ಬಾಲ್ಯದಲ್ಲೇ ಮಕ್ಕಳಿಗೆ ಸಂಸ್ಕಾರ ಕಲಿಸಿದರೆ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯ: ಅದಮಾರುಶ್ರೀ

ಉಡುಪಿ: ನೀರು ವಿದ್ಯುತ್ ಗೆ ಸರಕಾರಕ್ಕೆ ತೆರಿಗೆ ನೀಡುವ ನಾವು ಜಗತ್ತಿಗೆ ವಾಯು ಬೆಳಕು ನೀರು ನೀಡುವ ದೇವರಿಗೆ ಕೃತಜ್ಞರಾಗಿರಬೇಕು. ಅಗತ್ಯವಿದ್ದವರಿಗೆ ಅಗತ್ಯವಿರುವುದನ್ನು ಅಗತ್ಯವಿದ್ದ ಸಮಯದಲ್ಲಿ ನೀಡುವುದೇ ನಾವು ದೇವರಿಗೆ ನೀಡುವ ತೆರಿಗೆ. ಈ ಸಂಸ್ಕಾರವನ್ನು‌ ಮಕ್ಕಳಿಗೆ ಬಾಲ್ಯದಲ್ಲೇ ಕಲಿಸಿದರೆ ಬಲಿಷ್ಠ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು. ಪಾಜಕ ಆನಂದತೀರ್ಥ ವಿದ್ಯಾಲಯದಲ್ಲಿ ಸೆ.20ರಿಂದ ನಾಲ್ಕು ದಿನಗಳ ಕಾಲ‌ ನಡೆಯಲಿರುವ ರಾಜ್ಯಮಟ್ಟದ ಕಬ್ ಬುಲ್ ಬುಲ್ ಉತ್ಸವ ಉದ್ಘಾಟಿಸಿ […]

ಶಿಕ್ಷಣ ಕ್ಷೇತ್ರದಂತೆ ಉದ್ಯೋಗ ಮತ್ತು ಉದ್ಯಮಶೀಲತೆಯಲ್ಲೂ ಉಡುಪಿ ರಾಜ್ಯಕ್ಕೆ ಮಾದರಿಯಾಗಲಿ: ಕಾಂತಾ ನಾಯಕ

ಉಡುಪಿ: ಶೈಕ್ಷಣಿಕವಾಗಿ ರಾಜ್ಯದಲ್ಲೇ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಕೌಶಲ್ಯಾಧಾರಿತ ಉದ್ಯೋಗ ಪ್ರಾಪ್ತಿ ಮತ್ತು ಉದ್ಯಮಶೀಲತೆಯಲ್ಲೂ ಗಮನಾರ್ಹ ಸಾಧನೆ ಮಾಡಿ ರಾಜ್ಯಕ್ಕೇ ಮಾದರಿಯಾಗಬೇಕು. ಜಿಲ್ಲೆಯಿಂದ ಹೆಚ್ಚಿನ ವಿದ್ಯಾರ್ಥಿಗಳು ದೇಶ ಹಾಗೂ ವಿದೇಶಗಳ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಹೇಳಿದರು. ಅವರು ಮಣಿಪಾಲದ ರಜತಾದ್ರಿಯ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ಕೌಶಲ್ಯಾಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. […]

ಉಡುಪಿ:ಸಹಾಯಧನ: ಅರ್ಜಿ ಆಹ್ವಾನ

ಉಡುಪಿ: ಉಡುಪಿ ನಗರ ಸಭೆಯ 2022-23 ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿಯ ಶೇ. 7.25 ರ ಇತರೆ ಹಿಂದುಳಿದವರ್ಗಗಳ ಕಲ್ಯಾಣ ಕಾರ್ಯಕ್ರಮದಡಿ ಶೌಚಾಲಯ ನಿರ್ಮಿಸಲು ಸಹಾಯಧನ ನೀಡುವ ಸಲುವಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಆಹ್ವಾನಿಸಲಾಗಿದ್ದು ಆಸಕ್ತರು ಪೂರಕ ದಾಖಲೆಗಳೊಂದಿಗೆ ಸೆ.25 ರ ಒಳಗಾಗಿ ಅರ್ಜಿ ಸಲ್ಲಿಸುವಂತೆ ಉಡುಪಿ ನಗರಸಭೆ ಪೌರಾಯುಕ್ತರ ಕಚೇರಿಪ್ರಕಟಣೆ ತಿಳಿಸಿದೆ.

ಉಡುಪಿ:ನೂತನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ).:13% ಡಿವಿಡೆಂಡ್ ಘೋಷಣೆ.

ಉಡುಪಿ:2015ರಲ್ಲಿ ಪ್ರಾರಂಭವಾದ ಸಂಸ್ಥೆ ಪ್ರಗತಿಯ ಹಾದಿಯಲ್ಲಿ ಸಾಗಿ 10 ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದು, 2024-25ನೇ ವಾರ್ಷಿಕ ವರದಿಯು ದಿನಾಂಕ 13-09-2025ರಂದು ಶ್ರೀಮತಿ. ಸುಮಿತ್ರ ಆರ್ ಇವರ ಸಭಾಧ್ಯಕ್ಷತೆಯಲ್ಲಿ ಪುರಭವನದ ಮಿನಿ ಹಾಲ್ ನಲ್ಲಿ ಜರಗಿತು. 2024-25ನೇ ಸಾಲಿನಲ್ಲಿ ಸಂಘವು 107 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ವರದಿ ವರ್ಷಾಂತ್ಯಕ್ಕೆ 53 ಲಕ್ಷ ಪಾಲು ಬಂಡವಾಳ, 29 ಕೋಟಿ 84 ಲಕ್ಷ ಠೇವಣಿಯೊಂದಿಗೆ 24 ಕೋಟಿ 44 ಲಕ್ಷ ಹೊರಬಾಕಿ ಸಾಲ ಇರುತ್ತದೆ. ವರ್ಷಾಂತ್ಯಕ್ಕೆ 46,30,377.62 ಲಾಭಹೊಂದಿದ್ದು, ಸದಸ್ಯರಿಗೆ […]

ಮಣಿಪಾಲದ ಪ್ರಸಿದ್ಧ ಗ್ರೂಪ್ ಆಫ್ ಕಂಪೆನಿಯಲ್ಲಿ ಉದ್ಯೋಗವಕಾಶ!

ಉಡುಪಿ:ಮಣಿಪಾಲದ ಸುಪ್ರಸಿದ್ಧ ಅಲ್ಯೂಮಿನಿಯಂ, ಸ್ಟೀಲ್ ಪ್ರಾಡಕ್ಟ್ ನ ಗ್ರೂಪ್ ಆಫ್ ಕಂಪೆನಿಯಲ್ಲಿ ಬೇಕಾಗಿದ್ದಾರೆ. ಖಾಲಿ ಇರುವ ಹುದ್ದೆಗಳು: ಐಟಿಐ, ಡಿಗ್ರಿ, ಡಿಪ್ಲೊಮಾ ಆಗಿರುವ ಅಭ್ಯರ್ಥಿಗಳು ತಕ್ಷಣ ಸಂಪರ್ಕಿಸಿ:📞9606968198,📞 7019891796