ಉಡುಪಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಖಾಲಿ ಇರುವ ಹುದ್ದೆಗಳು: 🔸ಗ್ರಾಫಿಕ್ ಡಿಸೈನರ್🔸ಕ್ಯಾಮೆರಾಮೆನ್/ವಿಡಿಯೋ ಎಡಿಟರ್🔸ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಸಾಮಾನ್ಯ ಅವಶ್ಯಕತೆಗಳು: 🔸ಸಕಾರಾತ್ಮಕ ಮನೋಭಾವ ಮತ್ತು ತಂಡದ ಮನೋಭಾವ ಹೊಂದಿರಬೇಕು.🔸ಬಲವಾದ ಸಂವಹನ ಕೌಶಲ್ಯಗಳು🔸ಬೆಳವಣಿಗೆ ಮತ್ತು ನಾವೀನ್ಯತೆಗಾಗಿ ಉತ್ಸಾಹ.🔸ಆನ್-ಸೈಟ್/ಹೈಬ್ರಿಡ್‌ನಲ್ಲಿ ಕೆಲಸ ಮಾಡಲು ಸಿದ್ಧರಿರುವುದು. ನಿಮ್ಮ ಸಿವಿ ಮತ್ತು ಪೋರ್ಟೊಫೋಲಿಯೊವನ್ನು ಕಳುಹಿಸಿ:[email protected] ಇನ್ನಷ್ಟು ಮಾಹಿತಿಗಾಗಿ:+91 7483649426

ಉಡುಪಿ: ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ತೊಂದರೆ ನೀಡುವವರ ವಿರುದ್ದ ಕ್ರಮಕ್ಕೆ ಆಗ್ರಹ; ಸಾರ್ವಜನಿಕ ಹಿತರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿಗೆ ಮನವಿ.

ಉಡುಪಿ: ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎಚ್ ಅಶೋಕ್ ಅವರಿಗೆ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಅನಗತ್ಯ ತೊಂದರೆ ನೀಡುತ್ತಿರುವ ಕುರಿತು ಸಾರ್ವಜನಿಕ ಹಿತರಕ್ಷಣಾ ವೇದಿಕೆ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಡಾಕ್ಟರ್ ಎಚ್. ಅಶೋಕ್ ಕಳೆದ ಒಂದು ವರ್ಷ ಐದು ತಿಂಗಳಿನಿಂದ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಜನಾನುರಾಗಿಯಾಗಿ ದಕ್ಷ ಹಾಗೂ ಪ್ರಾಮಾಣಿಕವಾಗಿ ಜನ ಸೇವೆಯನ್ನು ನೀಡುತ್ತಾ ಬಂದಿದ್ದು ಆಸ್ಪತ್ರೆಯಲ್ಲಿ ಹಲವಾರು ವರ್ಷಗಳಿಂದ ಕೆಲವೊಂದು ವೈದ್ಯರು ಇಲ್ಲೇ ಸೇವೆ ಸಲ್ಲಿಸುತ್ತಿದ್ದು ಬಡ ರೋಗಿಗಳಿಗೆ ಸ್ಪಂದಿಸುತ್ತಿಲ್ಲ […]

ಮತ್ತೆ ಶುರುವಾಯ್ತು ಕಾಂತಾರ ಫೀವರ್ : ಕಾಂತಾರ ಚಾಪ್ಟರ್ 1 ಟ್ರೈಲರ್ ಅಬ್ಬರಕ್ಕೆ ಪ್ರೇಕ್ಷಕರು ಫುಲ್ ಖುಷ್

ಕೊನೆಗೂ ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ನ ಅದ್ದೂರಿತನಕ್ಕೆ ಪ್ರೇಕ್ಷಕರು ಖುಷ್ ಆಗಿದ್ದಾರೆ. ಚಿತ್ರದ ಟ್ರೈಲರ್  ಹೊಸ ಲೋಕವೊಂದಕ್ಕೆ ಕರೆದೊಯ್ಯುವಂತಿದ್ದು ಕಾಡಿನ ರೋಮಾಂಚಕ ಸನ್ನಿವೇಶ, ನಾಯಕನ ಪರಾಕ್ರಮ, ಜನರ ವ್ಯಾಪಾರ, ಜೀವನ, ರಾಜನ ಆಳ್ವಿಕೆ, ದಬ್ಬಾಳಿಕೆ ಎಲ್ಲವೂ ಟ್ರೈಲರ್ ನಲ್ಲಿ ಸೊಗಸಾಗಿ ಮೂಡಿಬಂದಿದೆ. ಹೊಂಬಾಳೆ ಫಿಲ್ಮ್​ ನಿರ್ಮಿಸಿದ ರಿಷಬ್ ಶೆಟ್ಟಿ  ನಿರ್ದೇಶಿಸಿ ನಟಿಸಿದ ಕಾಂತಾರ ಸಿನಿಮಾದ ಪ್ರೀಕ್ವೆಲ್ ಇದಾಗಿದೆ. ಕಳೆದ ಕೆಲವು ಸಮಯಗಳಿಂದ ಈ ಚಿತ್ರದ ಕುರಿತು ಭಾರೀ ನಿರೀಕ್ಷೆ, ಹೈಪ್ ನೀಡುವ ಮಾತುಗಳು […]

ಅಕ್ಷಯಾಮೃತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 4ನೇ ವಾರ್ಷಿಕ ಮಹಾಸಭೆ: ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ

ಹಿರಿಯಡಕ: ಅಕ್ಷಯಾಮೃತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 4ನೇ ವಾರ್ಷಿಕ ಮಹಾಸಭೆಯು ಸೆ.20 ರಂದು ಸುರಭಿ ಸಭಾಭವನ ಹಿರಿಯಡಕದಲ್ಲಿ ಅಪರಾಹ್ನ 3 ಗಂಟೆಗೆ ಸಂಘದ ಅಧ್ಯಕ್ಷರಾದ ಜನಾರ್ಧನ್ ಆರ್. ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಗತಿ ಪರ ಕೃಷಿಕ ಸುರೇಶ್ ನಾಯಕ್ ಮುಂಡುಜೆ ಯವರನ್ನು ಮತ್ತು ಜಾನಪದ ಕ್ಷೇತ್ರವನ್ನು ಗುರುತಿಸಿ ನೀರೆ ಬೈಲೂರಿನ ಶೇಷಿಯವರನ್ನು ಹಾಗೂ ಮಾಜಿ ಸೈನಿಕರಾದ ರಾಮ್‍ದಾಸ್ ದಾಮೋದರ ಸಾಲ್ವಂಕಾರ್, ಹರಿಕೃಷ್ಣ ಪೂಜಾರಿ, ಮನೋಹರ ನಾಯಕ್ ಸನ್ಮಾನಿಸಲಾಯಿತು ಮತ್ತು ಎಸ್ ಎಸ್ ಎಲ್‌ಸಿ’ಯಲ್ಲಿ ಅತೀ ಹೆಚ್ಚು […]

ಹಮಾಸ್‌ ಉಗ್ರರನ್ನು ಗುರಿಯಾಗಿಸಿ ಗಾಜಾ‌ ಮೇಲೆ ಇಸ್ರೇಲ್‌ ದಾಳಿ; ಮಕ್ಕಳು, ಮಹಿಳೆಯರು ಸೇರಿ 34 ಮಂದಿ ಮೃತ್ಯು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ಯಾಲೆಸ್ತೀನ್‌ ಅನ್ನು ಸ್ವತಂತ್ರ ರಾಷ್ಟ್ರವೆಂದು ಗುರುತಿಸಲು ಹಲವು ದೇಶಗಳು ಸಿದ್ಧತೆ ನಡೆಸಿರುವ ಮಧ್ಯೆಯೇ ಇಸ್ರೇಲ್‌ ನಡೆಸಿದ ದಾಳಿಗೆ ಗಾಜಾದಲ್ಲಿ ಮಕ್ಕಳು, ಮಹಿಳೆಯರು ಸೇರಿ 34 ಜನರು ಮೃತ­ಪಟ್ಟಿ­ದ್ದಾರೆ. ಇಸ್ರೇಲ್‌ ಹಮಾಸ್‌ ಉಗ್ರರನ್ನು ಗುರಿಯಾಗಿಸಿದೆ ಎಂದು ಸಮರ್ಥಿಸುತ್ತಿದ್ದು, ಇತ್ತ ನಾಗರಿಕ ಪ್ರದೇಶಗಳ ಮೇಲೂ ದಾಳಿಯಾಗುತ್ತಿದೆ. ಹಮಾಸ್‌ನ ಸ್ನೈಪರ್‌ ಆಗಿದ್ದ ಮಾಜೆದ್‌ ಅಬು ಸೆಲ್ಮಿಯಾರನ್ನು ಹತ್ಯೆಗೈಯಲಾಗಿದೆ ಎಂದು ಇಸ್ರೇಲ್‌ ಹೇಳಿಕೊಂಡಿದೆ. ಆದರೆ ಇದನ್ನು ಶೀಫಾ ಆಸ್ಪತ್ರೆಯ ನಿರ್ದೇಶಕ ಡಾ.ಮೊಹಮ್ಮದ್‌ ಸೆಲ್ಮಿಯಾ ನಿರಾಕರಿಸಿದ್ದಾರೆ.