ಮೂಡುಬಿದಿರೆ:36ನೇ ದಕ್ಷಿಣ ವಲಯ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ: ಆಳ್ವಾಸ್‌ನ 29 ಕ್ರೀಡಾಪಟುಗಳು ಆಯ್ಕೆ

ಮೂಡುಬಿದಿರೆ: ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ಆಂಧ್ರಪ್ರದೇಶ ಅಥ್ಲೆಟಿಕ್ಸ್ ಸಂಸ್ಥೆಯ ಸಹಯೋಗದಲ್ಲಿ ಆಂಧ್ರಪ್ರದೇಶದ ಗುಂಟೂರುನಲ್ಲಿ ಸೆಪ್ಟೆಂಬರ್ 23ರಿಂದ 25ರವರೆಗೆ ನಡೆಯುತ್ತಿರುವ 36ನೇ ದಕ್ಷಿಣ ವಲಯ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ 29 ಮಂದಿ ಕ್ರೀಡಾಪಟುಗಳು ಭಾಗವಹಿಸಲು ಆಯ್ಕೆಯಾಗಿದ್ದಾರೆ. ಒಂದೇ ಸಂಸ್ಥೆಯಿಂದ 29 ಕ್ರೀಡಾಪಟುಗಳು ಸ್ಪರ್ಧೆಗೆ ಅವಕಾಶ ಪಡೆದಿರುವುದು ಉಲ್ಲೇಖಾರ್ಹ ಸಾಧನೆಯಾಗಿದೆ. ಇವರಲ್ಲಿ 10 ಮಂದಿ ಬಾಲಕಿಯರು ಹಾಗೂ 19 ಮಂದಿ ಬಾಲಕರು ವಿವಿಧ ವಿಭಾಗಗಳಲ್ಲಿ ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ. ಬಾಲಕಿಯರ […]
ರಾಜ್ಯ ಸರ್ಕಾರ ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದೆ: ಸಂಸದ ಕೋಟ

ಉಡುಪಿ: ಕಾಂತರಾಜ್ ವರದಿಯನ್ನು ಈ ಸರ್ಕಾರ ತಿರಸ್ಕರಿಸಲೂ ಇಲ್ಲ.. ಅಂಗೀಕರಿಸಿಯೂ ಇಲ್ಲ, ಈಗ ಮತ್ತೊಮ್ಮೆ ಹೊಸ ವರದಿಗೆ ಸಿದ್ದರಾಮಯ್ಯ ಸರ್ಕಾರ ಹೊರಟಿದೆ. 42 ರಿಂದ 50 ಜಾತಿಯ ಜೊತೆ ಕ್ರಿಶ್ಚಿಯನ್ ಎಂಬ ಪದ ಸೇರಿಸಿದ್ದಾರೆ. ಇದರ ಬಗ್ಗೆ ನಮ್ಮ ಕಠಿಣವಾದ ವಿರೋಧ ಇದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಲಿಂಗಾಯಿತ ಕ್ರಿಶ್ಚಿಯನ್ ,ಒಕ್ಕಲಿಗ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್ ,ಈಡಿಗ ಕ್ರಿಶ್ಚಿಯನ್ ,ಮಡಿವಾಳ ಕ್ರಿಶ್ಚಿಯನ್..ಹೀಗೆ ಜಾತಿಯ ಜೊತೆ […]
ಉಡುಪಿ:ಮಾಹೆ ಮಣಿಪಾಲ ಸುಶ್ರಾವ್ಯ ತಂಡದಿಂದ ರಾಜಾಂಗಣದಲ್ಲಿ ಕಾರ್ಯಕ್ರಮ

ಉಡುಪಿ:ಮಾಹೆ ಮಣಿಪಾಲ ಇದರ ವಿವಿಧ ಅಂಗಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕ ವೃಂದದ ಶಾಸ್ತ್ರೀಯ ಸಂಗೀತ ಕಾರರ ತಂಡವಾದ ಸುಶ್ರಾವ್ಯ ಸಂಘಟನೆಯಿಂದ ಉಡುಪಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಜರಗುತ್ತಿದ್ದ 48 ದಿನಗಳ ಮಂಡಲೊತ್ಸವ ಕಾರ್ಯಕ್ರಮದಲ್ಲಿ ತಾರೀಕು 16.09.2025 ರಂದು ಶಾಸ್ತ್ರೀಯ ಸಂಗೀತ ಕಚೇರಿ ನೆರವೇರಿತು. ಹಾಡುಗಾರಿಕೆಯಲ್ಲಿ ಎಂಐಟಿಯ ಡಾ. ವಿದ್ಯಾ ಎಸ್ ರಾವ್ ಡಾ. ಭಾಗ್ಯ ,ಡಾ. ರಮ್ಯಾ ಡಾ. ಶಿಲ್ಪ ಡಾ. ಚೈತ್ರ ಪ್ರೊ. ಸೌಮ್ಯ , ಪ್ರೊ. ರಜಿತ ಭಾಗವಹಿಸಿದರು. ಹಿಮ್ಮೇಳದಲ್ಲಿ ಕೆ.ಎಂಸಿ ಯ […]
ಉಡುಪಿ:ಬಹರೈನ್ ಹಾಗೂ ಮಸ್ಕತ್ ನಲ್ಲಿ ಸ್ಕೂಲ್ ಲೀಡರ್ ಚಿತ್ರ ಬಿಡುಗಡೆ

ಉಡುಪಿ:ಕರಾವಳಿಯಾದ್ಯಂತ ಬಿಡುಗಡೆಗೊಂಡು ಭರ್ಜರಿ ಯಶಸ್ಸು ಕಂಡ ಸೂಪರ್ ಹಿಟ್ ಕನ್ನಡ ಚಲನ ಚಿತ್ರ ಇದೀಗ ಮಸ್ಕತ್ ಹಾಗೂ ಬಹರೈನ್ ನಲ್ಲಿ ಏಕ ಕಾಲಕ್ಕೆ ಬಿಡುಗಡೆಯಾಗಲಿದೆ. ಕರಾವಳಿ ಸೊಗಡಿನ ಈ ಚಿತ್ರವು ಅರೇಬಿಯನ್ ನೆಲದಲ್ಲಿ ಕನ್ನಡದ ಕಂಪನ್ನು ಚೆಲ್ಲಲು ವೇದಿಕೆ ಸಿದ್ಧವಾಗಿದೆ.ಮಸ್ಕತ್ ಕರ್ನಾಟಕ ಜಾನಪದ ಪರಿಷತ್ತು ನ ಅಧ್ಯಕ್ಷ ಶಿವಾನಂದ ಕೋಟ್ಯಾನ್ ಹಾಗೂ ಬಹರೈನ್ ಕನ್ನಡ ಸಂಘಟನೆಯ ಅಜಿತ್ ಬಂಗೇರ ಕುರ್ಕಾಲು ಇವರ ಸಾರಥ್ಯದಲ್ಲಿ ಸೆಪ್ಟೆಂಬರ್ 19 ರಿಂದ ಸ್ಕೂಲ್ ಲೀಡರ್ ಚಿತ್ರವು ವಿದೇಶದಲ್ಲಿ ಪ್ರದರ್ಶನ ಕಾಣಲಿದೆ. ಕರಾವಳಿ […]
ಅ. 24ರಂದು ಬೆಹರೆನ್ನಲ್ಲಿ ತನುಶ್ರೀ ದಾಖಲೆಯ ಯೋಗ ಸಾಧನೆ.

ಉಡುಪಿ: ಸೈಂಟ್ ಸಿಸಿಲಿ ದ್ವೀತಿಯ ಪಿಯುಸಿ ವಿದ್ಯಾರ್ಥಿನಿ ತನುಶ್ರೀ ಪಿತ್ರೋಡಿ ಅ.24ರಂದು ಬೆಹರೆನ್ ಕನ್ನಡ ಸಂದಲ್ಲಿ 1 ಗಂಟೆಯಲ್ಲಿ 300 ಯೋಗಾಸನಗಳನ್ನು ಪ್ರದರ್ಶಿಸುವ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಲಿದ್ದಾರೆ ಎಂದು ತಂದೆ ಉದಯ್ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈಗಾಗಲೇ 2023ರಲ್ಲಿ 45 ನಿಮಿಷದಲ್ಲಿ 245 ಯೋಗಾಸನ ಪ್ರದರ್ಶನ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ದಾಖಲಿಸಿದ್ದಾರೆ. ಈಗ ತನ್ನದೇ ದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸಲು ಅಣಿಯಾಗಿದ್ದು, ವಿದೇಶದಲ್ಲಿ ಮೊದಲ ಸಾಧನೆ ಮಾಡಲಿದ್ದಾರೆ. […]