ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರಿಗೆ ಕೇಂದ್ರ ಸರ್ಕಾರದಿಂದ ‘ದಸರಾ ಗಿಫ್ಟ್’: ದಿನನಿತ್ಯ ಬಳಸುವ ಯಾವ ವಸ್ತುಗಳ ಬೆಲೆ ಎಷ್ಟು ಇಳಿಕೆ? ಹಳೆಯ ದರ ಎಷ್ಟಿತ್ತು? ಇಲ್ಲಿದೆ ಮಾಹಿತಿ.!

ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರಿಗೆ ಕೇಂದ್ರ ಸರ್ಕಾರ ‘ದಸರಾ ಗಿಫ್ಟ್‌’ ಕೊಟ್ಟಿದೆ. ಇಂದಿನಿಂದಲೇ ಹೊಸ ಜಿಎಸ್‌ಟಿ ದರ ಜಾರಿಗೆ ಬರಲಿದೆ. ಇದರಿಂದ ಅದೆಷ್ಟೋ ದಿನಬಳಕೆ ವಸ್ತುಗಳ ಬೆಲೆ ಕೈಗೆಟುಕುವ ದರದಲ್ಲಿ ಸಿಗಲಿದೆ. ನಾವು ದಿನನಿತ್ಯ ಬಳಸುವ ಬಹುತೇಕ ವಸ್ತುಗಳ ಬೆಲೆ ಕಡಿಮೆಯಾಗಿದೆ. ಯಾವ ವಸ್ತುಗಳ ಬೆಲೆ ಎಷ್ಟು ಇಳಿಕೆಯಾಗಿದೆ? ಹಳೆಯ ದರ ಎಷ್ಟಿತ್ತು? ಇಲ್ಲಿದೆ ವಿವರ. ಯಾವ ಉತ್ಪನ್ನಗಳ ಬೆಲೆ ಎಷ್ಟು? * ವಿಕ್ಸ್ ಆಕ್ಷನ್ 500 ಅಡ್ವಾನ್ಸ್‌ & ವಿಕ್ಸ್‌ ಇನ್ಹೆಲರ್‌ ಹೊಸ ದರ […]

ನಿಟ್ಟೆಯಲ್ಲಿ ಸೆ.23 ಮತ್ತು ಸೆ.24 ರಂದು ‘ಎಐಇನ್ನೋವೇಶನ್ 2025 – ಕೋಡ್4ಭಾರತ್’ ಫೈನಲ್ಸ್

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಲುಂಕರ್ ಅವರ ನೇತೃತ್ವದಲ್ಲಿ ಕಿಂಡ್ರೆಲ್ ಹಾಗೂ ಮೈಕ್ರೋಸಾಫ್ಟ್ ಸಂಸ್ಥೆಗಳ ಸಹಯೋಗದೊಂದಿಗೆ 24 ಗಂಟೆಗಳ ಗ್ರ್ಯಾಂಡ್ ಫಿನಾಲೆ – ಕೋಡ್4ಭಾರತ್ ಹ್ಯಾಕಥಾನ್ ನ್ನು ಸೆ.23 ಮತ್ತು ಸೆ.24 ರಂದು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಕಿಂಡ್ರೆಲ್ ಸಂಸ್ಥೆಯ ಇಂಡಿಯಾ ಡೆಲಿವರಿ ಲೀಡರ್ಶಿಪ್ ಉಪಾಧ್ಯಕ್ಷ ಶಂಕರ ಶ್ರೀನಿವಾಸನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.  ಕಿಂಡ್ರೆಲ್  ಸಂಸ್ಥೆಯ ನಿರ್ದೇಶಕ ಡಾ. ರಾಜ್ ಮೋಹನ್ ಸಿ ಮತ್ತು ಮೈಕ್ರೋಸಾಫ್ಟ್ ನ […]

ಕೊಡವೂರು ಶಂಕರನಾರಾಯಣ ದೇವಸ್ಥಾನ: ನೂತನ ಸಮುದಾಯ ಭವನದ ಶಿಲಾನ್ಯಾಸ.

​ಮಲ್ಪೆ, ಸೆ.22: ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವತಿಯಿಂದ ನಿರ್ಮಾಣಗೊಳ್ಳಲಿರುವ ಸಮುದಾಯ ಭವನದಲ್ಲಿ ಸತ್ಕಾರ್ಯಗಳು ನಿರಂತರ ನಡೆಯುತ್ತಿರಲಿ, ಇಲ್ಲಿ ನಡೆಯುವ ಎಲ್ಲ ಕಾರ್ಯಗಳಿಗೂ, ಸೇವೆ ನೀಡುವವರಿಗೂ ಶ್ರೀ ದೇವರ ಅನುಗ್ರಹ ಪ್ರಾಪ್ತಿಯಾಗಲಿ ಎಂದು ಭಾವೀ ​​ಪರ್ಯಾಯ ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ನುಡಿದರು.​ ಅವರು ಸೋಮವಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವತಿಯಿಂದ ನಿರ್ಮಾಣಗೊಳ್ಳಲಿರುವ ನೂತನ ಸಮುದಾಯ ಭವನದ ಶಿಲಾನ್ಯಾಸವನ್ನು ನೆರವೇರಿಸಿ ಆಶೀರ್ವಚನ ನೀಡಿದರು.​ ಉದ್ಯಮಿ ಶ್ರೀಧರ್ ​ರಾವ್ ಕಲ್ಮಾಡಿ ಪುಣೆ ಅವರು ನೂತನ ಸಮುದಾಯ […]

ಸೆಲ್ಫಿ ತೆಗೆಯುತ್ತಿರುವಾಗ ಪತ್ನಿಯ ಕಣ್ಣೇದುರೆ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಪತಿ ಮೃತ್ಯು!

ಚಿಕ್ಕಮಗಳೂರು: ಜಿಲ್ಲೆಯ ಕೆಮ್ಮಣ್ಣು ಗುಂಡಿಯಲ್ಲಿ ಪತ್ನಿ ಜೊತೆ ಸೆಲ್ಫಿ ತೆಗೆಯುತ್ತಿರುವಾಗ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಪತಿ ಮೃತಪಟ್ಟಿರುವ ಘಟನೆ ನಡೆದಿದೆ. ಪ್ರಸಿದ್ಧ ಪ್ರವಾಸಿ ತಾಣವಾದ ವ್ಯೂವ್ ಪಾಯಿಂಟ್​​ನಲ್ಲಿ ಈ ದುರ್ಘಟನೆ ನಡೆದಿದ್ದು, ಮೃತನನ್ನು 40 ವರ್ಷದ ಸಂತೋಷ್ ಎಂದು ಗುರುತಿಸಲಾಗಿದೆ. ಲಿಂಗದಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ. ಶಿಕ್ಷಕರಾಗಿದ್ದ ಸಂತೋಷ್ ದಸರಾ ರಜೆ ಹಿನ್ನೆಲೆಯಲ್ಲಿ ಪತ್ನಿ ಶ್ವೇತ ಜೊತೆ ಚಿಕ್ಕಮಗಳೂರಿನ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿಗೆ ತೆರಳಿದ್ದರು. ಕೆಮ್ಮಣ್ಣುಗುಂಡಿ ವ್ಯೂವ್ ಪಾಯಿಂಟ್​ […]

ಫುಟ್ಬಾಲ್ ಪಂದ್ಯಾಟ ಹಾಗೂ ಈಜು ಸ್ಪರ್ಧೆ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ.

ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ ವಿಭಾಗ ) ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಕೋಟೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪದವಿ ಪೂರ್ವ ವಿಭಾಗದ ಬಾಲಕ – ಬಾಲಕಿಯರ ಫುಟ್ಬಾಲ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಸಂಜನಾ ಪೈ ಮತ್ತು ದಿವ್ಯ ಶ್ರೀ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಾಗೂ ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು […]