“ವೋಟ್ ಚೋರ್ ಗದ್ದಿ ಚೋಡ್” ಅಭಿಯಾನ ಉಡುಪಿ ಜಿಲ್ಲಾ ಕಾಂಗ್ರೆಸ್ ಬೆಂಬಲ

ಉಡುಪಿ: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶದಾದ್ಯಂತ ನಡೆಸುತ್ತಿರುವ “ವೋಟ್ ಚೋರ್ ಗದ್ದಿ ಚೋಡ್” ಅಭಿಯಾನಕ್ಕೆ ಭಾರೀ ಜನಬೆಂಬಲ ವ್ಯಕ್ತವಾಗಿದೆ. ಇದಕ್ಕೆ ಬೆಂಬಲವಾಗಿ ಉಡುಪಿ ಜಿಲ್ಲೆಯಲ್ಲಿರುವ 1111 ಬೂತ್ ಗಳಲ್ಲಿ ಸಹಿ ಅಭಿಯಾನ ಹಮ್ಮಿಕೊಂಡಿದ್ದು, ಪ್ರತಿ ಬೂತ್ ನಲ್ಲಿ ಕನಿಷ್ಠ 100 ಸಹಿ ಸಂಗ್ರಹ ಮಾಡಿ ಒಟ್ಟು 1,11,100 ಸಹಿ ಸಂಗ್ರಹಿಸಿ ರಾಹುಲ್ ಗಾಂಧಿ ಅವರಿಗೆ ಕಳುಹಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು. ಉಡುಪಿ ಕಾಂಗ್ರೆಸ್ ಭವನದಲ್ಲಿ ಇಂದು ನಡೆದ […]

ರಾಜ್ಯದ ಜನರಿಗೆ ಗುಡ್​​ ನ್ಯೂಸ್: ಸೆ.22ರಿಂದ ನಂದಿನಿ ಹಾಲಿನ ಉತ್ಪನ್ನಗಳ ದರ ಇಳಿಕೆ!

ಬೆಂಗಳೂರು: ಕೇಂದ್ರ ಸರ್ಕಾರ ಈಗಾಗಲೇ ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರ ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ನಂದಿನಿ ಮೊಸರು, ತುಪ್ಪ, ಬೆಣ್ಣೆ, ಚೀಸ್ ಸೇರಿ ಹಲವು ಉತ್ಪನ್ನಗಳ ಬೆಲೆ ಕಡಿಮೆಯಾಗಲಿದೆ. ಸೋಮವಾರದಿಂದಲೇ ಪರಿಷ್ಕೃತ ದರಗಳು ಜಾರಿಗೆ ಬರಲಿವೆ. ಕೇಂದ್ರ ಸರ್ಕಾರ ಸೆ.22ರಿಂದ ಅನ್ವಯವಾಗುವಂತೆ ಹಾಲಿನ ಉತ್ಪನ್ನಗಳ ಮೇಲಿನ ಸರಕು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಶೇ.12ರಿಂದ 5ಕ್ಕೆ ಇಳಿಕೆ ಮಾಡಿದೆ. ಇದರಿಂದ ನಂದಿನಿಯ ಕೆಲ ಉತ್ಪನ್ನಗಳ ದರ ಕಡಿಮೆಯಾಗಲಿದೆ. ಈ ಕುರಿತು ಶುಕ್ರವಾರ ಕೆಎಂಎಫ್‌ ಆಡಳಿತ ಮಂಡಳಿ ಮತ್ತು […]

ಸಾಹುಕಾರ ಕ್ಯಾನಿಂಗ್ ಪಿತ್ರೋಡಿ ಹಾಗೂ ಲಯನ್ಸ್ ಕ್ಲಬ್ ಉದ್ಯಾವರ: ಮಾಹಿತಿ ಶಿಬಿರ

ಉಡುಪಿ: ಸಾಹುಕಾರ ಕ್ಯಾನಿಂಗ್ ಪಿತ್ರೋಡಿ ಹಾಗೂ ಲಯನ್ಸ್ ಕ್ಲಬ್ ಉದ್ಯಾವರ ಇದರ ಸಹಯೋಗದಲ್ಲಿ ಸೆ. 19.ರಂದು ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಪ್ರಯುಕ್ತ ಶ್ರೀಧರ್ಮಸ್ಥಳ ಆಯುರ್ವೇದ ವೈದ್ಯಕೀಯ ಕಾಲೇಜು “ಕಾಯಾ ಚಿಕಿತ್ಸಾ ” ವಿಭಾಗದ ಸಹಯೋಗದೊಂದಿಗೆ ಆರೋಗ್ಯಕ್ಕಾಗಿ ಆಯುರ್ವೇದ ಇದರ ಬಗ್ಗೆ ಮಾಹಿತಿ ಶಿಬಿರ ಸಾಹುಕಾರ ಕ್ಯಾನಿಂಗ್ ಪಿತ್ರೋಡಿಯಲ್ಲಿ ನಡೆಯಿತು. ಡಾ. ಶ್ರೇಯಶ್ರೀ ಅಸಿಸ್ಟೆಂಟ್ ಪ್ರೋಫೆಸರ್ ಇವರು ಸ್ವಸ್ಥ ಅರೋಗ್ಯ ದ ಬಗ್ಗೆ ಮಾಹಿತಿ ನೀಡುತ್ತಾ ಮದ್ಯಪಾನ, ಧೂಮಪಾನ ದುಶ್ಚಟ ಮನುಷ್ಯನ ಆರೋಗ್ಯವನ್ನು ಹಾಳು ಮಾಡುತ್ತಿದ್ದುಲ್ಲದೆ ದಿನ ನಿತ್ಯ […]

ಇಂದಿನಿಂದ ರಾಜ್ಯದ ಎಲ್ಲಾ ಶಾಲಾಗಳಿಗೆ ದಸರಾ ರಜೆ ಘೋಷಣೆ

ಬೆಂಗಳೂರು: ಇಂದಿನಿಂದ ರಾಜ್ಯದ ಎಲ್ಲಾ ಶಾಲಾಗಳಿಗೆ ದಸರಾ ರಜೆ ಘೋಷಣೆ ಮಾಡಲಾಗಿದೆ. ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿಗಳ ದಸರಾ ರಜೆ ಇಂದು ಸೆಪ್ಟೆಂಬರ್ 20 ರಂದು ಆರಂಭ. ಮೈಸೂರು ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವವನ್ನು ಮಕ್ಕಳು ಸಹ ನೋಡಿ ಕಣ್ತುಂಬಿಕೊಳ್ಳಲಿ ಎಂದು ಶಿಕ್ಷಣ ಇಲಾಖೆ ನಾಳೆಯಿಂದ 18 ದಿನ ಸರ್ಕಾರಿ ಶಾಲೆಗಳಿಗೆ ಹಬ್ಬದ ರಜೆ ಘೋಷಿಸಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಇಂದು ಆದೇಶ ಹೊರಡಿಸಿದ್ದು, ಸೆ. […]

ಉಡುಪಿ ಸಿವಿಲ್ ಎಂಜಿನಿಯರ್ಸ್‌ ಅಸೋಸಿಯೇಶನ್ ಎಂಜಿನಿಯರ್ಸ್‌ ದಿನಾಚರಣೆ

ಉಡುಪಿ: ಉಡುಪಿ ಸಿವಿಲ್ ಎಂಜಿನಿಯರ್ಸ್‌ ಅಸೋಸಿಯೇಶನ್ (ಯುಸಿಇಎ) ವತಿಯಿಂದ ಕಿದಿಯೂರು ಹೊಟೇಲ್‌ನ ಅನಂತಶಯನ ಹಾಲ್‌ನಲ್ಲಿ ಬುಧವಾರ ಎಂಜಿನಿಯರ್ಸ್‌ ದಿನಾಚರಣೆ ನಡೆಯಿತು. ಮಂಗಳೂರು ಅಸೋಸಿಯೇಶನ್ ಆಫ್ ವ್ಯಾಲ್ಯುವರ್ಸ್‌‌ನ ಅಧ್ಯಕ್ಷ ಸತೀಶ್ ರಾವ್ ಮಾತನಾಡಿ, ಪ್ರಾಮಾಣಿಕತೆ, ನಿರ್ವಂಚನೆಯಿಂದ ಕೆಲಸ ಮಾಡಿದಾಗ ಸತ್ಫಲ ದೊರೆಯುವುದರಲ್ಲಿ ಸಂಶಯವಿಲ್ಲ. ಸದಾ ಖುಷಿಯಿಂದ, ಎಲ್ಲರೊಂದಿಗೂ ಪ್ರೀತಿಯಿಂದ ಇದ್ದು ಸಿಕ್ಕಿದ್ದನ್ನು ದಕ್ಕಿಸಿಕೊಂಡು, ಇದ್ದುದರಲ್ಲಿ ಸಂತೃಪ್ತಿ ಪಡುವ ಗುಣ ಬೆಳೆಸಿಕೊಳ್ಳಬೇಕು. ನಮ್ಮನ್ನು ದ್ವೇಷಿಸುವವರಿಗೂ ಒಳತನ್ನು ಮಾಡುವಂತೆ ಪರಮಾತ್ಮನಲ್ಲಿ ಪ್ರಾರ್ಥಿಸುವ ಗುಣ ಬೆಳೆಸಿಕೊಂಡರೆ ಬೆಳೆಯಬಹುದು ಎಂದರು. ಮಣಿಪಾಲದ ಡಿಪಾರ್ಟ್‌ಮೆಂಟ್ ಆಫ್ […]