ಉಡುಪಿ:ಕಟಪಾಡಿಯಲ್ಲಿ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ

ಕಾಪು:ಕಾಪು ಫ್ರೆಂಡ್ಸ್ ಕ್ರಿಕೆಟರ್ಸ್,ಕಾಪು ಇವರ ವತಿಯಿಂದ ಜಿತೇಂದ್ರ ಜೆ ಶೆಟ್ಟಿ ಪಡುಬಿದ್ರಿ ಅವರ ಅಧ್ಯಕ್ಷತೆಯಲ್ಲಿ ಅನಿತ ಶೆಟ್ಟಿ ಕಾಪು ಇವರ ಮುಂದಾಳತ್ವದಲ್ಲಿ 5 ನೆ ಬಾರಿಗೆ ಅಂತರ್ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಕೂಟ ಈ ವರ್ಷ ಕಟಪಾಡಿ ಪಳ್ಳಿ ಗುಡ್ಡೆ ಮೈದಾನದಲ್ಲಿ ಹಗಲು ರಾತ್ರಿ ಕ್ರಿಕೆಟ್ ಕೂಟವಾಗಿ ನಡೆಯಲಿದ್ದು, ಈ ಪಂದ್ಯ ಕೂಟದಲ್ಲಿ ಕರ್ನಾಟಕದ ಪ್ರತಿಷ್ಠಿತ 8ತಂಡಗಳು ಹಾಗೂ ಸ್ಥಳೀಯವಾಗಿ 12ತಂಡಗಳು ಸೆಣಸಾಟ ನಡೆಸಲಿದೆ. ಈ ಟೂರ್ನಮೆಂಟ್ ಒಶಿಯನ್ ಟ್ರೋಫಿ 2025 ಎನ್ನುವ ಹೆಸರಿನಲ್ಲಿ ನವೆಂಬರ್ ತಿಂಗಳ […]
ವಿಜಯಪುರ: ಬ್ಯಾಂಕ್ ಸಿಬ್ಬಂದಿಗೆ ಗನ್ ತೋರಿಸಿ ಕೋಟಿಗಟ್ಟಲೇ ಲೂಟಿ!

ವಿಜಯಪುರ: ನೆರೆಯ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮಂಗಳವಾರ ಸಂಜೆ 7 ಗಂಟೆಗೆ ಏಳೆಂಟು ಮುಸುಕುದಾರಿ ದರೋಡೆಕೋರರು ಪಿಸ್ತೂಲ್ ಮತ್ತು ಮಾರಕಾಸ್ತ್ರಗಳನ್ನು ತೋರಿಸಿ, ಬ್ಯಾಂಕಿನ ಸಿಬ್ಬಂದಿಯ ಕೈಕಾಲು ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ. ಅಂದಾಜು ₹8 ಕೋಟಿ ನಗದು, 50 ಕೆ.ಜಿ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಬ್ಯಾಂಕಿನ ಸಿಬ್ಬಂದಿ, ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.ಆದರೆ, ಖಚಿತ ಮಾಹಿತಿ ಇನ್ನೂ ಲಭಿಸಿಲ್ಲ. ಚಡಚಣ ಪಟ್ಟಣದ ಪಂಢರಪುರ ಮುಖ್ಯರಸ್ತೆಯಲ್ಲಿರುವ ಜನ ನಿಬಿಡ […]
ವಿರೋಧ ಪಕ್ಷದ ಸದಸ್ಯರ ಕ್ಷೇತ್ರ ಅಭಿವೃದ್ದಿಗೆ ರೂ.25 ಕೋಟಿ ಬಿಡುಗಡೆಗೊಳಿಸಿದ ರಾಜ್ಯ ಸರಕಾರ

ಬೆಂಗಳೂರು: ವಿಧಾನಸಭೆಯ ವಿರೋಧ ಪಕ್ಷದ ಸದಸ್ಯರ ಕ್ಷೇತ್ರದ ಅಭಿವೃದ್ಧಿಗೆ ತಲಾ 25 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲು ರಾಜ್ಯ ಸರಕಾರ ಮುಂದಾಗಿದೆ. ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಹಣ ಬಿಡುಗಡೆ ಮಾಡಲಾಗುತ್ತಿದ್ದು, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಅಡಿ ಬರುವ ರಸ್ತೆ, ಸೇತುವೆ ಹಾಗೂ ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯ ನಗರ ಪ್ರದೇಶ ಕಾಮಗಾರಿಗಳಿಗೆ 18.75 ಕೋಟಿ ರೂ. ಬಿಡುಗಡೆ. ಅದೇ ರೀತಿ, ವಿವೇಚನಾಧಿಕಾರದಡಿ ವಿಧಾನಸಭೆ ಸದಸ್ಯರು ಆಯ್ಕೆ ಮಾಡಬಹುದಾದ ಇತರ ಇಲಾಖೆ ಕಾಮಗಾರಿಗಳಿಗೆ 6.25 ಕೋಟಿ ರೂ. […]
Mister India Heritage 2025 ಸ್ಪರ್ಧೆ: ಪ್ರಥಮ ರನ್ನರ್-ಅಪ್ ಪ್ರಶಸ್ತಿ ಮುಡಿಗೇರಿಸಿಕೊಂಡ ರಂಜಿತ್ ಗಾಣಿಗ

ಉಡುಪಿ: ಉಡುಪಿ ಜಿಲ್ಲೆಯ ಉಪ್ಪೂರು, ತೆಂಕಬೆಟ್ಟು ಮೂಲದ ರಂಜಿತ್ ಗಾಣಿಗ ಅವರು ಕರ್ನಾಟಕವನ್ನು ಪ್ರತಿನಿಧಿಸಿ Mister India Heritage 2025 ಸ್ಪರ್ಧೆಯಲ್ಲಿ ಪ್ರಥಮ ರನ್ನರ್-ಅಪ್ ಸ್ಥಾನವನ್ನು ಪಡೆದು ರಾಜ್ಯದ ಗೌರವವನ್ನು ಹೆಚ್ಚಿಸಿದ್ದಾರೆ. ಗೋವಾದಲ್ಲಿ ಆರು ದಿನಗಳ ಕಾಲ ನಡೆದ ಈ ಪ್ರತಿಷ್ಠಿತ ರಾಷ್ಟ್ರೀಯ ವೇದಿಕೆಯಲ್ಲಿ ಅವರು ತಮ್ಮ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆಯುವುದರ ಜೊತೆಗೆ, Best Physique ಹಾಗೂ Best Personality ಎಂಬ ಎರಡು ವಿಶೇಷ ಪ್ರಶಸ್ತಿಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.ಈ ಸಾಧನೆಯೊಂದಿಗೆ, ರಂಜಿತ್ ಗಾಣಿಗ ಅವರು […]
ಉಡುಪಿ:ಟೆಲಿಕಾಲಿಂಗ್ ಕೆಲಸಕ್ಕೆ ಯುವತಿಯರು ಬೇಕಾಗಿದ್ದಾರೆ.

ಉಡುಪಿ:ಟೆಲಿಕಾಲಿಂಗ್ ಕೆಲಸಕ್ಕೆ ಯುವತಿಯರು (ಅವಿವಾಹಿತರು)ಬೇಕಾಗಿದ್ದಾರೆ. ▪ಉತ್ತಮ ಮಾತುಗಾರಿಕೆ ಉಳ್ಳ ಯುವತಿಯರು. (ಅವಿವಾಹಿತರು)▪ಕನ್ನಡ ಮತ್ತು ತುಳು ಭಾಷೆಯಲ್ಲಿ ಮಾತನಾಡಬೇಕು.▪ ಕನಿಷ್ಟ ಸಾಮಾಜಿಕ ಜ್ಞಾನ ಹೊಂದಿರಬೇಕು.▪ಟೆಲಿಕಾಲಿಂಗ್‌ನಲ್ಲಿ ಅನುಭವಸ್ತರಿಗೆ ಮೊದಲ ಅವಕಾಶ.▪ ವೇತನದ ಜೊತೆಗೆ ಕಮಿಷನ್ ನೀಡಲಾಗುವುದು.▪ ಉಡುಪಿ ಆಸುಪಾಸಿನವರಿಗೆ ಹೆಚ್ಚಿನ ಆದ್ಯತೆ. ಸಂಪರ್ಕಿಸಿ:+91 6366192285