ಕೊಂಕಣ್ ರೇಲ್ವೆ ಸಹಯೋಗದೊಂದಿಗೆ ಮಣಿಪಾಲದ MSDC ಯಿಂದ ತರಬೇತಿ ಕಾರ್ಯಕ್ರಮ

ಮಣಿಪಾಲ: ಡಾ. ಟಿಎಂಎ ಪೈ ಫೌಂಡೇಶನ್ ಆಡಳಿತಕ್ಕೊಳಪ್ಪಟ್ಟ ಮಣಿಪಾಲ ಕೌಶಲ್ಯ ಅಭಿವೃದ್ದಿ ಕೇಂದ್ರ (MSDC) ಕೊಂಕಣ್ ರೇಲ್ವೆ ಕೋರ್ಪರೇಶನ್ ಜಂಟಿಯಾಗಿ 100 ಕುಶಲಕರ್ಮಿಗಳಿಗೆ ಐದು ದಿನ ತರಬೇತಿ ಕಾರ್ಯಕ್ರಮವನ್ನು ಸೆಪ್ಟೆಂಬರ್ 15 ರಂದು ಹಮ್ಮಿಕೊಂಡಿತು. ತರಬೇತುದಾರರಿಗೆ ವಿಶೇಷ ಕ್ಲಾಸ್ ರೂಂ ಜೊತೆಗೆ ಪ್ರಾತ್ಯಕ್ಷಿಕೆ ತರಗತಿ, ಪ್ರಾಯೋಗಿಕ ತರಗತಿಗಳನ್ನೂ ಹಮ್ಮಿಕೊಳ್ಳಲಾಯಿತು. ತಂತ್ರಜ್ಞಾನವನ್ನೂ ಅಳವಡಿಸಿ ಮಾಹಿತಿ ನೀಡಲಾಯಿತು. ಎಂ.ಎಸ್.ಡಿ.ಸಿ ಅಧ್ಯಕ್ಷರಾದ ಡಾ.ಸುರ್ಜಿತ್ ಸಿಂಗ್ ಪಾಬ್ಲಾ, ಸಂಸ್ಥೆಯ ಉದ್ದೇಶಗಳು ಮತ್ತು ಸೌಲಭ್ಯಗಳ ಕುರಿತು ಮನನೀಯ ಅವಲೋಕನವನ್ನು ನೀಡಿದರು.ಕೆ.ಆರ್.ಸಿ.ಎಲ್ ಪ್ರಶಿಕ್ಷಣ ಮತ್ತು ಅಭಿವೃದ್ಧಿ […]
ಕಾರ್ಕಳ: ಕುದುರೆಮುಖ ವನ್ಯಜೀವಿ ವಿಭಾಗದ ಅಧೀಕ್ಷಕ ಹರಿಪ್ರಸಾದ್ ನಿಧನ

ಕಾರ್ಕಳ: ಅರಣ್ಯ ಇಲಾಖೆ ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ ಕೇಂದ್ರ ಕಚೇರಿಯ ಅಧೀಕ್ಷಕರಾಗಿದ್ದ ಹರಿಪ್ರಸಾದ್ (58) ಅವರು ಸೆ. 19ರಂದು ಬೆಳಿಗ್ಗೆ ನಿಧನ ಹೊಂದಿದರು. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆಯಲ್ಲಿದ್ದರು. ಅರಣ್ಯ ಇಲಾಖೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಹರಿಪ್ರಸಾದ್ ವಿವಿಧ ಹುದ್ದೆಗಳನ್ನು ನಿಭಾಯಿಸಿ, ಅಧೀಕ್ಷಕರ ಹುದ್ದೆಗೆ ಪದೋನ್ನತಿ ಹೊಂದಿದ್ದರು. ಕರ್ತವ್ಯನಿಷ್ಠೆಯುಳ್ಳ ಅಧಿಕಾರಿಯಾಗಿದ್ದ ಅವರು ಸಹೋದ್ಯೋಗಿಗಳ ಮೆಚ್ಚುಗೆ ಪಡೆದಿದ್ದರು. ಮೃತರು ಬೆಳ್ತಂಗಡಿ ತಾಲೂಕಿನ ವೇಣೂರು ಮೂಲದವರಾಗಿದ್ದು, ಪ್ರಸ್ತುತ ಕಾರ್ಕಳ ಕಂಬಳಬೆಟ್ಟುವಿನಲ್ಲಿ ವಾಸವಿದ್ದರು. ಪತ್ನಿ, ಪುತ್ರ ಹಾಗೂ ಪುತ್ರಿಯನ್ನು […]
ಸಿದ್ದಾಪುರ: ಚಾತ್ರ ಎಂಟರ್ಪ್ರೈಸಸ್ ಮಾಲಕ ಉದಯ ಚಾತ್ರ ಆತ್ಮಹತ್ಯೆ

ಕುಂದಾಪುರ: ಕಮಲಶಿಲೆ ಗ್ರಾಮದ ಬರೆಗುಂಡಿ ನಿವಾಸಿ, ಸಿದ್ದಾಪುರ ಚಾತ್ರ ಎಂಟರ್ಪ್ರೈಸಸ್ ಮಾಲಕ ಉದಯ ಚಾತ್ರ (43) ಅವರು ಸೆ.17ರಂದು ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡ ಘಟನೆ ನಡೆದಿದೆ. ಉದಯ ಚಾತ್ರ ಅವರು ಮೃದು ಭಾಷಿಗರಾಗಿದ್ದು, ಎಲ್ಲಾರೊಂದಿಗೆ ಚೆನ್ನಾಗಿ ಬೇರೆಯುತ್ತಿದ್ದರು. ತನ್ನ ನಿವಾಸವಾಗಿದ್ದ ಬರೆಗುಂಡಿಯಿಂದ ಸೆ. 17ರಂದು ತನ್ನ ತಂದೆ, ತಾಯಿ ಹಾಗೂ ಪತ್ನಿಯ ಜತೆಯಲ್ಲಿ ಕಮಲಶಿಲೆಯಲ್ಲಿ ನಡೆಯುತ್ತಿದ್ದ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಗೆ ಬಂದಿದ್ದರು. ತಂದೆ, […]
ಜಪಾನ್ ನ ವಿಲ್ ಡಿಸೈನ್ ಸಂಸ್ಥೆಯ ಸಹಯೋಗದೊಂದಿಗೆ ನಿಟ್ಟೆಯಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನೆ

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸೈಬರ್ ಸೆಕ್ಯೂರಿಟಿ ವಿಭಾಗವು ಜಪಾನಿನ ವಿಲ್ ಡಿಸೈನ್ ಸಹಯೋಗದೊಂದಿಗೆ ಉತ್ಕೃಷ್ಟತಾ ಕೇಂದ್ರವನ್ನು ಕ್ಯಾಂಪಸ್ ನಲ್ಲಿ ಸ್ಥಾಪಿಸಿ ಸೆ.೧೫ ರಂದು ಅದನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳಲ್ಲಿ ನಾವೀನ್ಯತೆ, ಸೃಜನಶೀಲತೆ ಮತ್ತು ನೇರ ಕಲಿಕೆಯನ್ನು ಬೆಳೆಸಲು ಈ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ.ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ಭಾಗವಹಿಸಿದ್ದರು. ವಿಲ್ ಡಿಸೈನ್ ಜಪಾನ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೋಟಾಕಾ ತಗುಚಿ; ಮುಖ್ಯ ಕಾರ್ಯನಿರ್ವಹಣಾಧಿಕಾರಿ […]
ಅಬ್ಬಕ್ಕಳ ಧೈರ್ಯ, ಸಾಹಸ ಆದರ್ಶವಾಗಬೇಕು – ವಸಂತ್ ಕುಮಾರ್

ಉಡುಪಿ: ರಾಣಿ ಅಬ್ಬಕ್ಕರವರ ಬದುಕಿನ ಬಗೆಗೆ ಇಂದಿನ ಯುವಪೀಳಿಗೆ ಅರಿತು, ಅವರ ಧೈರ್ಯ, ಸಾಹಸ, ದೇಶಪ್ರೇಮವನ್ನು ತಮ್ಮೊಳಗೆ ಮೈಗೂಡಿಸಿಕೊಳ್ಳಬೇಕು ಎಂದು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ| ವಸಂತ್ ಕುಮಾರ್ ಅಭಿಪ್ರಾಯಪಟ್ಟರು. ಅವರು ಗುರುವಾರ, ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ಹಾಗೂ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘದ ಜಂಟಿ ಆಶ್ರಯದಲ್ಲಿ ನಡೆದ “ರಾಣಿ ಅಬ್ಬಕ್ಕ – ಯುಗಯುಗಗಳಿಂದ ಧೈರ್ಯದ ಪ್ರತಿಧ್ವನಿ” ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಣಿ ಅಬ್ಬಕ್ಕೆ ಮೂಡಬಿದ್ರೆಯ ಚೌಟ ಮನೆತನಕ್ಕೆ ಸೇರಿದವರಾಗಿದ್ದು, 1525 […]