಡುಬಂದಿದೆ. ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಕ್ಷಣವಾಗಿ ಸೇತುವೆಗೆ ಅಶೋಕ ಸ್ತಂಭಗಳನ್ನು ಹೊಸದಾಗಿ ನಿರ್ಮಿಸಬೇಕೆಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ‌ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.ಭಾರತ ಸರಕಾರವು 1950 ರಲ್ಲಿ ಅಧಿಕೃತವಾಗಿ ಸಾರಾನಾಥದ ಅಶೋಕ […]

ಉಡುಪಿ: ಬಡಕುಟುಂಬಕ್ಕೆ ಆಸರೆಯಾದ ಸುಷ್ಮಾ ಬಂಟ್ವಾಳ; ವೇಷಧರಿಸಿ ಸಂಗ್ರಹಿಸಿದ 2,50,764 ಮೊತ್ತ ಹಸ್ತಾಂತರ..!!

ಉಡುಪಿ: ಕಿನ್ನಿಮುಲ್ಕಿಯ ಅಶಕ್ತ ಕುಟುಂಬದ ವೈದ್ಯಕೀಯ ನೆರವಿಗಾಗಿ ಶ್ರೀ ಕೃಷ್ಣಾಷ್ಟಮಿಯ ಸಂದರ್ಭದಲ್ಲಿ ಸುಷ್ಮಾ ಬಂಟ್ವಾಳ ಅವರು ವಿಭಿನ್ನವೇಶವನ್ನು ಧರಿಸಿ ಸಂಗ್ರಹವಾದ 2,50,764 ಮೊತ್ತದ ಚೆಕ್ ಅನ್ನು ಕಿನ್ನಿಮುಲ್ಕಿಯ ನಿವಾಸದಲ್ಲಿ ವಿಜಯಲಕ್ಷ್ಮಿ ಸಿ ಬಂಗೇರ ಅವರ ಕುಟುಂಬಕ್ಕೆ ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಶಾಂತರಾಮ್ ಶೆಟ್ಟಿ, ಉಡುಪಿ ಟೌನ್ ಸ್ಟೇಷನ್ ನ ಪಿಎಸ್ಐ ಭರಥೇಶ್, ಸಮಾಜ ಸೇವಕ ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದರು.

ಉಡುಪಿ: ಅಪರಿಚಿತ ವಾಹನ ಡಿಕ್ಕಿ; ಯುವಕ ಮೃತ್ಯು

ಉಡುಪಿ: ಸ್ಕೂಟರ್ ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಸವಾರನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ. ಸ್ಕೂಟರ್ ಗೆ ಡಿಕ್ಕಿ ಹೊಡೆದ ಚಾಲಕ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾಗಿದ್ದಾನೆ.ಮೃತ ಯುವಕನನ್ನು ಸಂತೆಕಟ್ಟೆಯ ನಿವಾಸಿ ಅನೂಶ್ ಭಂಡಾರಿ (21) ಎಂದು ಗುರುತಿಸಲಾಗಿದೆ. ಮಂಗಳೂರಿನಲ್ಲಿ ಉದ್ಯೋಗಿಯಾಗಿರುವ ಅನೂಶ್ ಭಂಡಾರಿ ಸೋಮವಾರ ರಾತ್ರಿ ಸ್ಕೂಟಿಯಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದ ನಂತರ ಬೇರೆ ವಾಹನಗಳು ದೇಹದ ಮೇಲೆ ಹರಿದಿರುವ […]

ಹಿರಿಯಡ್ಕ: ಅನಾರೋಗ್ಯದಿಂದ ಯುವಕ ನಿಧನ

ಉಡುಪಿ: ಹಿರಿಯಡ್ಕ ನಿವಾಸಿ ನಿಖಿಲ್ ದೇವಾಡಿಗ( 26) ಇವರು ಅನಾರೋಗ್ಯದಿಂದ ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಇವರು ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.

ಬೆಂಗಳೂರು: 11 ಬಾರಿ ಪತ್ನಿಯನ್ನು ಇರಿದು ಕೊಂದ ಪತಿರಾಯ!

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಯಲ್ಲಿ ನಡು ರಸ್ತೆಯಲ್ಲಿ ಪುತ್ರಿಯ ಎದುರೇ 2ನೇ ಪತ್ನಿಗೆ ಚಾಕುವಿನಿಂದ ಹಿರಿದು ಪತಿಯೇ ಬರ್ಬರವಾಗಿ ಹತ್ಯೆಗೈದಿದ್ದಾನೆ. ಕೆಬ್ಬೆಹಳ್ಳ ನಿವಾಸಿ ರೇಖಾ(32) ಹತ್ಯೆಯಾದ ಮಹಿಳೆ. ಕೃತ್ಯ ಎಸಗಿದ ಆಕೆಯ ಪತಿ ಲೋಹಿತಾಶ್ವ(35) ಎಂಬಾತನ ಪತ್ತೆ ಕಾರ್ಯ ನಡೆಯುತ್ತಿದ್ದು, ಆರೋಪಿ ಸೋಮವಾರ ಬೆಳಗ್ಗೆ 9 ಗಂಟೆಗೆ ಸುಂಕದಕಟ್ಟೆಯ ಬಸ್ ನಿಲ್ದಾಣದಲ್ಲಿ ಹತ್ಯೆಗೈದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ಮೂಲದ ರೇಖಾಗೆ ಈಗಾಗಲೇ ಮದುವೆಯಾಗಿದ್ದು, ಕೌಟುಂಬಿಕ ಕಾರಣಕ್ಕೆ ಪತಿಯಿಂದ ವಿಚ್ಛೇಧನ ಪಡೆದುಕೊಂಡಿದ್ದರು. ಇಬ್ಬರು ಹೆಣ್ಣು […]